ಪುತ್ತೂರು ತಾಲೂಕು ಪದವಿಪೂರ್ವ ಕಾಲೇಜು ವಿಭಾಗದ ಕಬಡ್ಡಿ ಪಂದ್ಯಾಟ

Upayuktha
0



ಪುತ್ತೂರು: ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ಹಾಗೂ ಸಂತ ಫಿಲೋಮಿನಾ ಪದವಿಪೂರ್ವ ಕಾಲೇಜಿನ ಜಂಟಿ ಆಶ್ರಯದಲ್ಲಿ ಪುತ್ತೂರು ತಾಲೂಕು ಪದವಿ ಪೂರ್ವ ವಿಭಾಗದ ಬಾಲಕ ಬಾಲಕಿಯರ ಕಬಡ್ಡಿ ಪಂದ್ಯಾಟದ ಉದ್ಘಾಟನೆಯು ಅ. 27ರಂದು ಫಿಲೋಮಿನಾ ಕಾಲೇಜಿನ ಕ್ರೀಡಾಂಗಣದಲ್ಲಿ ನಡೆಯಿತು.




ಅಧ್ಯಕತೆ ವಹಿಸಿದ್ದ ಕಾಲೇಜಿನ ಸಂಚಾಲಕರಾದ ರೆ.ಫಾ .ಲಾರೆನ್ಸ್ ಮಸ್ಕರೇನಸ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಶಿಕ್ಷ ಣದಲ್ಲಿ ಮುಂದುವರೆದು ನಿಷ್ಠೆಯಿಂದ ಜೀವನ ನಡೆಸಿ ಕ್ರೀಡೆಯನ್ನು ಉನ್ನತ ಸ್ಥಾನಕ್ಕೆ ಮುಟ್ಟಿಸಿ, ಎಲ್ಲರ ಜತೆ ಗೌರವ ಮತ್ತು ಪ್ರೀತಿಯಿಂದ ನಡೆದುಕೊಳ್ಳಬೇಕು ಹಾಗೂ ಕಬಡ್ಡಿ ಗ್ರಾಮೀಣ ಕ್ರೀಡೆ.  ಮಕ್ಕಳು ಈ ಕ್ರೀಡೆಯನ್ನು ತಮ್ಮ ಶಾಲಾ ದಿನಗಳಿಂದಲೇ ಆಡುತ್ತಾ ಬಂದಿರುತ್ತಾರೆ. ದೇಶದ ರಾಷ್ಟ್ರೀಯತೆ ಮತ್ತು ಸಂಸ್ಕೃತಿಯನ್ನು ಎತ್ತಿ ತೋರಿಸುತ್ತಿರುವ ಕ್ರೀಡೆ ಎಂದರು.




ವೇದಿಕೆಯಲ್ಲಿ  ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಎಲ್ಯಾಸ್ ಪಿಂಟೋ ಮತ್ತು ರಾಜೇಶ್ ಮೂಲ್ಯ ಉಪಸ್ಥಿತರಿದ್ದರು. ಪುತ್ತೂರು ತಾಲೂಕಿನ   ಸುಮಾರು ಹದಿನಾಲ್ಕು ಕಬಡ್ಡಿ ತಂಡಗಳು ಭಾಗವಹಿಸಿದ್ದವು. ಕಾಲೇಜಿನ ಪ್ರದರ್ಶನ ಕಲಾ ತಂಡದ ವಿದ್ಯಾರ್ಥಿಗಳು ಪ್ರಾರ್ಥಿಸಿ, ಕಾಲೇಜಿನ ಪ್ರಾಚಾರ್ಯರಾದ ರೆ. ಫಾ. ಅಶೋಕ್ ರಾಯನ್ ಕ್ರಾಸ್ತಾ ಸ್ವಾಗತಿಸಿ , ಉಪನ್ಯಾಸಕಿಯಾದ ಸುಮಾ ಡಿ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 




إرسال تعليق

0 تعليقات
إرسال تعليق (0)
To Top