ಕಾಸರಗೋಡಿನಲ್ಲಿ ಅ.8ರಂದು "ಕನ್ನಡ ಕಲರವ" ಸಾಂಸ್ಕೃತಿಕ ಉತ್ಸವ

Upayuktha
0




ಕಾಸರಗೋಡು: ಕರ್ನಾಟಕ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನ ಮಂಗಳೂರು ಆಶ್ರಯದಲ್ಲಿ ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರ ಸಹಯೋಗದೊಂದಿಗೆ ಕನ್ನಡ ಕಲರವ ಸಾಂಸ್ಕೃತಿಕ ಕಾರ್ಯಕ್ರಮ ಅ. 08 ರಂದು ಭಾನುವಾರ ಬೆಳಿಗ್ಗೆ 9:00 ರಿಂದ ರಾತ್ರಿ 9 ತನಕ ಕಾಸರಗೋಡಿನ ಹೋಟೆಲ್ ಉಡುಪಿ ಗಾರ್ಡನ್ ಸಭಾಂಗಣದಲ್ಲಿ ನಡೆಯಲಿದೆ.       


ಕಾರ್ಯಕ್ರಮವನ್ನು ವಕೀಲ ಮತ್ತು ಕಾಂಗ್ರೆಸ್ ಮುಖಂಡ ಎಂ. ಗುರುಪ್ರಸಾದ್ ಮಂಡ್ಯ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು KSSAP ಅಧ್ಯಕ್ಷೆ ರಾಣಿ ಪುಷ್ಪಲತಾ ದೇವಿ ವಹಿಸಲಿದ್ದು ಮುಖ್ಯ ಅತಿಥಿಗಳಾಗಿ ಕಾಸರಗೋಡು ವಿಧಾನಸಭಾ ಕ್ಷೇತ್ರದ ಶಾಸಕ ಎನ್.ಎ ನೆಲ್ಲಿಕುನ್ನು, ಮಂಜೇಶ್ವರ G.P.M.C. ಪ್ರಾಧ್ಯಾಪಕ ಶಿವಶಂಕರ್, ಬಿಇಎಂ ಪ್ರೌಢಶಾಲೆಯ ಸಾರ್ವಜನಿಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಕೆ.ಎನ್. ವೆಂಕಟ್ರಮಣ ಹೊಳ್ಳ, ಹೊಟೇಲ್ ಉಡುಪಿ ಗಾರ್ಡನ್ ಮಾಲಕ ರಾಮಪ್ರಸಾದ್ ಕಾಸರಗೋಡು ಮುಂತಾದವರು ಭಾಗವಹಿಸಲಿದ್ದಾರೆ.  


ಇದೇ ಸಂದರ್ಭದಲ್ಲಿ ಸಮಾಜ ಸೇವೆಗಾಗಿ ಝುಲ್ಫಿಕರ್ ಆಲಿ, ಮಾಧ್ಯಮ ಕ್ಷೇತ್ರದಲ್ಲಿ ಗಂಗಾಧರ್ ಯಾದವ್, ಕನ್ನಡ ಸೇವೆಗಾಗಿ ಶಿವರಾಮ ಕಾಸರಗೋಡು ಇವರಿಗೆ ಸನ್ಮಾನ ನಡೆಯಲಿದೆ. 


ಅಲ್ಲದೆ "ಕಾಸರಗೋಡಿನಲ್ಲಿ ಕನ್ನಡ ಹೋರಾಟ" ವಿಚಾರದ ಕುರಿತಾಗಿ ರಾಧಾಕೃಷ್ಣ ಉಳಿಯತಡ್ಕ ಹಾಗೂ "ಕಾಸರಗೋಡಿನಲ್ಲಿ ಕನ್ನಡದ ಸ್ಥಿತಿಗತಿ" ಈ ವಿಚಾರದ ಕುರಿತಾಗಿ ಎಸ್.ಎನ್.ಭಟ್ ಸೈಪಂಗಲ್ ಉಪನ್ಯಾಸ ನೀಡಲಿದ್ದಾರೆ.


