ಕಬಕದ ಶಿಕ್ಷಕಿ ಶಾಂತರವರಿಗೆ ಕಾಸರಗೋಡು ದಸರಾ ಸಾಧಕ ಸನ್ಮಾನ

Upayuktha
0



ಪಾಂಗೋಡು: ಬೊಳುವಾರು ನಿವಾಸಿ ಸರಕಾರಿ ಪ್ರೌಢಶಾಲೆ ಕಬಕದ ಶಿಕ್ಷಕಿ ಶಾಂತ ಪುತ್ತೂರುರವರಿಗೆ ಕಾಸರಗೋಡು ದಸರಾ ಸಾಧಕ ಸನ್ಮಾನ ನೀಡಿ ಗೌರವಿಸಲಾಯಿತು.



ಪಾಂಗೋಡು ಶ್ರೀ ದುರ್ಗಾಪರಮೇಶ್ವರಿ ಶ್ರೀ ಸುಬ್ರಮಣ್ಯ ದೇವಸ್ಥಾನ ಸಾಂಸ್ಕೃತಿಕ ಘಟಕ (ರಿ) ಸೀತಮ್ಮ ಪುರುಷನಾಯಕ ಸ್ಮಾರಕ ಕನ್ನಡ ಭವನ( ರಿ )ಸಹಯೋಗದಲ್ಲಿ ಪಾಂಗೋಡು ಶ್ರೀ ಕ್ಷೇತ್ರ ದ ದುರ್ಗಾಂಬಾ ವೇದಿಕೆಯಲ್ಲಿ ನಡೆದ ಕಾಸರಗೋಡು ದಸರಾ ಸಾಹಿತ್ಯ ಸಂಭ್ರಮ 2023 ಕಾರ್ಯಕ್ರಮದಲ್ಲಿ ಕಾಸರಗೋಡು ದಸರಾ ಸಾಧಕ ಸನ್ಮಾನ ನೀಡಿ ಗೌರವಿಸಲಾಯಿತು.



ಶ್ರೀಮದ್ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಶಾಲು, ಸ್ಮರಣಿಕೆ, ಪ್ರಶಸ್ತಿ ಪತ್ರ ನೀಡಿ ಗೌರವಿಸಿದರು.



ವೇದಿಕೆಯಲ್ಲಿ ದ.ಕ.ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷರಾದ ಪ್ರದೀಪ್ ಕುಮಾರ್ ಕಲ್ಕೂರ, ಹಿರಿಯ ಸಾಹಿತಿ ಶ್ರೀ ರಾಧಾಕೃಷ್ಣ.ಕೆ. ಉಳಿಯತಡ್ಕ, ಕನ್ನಡ ಭವನದ ಅಧ್ಯಕ್ಷ ರಾದ ಶ್ರೀ ವಾಮನ್ ರಾವ್ ಬೇಕಲ್, ಸಾಹಿತಿ ಶಿಕ್ಷಕ ಶ್ರೀ ಜಯಾನಂದ ಪೆರಾಜೆ, ವ್ಯಂಗ್ಯ ಚಿತ್ರ ಕಲಾವಿದ ಶ್ರೀ ವೆಂಟ್ ಭಟ್ ಎಡನೀರು, ಕನ್ನಡ ಭವನದ ಸಂಚಾಲಕಿ ಸಂದ್ಯಾರಾಣಿ ಟೀಚರ್, ಡಾ.ಶೈಲಾ ಕೆ.ಎನ್.ಸಹಾಯಕ ಪ್ರಾಧ್ಯಾಪಕ ರು, ಸಾಹಿತಿ ಟಿ.ತ್ಯಾಗರಾಜ್ ಮೈಸೂರು, ಪತ್ರಕರ್ತ ವಿರಾಜ್ ಅಡೂರು, ಪತ್ರಕರ್ತ ಪ್ರದೀಪ್ ಬೇಕಲ್, ನಿವೃತ್ತ ಪ್ರಾಂಶುಪಾಲ ಪ್ರೊ.ಎ.ಶ್ರೀನಾಥ್ ಕಾಸರಗೋಡು, ಯಕ್ಷಗಾನ ಕಲಾವಿದರಾದ ಶ್ರೀ ವೀಜಿ ಕಾಸರಗೋಡು, ಉಪನ್ಯಾಸಕಿ ಡಾ.ಅನುರಾಧಾ ಕುರುಂಜಿ, ಕವಯಿತ್ರಿ ಶ್ರೀಮತಿ ರೇಖಾಸುದೇಶ್ ರಾವ್, ಪತ್ರಕರ್ತ ರವಿನಾಯ್ಕಾಪು, ಜನಾರ್ದನ ಹಂದೆ, ಮೊದಲಾದ ಗಣ್ಯರು ಉಪಸ್ಥಿತರಿದ್ದರು.



ಇದೇ ಸಂದರ್ಭದಲ್ಲಿ ಕೇರಳ ಕರ್ನಾಟಕ ದ 35 ಯುವಪ್ರತಿಭೆಗಳಿಗೆ ಭರವಸೆಯ ಬೆಳಕು ಪ್ರಶಸ್ತಿ ನೀಡಿ ಗೌರವಿಸಲಾಯಿತು. ಶ್ರೀ ದುರ್ಗಾಪರಮೇಶ್ವರಿ ಸುಬ್ರಹ್ಮಣ್ಯ ಮಹಿಳಾ ಸಂಘ ಕೊರಕೋಡ್ ಕಾಸರಗೋಡಿನವರಿಂದ ಭಜನೆ ಸೇವೆ ನಡೆಯಿತು. ಭಜನಾಮಂಡಳಿಯವರನ್ನು ಗೌರವಿಸಲಾಯಿತು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top