ಕಾಸರಗೋಡು: ಮುಂಡೋಳು ಶ್ರೀ ಮಹಾವಿಷ್ಣು ದುರ್ಗಾಪರಮೇಶ್ವರಿ ಶಾಸ್ತಾರ ದೇವಸ್ಥಾನ ಕಾರಡ್ಕ ಮುಳ್ಳೇರಿಯ ಇಲ್ಲಿ ಶರನ್ನವರಾತ್ರಿ ಮಹೋತ್ಸವದ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಶುಕ್ರವಾರ (ಅ.20) ಮಧ್ಯಾಹ್ನ 12.00 ಘಂಟೆಯಿಂದ ಡಾ. ವಾಣಿಶ್ರೀ ಕಾಸರಗೋಡು ನೇತೃತ್ವದ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಘ (ರಿ.) ಕಾಸರಗೋಡು ಸಂಸ್ಥೆಯ ವತಿಯಿಂದ ಸಾಹಿತ್ಯ ಗಾನ ನೃತ್ಯ ವೈಭವ ನಡೆಯಿತು.
ಕಾರ್ಯಕ್ರಮದ ಸಂಪೂರ್ಣ ನಿರೂಪಣೆಯನ್ನು ಸಾಹಿತ್ಯ ಪ್ರಸ್ತುತಿ ಸಹಿತ ಡಾ. ವಾಣಿಶ್ರೀ ಕಾಸರಗೋಡು ನೆರವೇರಿಸಿದರು. ಸಂಸ್ಥೆಯ ಕಲಾಕುಸುಮಗಳಾದ ಗುರುರಾಜ್ ಕಾಸರಗೋಡು, ಜ್ಞಾನ ರೈ ಪುತ್ತೂರು, ಅಹನಾ ಎಸ್ ರಾವ್, ಹರೀಶ್ ಪಂಜಿಕಲ್ಲು, ರಕ್ಷಿತಾ ಕೆ ರಾವ್, ವಿಜಿತಾ ಕೇಶವನ್, ಆಜ್ಞಾ ರೈ ಪುತ್ತೂರು, ರಚಿತಾ ಕೆ ರಾವ್, ಚೈತ್ರಾ ಎಡನೀರ್, ಪ್ರಜ್ಞಾ ರಾವ್, ಪ್ರಭಾವತಿ ಮುಂತಾದವರು ಭಾಗವಹಿಸಿದರು.
ದೇವಸ್ಥಾನದ ಅನುವಂಶಿಕ ಮುಕ್ತೇಸರರಾದ ರಘುರಾಮ್ ಬಲ್ಲಾಳ್, ಪುತ್ತೂರಿನ ಉದ್ಯಮಿ ಜಯರಾಮ ರೈ ಕುರಿಯ, ಶ್ರೀಮತಿ ಹೇಮಾ ಜಯರಾಮ್ ಮೊದಲಾದ ಗಣ್ಯರ ಉಪಸ್ಥಿತಿಯಲ್ಲಿ ಭಾಗವಹಿಸಿದ ಎಲ್ಲಾ ಕಲಾವಿದರಿಗೆ ಸಂಸ್ಥೆಯ ವತಿಯಿಂದ ಗೌರವ ಸ್ಮರಣಿಕೆ ನೀಡಿ ಪುರಸ್ಕರಿಸಲಾಯಿತು. ದೇವಸ್ಥಾನದ ಆಡಳಿತ ವರ್ಗದ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದ ನಂತರ ದೇವಸ್ಥಾನದ ವತಿಯಿಂದ ಶ್ರೀ ದೇವರ ಪ್ರಸಾದ ನೀಡಿ ಶುಭ ಕೋರಿದರು.
ವರದಿ: ಗುರುರಾಜ್ ಕಾಸರಗೋಡು
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