ಅಗ್ರಹಾರಬಾಚಹಳ್ಳಿ ಗ್ರಾ.ಪಂ. ವತಿಯಿಂದ ವಾಲ್ಮೀಕಿ ಜಯಂತಿ ಆಚರಣೆ

Upayuktha
0

ಕೆ.ಆರ್.ಪೇಟೆ: ತಾಲ್ಲೂಕಿನ ಕಸಬಾ ಹೋಬಳಿಯ ಅಗ್ರಹಾರಬಾಚಹಳ್ಳಿ ಗ್ರಾಮ ಪಂಚಾಯಿತಿಯ ವತಿಯಿಂದ ಮಹರ್ಷಿ ವಾಲ್ಮೀಕಿ  ಜಯಂತಿಯನ್ನು ಗ್ರಾ.ಪಂ. ಕಚೇರಿಯಲ್ಲಿ ಸರಳವಾಗಿ ಆಚರಿಸಲಾಯಿತು.


ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಎ.ಸಿ.ದಿವಿಕುಮಾರ್ ಅವರು ವಾಲ್ಮೀಕಿಯವರ ಭಾವಚಿತ್ರಕ್ಕೆ ಅವರ ಪುಷ್ಪ ನಮನ ಸಲ್ಲಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು. ಬಳಿಕ ಮಾತನಾಡಿದ ಅವರು, ದೇಶದ ಸಂಸ್ಕೃತಿಯನ್ನು ಎತ್ತಿಹಿಡಿಯುತ್ತಿರುವ ನಮ್ಮ ವಾಲ್ಮೀಕಿ ರಾಮಾಯಣವು ಈ ನೆಲದ ಗಟ್ಟಿ ಧ್ವನಿಯಾಗಿದೆ. ಇಡೀ ಮನಕುಲವು ಹೇಗೆ ಬದುಕಬೇಕೆಂಬುದು ರಾಮಾಯಣದ ವಿವಿಧ ಪಾತ್ರಗಳಲ್ಲಿಅಡಕವಾಗಿದೆ. ರಾಮಾಯಣ ಕೃತಿಯು ಕಲ್ಪಿತವಲ್ಲಅದು ನಿಜ ಸತ್ಯ ಸಂಗತಿಯಾಗಿದೆ. ಇದಕ್ಕೆ ಪುರಾವೆಯಾಗಿ ದೇಶಾದ್ಯಂತ ರಾಮ, ಲಕ್ಷ್ಮಣರು, ವನವಾಸ, ಅಜ್ಞಾತವಾಸದ ಸಂದರ್ಭಗಳಲ್ಲಿ ವಾಸಿಸಿದ ಕುರುಹುಗಳನ್ನು ಇಂದಿಗೂ ಕಾಣಬಹುದಾಗಿದೆ ಎಂದರು.


ಸೀತಾಪಹರಣ, ಹನುಮಂತನಿಂದ ಲಂಕಾಕದನ ಕುರುಹುಗಳನ್ನು ಶ್ರೀಲಂಕಾ ದೇಶದಲ್ಲಿ ಕಾಣಬಹುದಾಗಿದೆ. ಶ್ರೀಲಂಕಾ ಭಾರತ ನಡುವಿನ ಸಮುದ್ರದಲ್ಲಿರುವ ರಾಮಸೇತು ಸಹ ಶ್ರೀರಾಮನ ಜೀವನ ವೃತ್ತಾಂತವು ಕಥೆಯಲ್ಲಿ ನಿಜ ಜೀವನವೇ ಆಗಿತ್ತು ಎಂಬುದನ್ನು ತಿಳಿಸುತ್ತದೆ ಎಂದು ದಿವಿಕುಮಾರ್ ತಿಳಿಸಿದರು.



ಹಾಗಾಗಿ ನಮ್ಮ ದೇಶದ ಪವಿತ್ರ ಗ್ರಂಥಗಳಾದ ರಾಮಾಯಣ ಮತ್ತು ಮಹಾಭಾರತ ಕೃತಿಗಳು ನಮ್ಮ ದೇಶದ ಸಂಸ್ಕೃತಿ-ಪರಂಪರೆಯ  ಪ್ರತಿಬಿಂಬಗಳಾಗಿವೆ. ದೇಶದ 125 ಕೋಟಿ ಜನರ ನೆಮ್ಮದಿಯ ಬದುಕಿನ ದಿಕ್ಕನ್ನು ಬದಲಿಸುವ ಕೃತಿಗಳಾಗಿವೆ. ಹಾಗಾಗಿ ಪ್ರತಿಯೊಬ್ಬರೂ ರಾಮಾಯಣ ಮತ್ತು ಮಹಾಭಾರತ ಹಾಗೂ ಭಗವದ್ಗೀತೆಯ ಸಾರವನ್ನು ಮೈಗೂಡಿಸಿಕೊಂಡು ಉತ್ತಮ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು  ಎಂದು ಎ.ಸಿ. ದಿವಿಕುಮಾರ್ ಮನವಿ ಮಾಡಿದರು.



ಗ್ರಾಮ ಪಂಚಾಯತಿ  ಉಪಾಧ್ಯಕ್ಷೆ ಸುನಿತಾ ದ್ಯಾವಯ್ಯ, ಗ್ರಾ.ಪಂ.ಅಭಿವೃದ್ದಿ ಅಧಿಕಾರಿ ಹರ್ಷವರ್ಧನ್, ಡಿಇಓ ತ್ರಿವೇಣಿ, ಗ್ರಂಥಪಾಲಕಿ ಸೌಮ್ಯ, ಬಿಲ್ ಕಲೆಕ್ಟರ್ ನರಸಿಂಹಯ್ಯ, ಗ್ರಾ.ಪಂ. ಸದಸ್ಯರಾದ ನೇತ್ರಾವತಿ, ಸಿ.ಆರ್.ಪಿ.ಕುಮಾರ್, ಪ್ರೇಮಾ, ವಿ.ಮೆಣಸ ರಮಾನಂದ್,  ಆರ್.ರಮೇಶ್, ಚನ್ನೇಗೌಡ, ಫಯಾಜ್ ಉಲ್ಲಾಖಾನ್, ನೇತ್ರಾವತಿಕುಮಾರ್, ಶಶಿರೇಖಾ ಅಶೋಕ್, ರೇಣುಕಾ ಈಶ್ವರ್, ನಗರೂರು  ನಂಜೇಗೌಡ, ಜಯಂತಿ ರವೀಂದ್ರ, ಸಾವಿತ್ರಮ್ಮ ಗೋವಿಂದಶೆಟ್ಟಿ, ಬೊಪ್ಪನಹಳ್ಳಿ ದಿನೇಶ್, ಗ್ರಾ.ಪಂ. ನೌಕರರಾದ ಲಿಂಗರಾಜು,  ಕಾಳೇಗೌಡ, ರಮೇಶ್, ಎ.ಆರ್.ಕುಮಾರ್, ಪ್ರದೀಪ್, ಶಿವಲಿಂಗೇಗೌಡ, ವಾಸು, ರವಿಕುಮಾರ್, ಸಿ.ಎನ್.ಶ್ರೀನಿವಾಸ್,  ನಾಗರಾಜು, ಮಂಜೇಗೌಡ, ಮಮತಾ ಪುಟ್ಟೇಗೌಡ, ಸೇರಿದಂತೆ ಹಲವರು ಉಪಸ್ಥಿತರಿದ್ದರು.


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top