ಡಾ. ಬೇ.ಸಿ. ಗೋಪಾಲಕೃಷ್ಣ ಏತಡ್ಕ ಇವರ ಅಧ್ಯಕ್ಷತೆಯಲ್ಲಿ ರಾಜ್ಯಮಟ್ಟದ ಕವಿಗೋಷ್ಠಿ ನಡೆಯಲಿಕ್ಕಿದೆ. ಕವಿಗೋಷ್ಠಿಯಲ್ಲಿ ರುದ್ರಮ್ಮ ಎಸ್. ವಜ್ರಬಂಡಿ ರಾಯಚೂರು, ಉಮಾದೇವಿ ಬಸನಗೌಡ ರಾಯಚೂರು, ಮಲ್ಲಿಕಾ ಎಂ. ಜಾಲವಾಡಗಿ ರಾಯಚೂರು, ಬೀರಪ್ಪ ಶಂಭೋಜಿ ಸಿಂಧನೂರ ರಾಯಚೂರು, ಅಂಬಿಕಾ ಗುಂಡಪ್ಪ ರಾಯಚೂರ, ಮುತ್ತಕ್ಕ ಬೆನಕನಹಳ್ಳಿ ಹಾವೇರಿ, ಬಸಮ್ಮ ಹಿರೇಮಠ ರಾಯಚೂರು, ಕು| ಪ್ರಣತಿ ಎನ್, ಶ್ರೀ ವೆಂಕಟ ಭಟ್ ಎಡನೀರು, ನರಸಿಂಹ ಭಟ್ ಏತಡ್ಕ, ಜಿ. ವೀರೇಶ್ವರ ಭಟ್ ಕರ್ಮಕರ್,  ಹಮೀದ್ ಹಸನ್ ಮಾಡೂರು, ಡಾ. ವಾಣಿಶ್ರೀ ಕಾಸರಗೋಡು, ಗುರುರಾಜ್  ಕಾಸರಗೋಡು, ವಿರಾಜ್ ಅಡೂರು, ಶ್ರೀಮತಿ ಸುಶೀಲ ಪದ್ಯಾಣ ನೀರ್ಚಾಲು, ಶ್ರೀಮತಿ ಪದ್ಮಾವತಿ ಕೆದಿಲಾಯ, ನರೇಂದ್ರ ಕುಮಾರ್ ಕೆ ಬೇಕಲಕೋಟೆ, ಗಿರೀಶ್ ಪಿ.ಎಂ ಚಿತ್ತಾರಿ, ಉಮೇಶ ಶಿರಿಯ, ಶ್ರೀಮತಿ ಸೌಮ್ಯ ಆರ್ ಶೆಟ್ಟಿ ಕುಂಜತ್ತೂರು, ರೇಖಾ ರೋಶನ್ ಆಣಂಗೂರು ಕಾಸರಗೋಡು, ಗಂಗಾಧರ್ ಗಾಂಧಿ ಸಹಿತ ರಾಜ್ಯದ ವಿವಿಧ ಜಿಲ್ಲೆಗಳಿಂದ ಕವಿಗಳು ಭಾಗವಹಿಸಲಿದ್ದಾರೆ.


ತದನಂತರ  ಸೌಮ್ಯ ಶ್ರೀಕಾಂತ್ ಮತ್ತು ಸೌರಮ್ಯ ಸೈಜು ಮಧೂರು ತಂಡದವರಿಂದ ನಾಟ್ಯ ಸಿಂಚನ ನಡೆಯಲಿದೆ. ಡಾ| ವಾಣಿಶ್ರೀ ಕಾಸರಗೋಡು ಮತ್ತು ಗುರುರಾಜ್ ನೇತೃತ್ವದ ಗಡಿನಾಡ ಸಾಂಸ್ಕೃತಿಕ ಸಂಘ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಶ್ರೀರಕ್ಷಾ ಸರ್ಪಂಗಳ ಮತ್ತು ತಂಡದವರಿಂದ ಗೀತ ಗಾಯನ ಹಾಗೂ ಸಮೂಹ ಗಾಯನ ನಡೆಯಲಿದೆ ಎಂದು KSSAP ಕಾರ್ಯದರ್ಶಿ ಕಲಾವತಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ


web counter 


إرسال تعليق

0 تعليقات
إرسال تعليق (0)
To Top