ಕಾಸರಗೋಡು ಜಿಲ್ಲಾ ಪ್ರಥಮ ಮಕ್ಕಳ ಸಾಹಿತ್ಯ ಸಮ್ಮೇಳನ ನ.26ರಂದು

Upayuktha
0


ಕಾಸರಗೋಡು: ಶಿವರಾಮ ಕಾಸರಗೋಡು ಅಧ್ಯಕ್ಷತೆಯಲ್ಲಿ ಕಾಸರಗೋಡಿನಲ್ಲಿ 2019ರಲ್ಲಿ ಪ್ರಾರಂಭಗೊಂಡ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು (ರಿ) ಕೇರಳ ರಾಜ್ಯ ಘಟಕದ ಆಶ್ರಯದಲ್ಲಿ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. 


ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ರಿಜಿಸ್ಟರ್ಡ್ ಕೇರಳ ರಾಜ್ಯ ಘಟಕದ ನೇತೃತ್ವದಲ್ಲಿ 2023 ನವೆಂಬರ್ 26ರಂದು ಕಾಸರಗೋಡು ಜಿಲ್ಲಾ ಪ್ರಥಮ ಮಕ್ಕಳ ಸಾಹಿತ್ಯ ಸಮ್ಮೇಳನವನ್ನು ಕಾಸರಗೋಡಿನಲ್ಲಿ ಏರ್ಪಡಿಸಲು ಸಿದ್ಧತೆ ನಡೆಯುತ್ತಿದೆ.


ವಿಶೇಷ ಮಹಾಸಭೆಯ ಆಮಂತ್ರಣ

ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು (ರಿ) ಕೇರಳ ರಾಜ್ಯ ಘಟಕದ 24 ಮಂದಿ ಕಾರ್ಯಕಾರಿ ಸಮಿತಿಯ ಸದಸ್ಯರ ಪಟ್ಟಿಯನ್ನು ಪುನರಚಿಸಲು ತೀರ್ಮಾನಿಸಲಾಗಿದ್ದು ಕಾಸರಗೋಡು ಜಿಲ್ಲೆ ಮತ್ತು ಕೇರಳ ರಾಜ್ಯದ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳನ್ನು ಒಳಗೊಂಡ ಕವಿ ಸಾಹಿತಿ ಮಾಧ್ಯಮದವರು ಅಧ್ಯಾಪಕರು ವಿದ್ಯಾರ್ಥಿಗಳು ಕನ್ನಡ ಸಂಘಟಕರನ್ನು ಆಯ್ಕೆ ಮಾಡಿ ಕೇರಳ ರಾಜ್ಯ ಘಟಕದ ಕಾರ್ಯಕ್ರಮಕ್ಕೆ ಚಾಲನೆ ನೀಡಲು ತೀರ್ಮಾನಿಸಲಾಗಿದೆ.


ಆ ಪ್ರಯುಕ್ತ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು (ರಿ) ಕೇರಳ ರಾಜ್ಯ ಘಟಕದ ವಿಶೇಷ ಮಹಾ ಸಭೆಯ ದಿನಾಂಕ 08-10-2023  ಆದಿತ್ಯವಾರ ಮಧ್ಯಾಹ್ನ ಗಂಟೆ 12.00ಕ್ಕೆ ಕಾಸರಗೋಡು ತಾಳಿಪಡ್ಪು ಹೋಟೆಲ್ ಉಡುಪಿ ಗಾರ್ಡನ್ ಇದರ ಅತಿಥಿಗೃಹದಲ್ಲಿ ಕರೆಯಲಾಗಿದೆ. ಸಮಿತಿಯ ಸರ್ವ ಸದಸ್ಯರು ತಪ್ಪದೆ ಭಾಗವಹಿಸಬೇಕಾಗಿ ಶಿವರಾಮ ಕಾಸರಗೋಡು ಅವರು ಪ್ರಕಟಣೆಯಲ್ಲಿ  ವಿನಂತಿಸಿದ್ದಾರೆ. ವಿಶೇಷ ಮಹಾಸಭೆಯ ನಂತರ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಡೆಯಲಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ


web counter 



Post a Comment

0 Comments
Post a Comment (0)
To Top