ಮಂಗಳೂರು: ಹಬ್ಬದ ಋತುವಿನ ಪ್ರಾರಂಭದಲ್ಲಿ ತನ್ನ ಗ್ರಾಹಕರಿಗೆ ರೂ. 26,000 ವರೆಗಿನ ಅತ್ಯಾಕರ್ಷಕ ಕೊಡುಗೆಗಳು, ರಿಯಾಯ್ತಿಗಳು ಮತ್ತು ಕ್ಯಾಷ್‍ಬ್ಯಾಕ್ ಸೌಲಭ್ಯ ಒಳಗೊಂಡ 'ಹಬ್ಬದ ಕೊಡುಗೆ'ಯನ್ನು ಐಸಿಐಸಿಐ ಬ್ಯಾಂಕ್ ಘೋಷಿಸಿದೆ.
ಐಸಿಐಸಿಐ ಬ್ಯಾಂಕ್‍ನ ಕ್ರೆಡಿಟ್/ಡೆಬಿಟ್ ಕಾರ್ಡ್‍ಗಳು, ಇಂಟರ್‍ನೆಟ್ ಬ್ಯಾಂಕಿಂಗ್, ರೂಪೇ ಕ್ರೆಡಿಟ್ ಕಾರ್ಡ್ ಮತ್ತು ಕಾರ್ಡ್‍ಲೆಸ್ ಸಮಾನ ಮಾಸಿಕ ಕಂತಿನ (ಇಎಂಐ) ಯುಪಿಐ ವಹಿವಾಟಿನ ಮೂಲಕ ಗ್ರಾಹಕರು ತಮ್ಮ ನೆಚ್ಚಿನ ಬ್ರ್ಯಾಂಡ್‍ಗಳಿಂದ ವಿವಿಧ ವಸ್ತುಗಳನ್ನು ಖರೀದಿಸುವ ಮೂಲಕ ಈ ಪ್ರಯೋಜನಗಳನ್ನು ಪಡೆಯಬಹುದು ಎಂದು ಐಸಿಐಸಿಐ ಬ್ಯಾಂಕ್‍ನ ಕಾರ್ಯನಿರ್ವಾಹಕ ನಿರ್ದೇಶಕ ರಾಕೇಶ್ ಝಾ ಹೇಳಿದ್ದಾರೆ.
ಹಬ್ಬದ ಋತುವಿನಲ್ಲಿನ ಗ್ರಾಹಕರ ವಿವಿಧ ಅಗತ್ಯಗಳನ್ನು ಪೂರೈಸುವ ಬಗೆಯಲ್ಲಿ ಬ್ಯಾಂಕ್ ಈ ಕೊಡುಗೆಗಳನ್ನು ರೂಪಿಸಿದೆ. ವಿವಿಧ ಪರಿಕರಗಳಾದ ಎಲೆಕ್ಟ್ರಾನಿಕ್ಸ್, ಮೊಬೈಲ್, ಫ್ಯಾಷನ್, ಚಿನ್ನಾಭರಣ, ಪೀಠೋಪಕರಣಗಳು, ಪ್ರಯಾಣ, ಭೋಜನ ಮತ್ತಿತರ ವಿವಿಧ ವಿಭಾಗಗಳಲ್ಲಿ ಈ ಕೊಡುಗೆಗಳು ಇರಲಿವೆ. ಐಫೋನ್, ಮೇಕ್‍ಮೈಟ್ರಿಪ್, ಟಾಟಾ ನ್ಯೂ, ಒನ್‍ಪ್ಲಸ್, ಎಚ್‍ಪಿ, ಮೈಕ್ರೊಸಾಫ್ಟ್, ಕ್ರೋಮಾ, ರಿಲಯನ್ಸ್ ಡಿಜಿಟಲ್, ಎಲ್‍ಜಿ, ಸೋನಿ, ಸ್ಯಾಮ್ಸಂಗ್, ತನಿಷ್ಕ್, ತಾಜ್, ಜೊಮ್ಯಾಟೊ ಮತ್ತು ಸ್ವಿಗ್ಗಿ ಒಳಗೊಂಡಂತೆ ವಿವಿಧ ಬ್ರ್ಯಾಂಡ್‍ಗಳಲ್ಲಿಯೂ ಹಬ್ಬದ ಕೊಡುಗೆಗಳು ಇರಲಿವೆ ಎಂದು ವಿವರಿಸಿದ್ದಾರೆ.
ಫ್ಲಿಪ್‍ಕಾರ್ಟ್‍ನ ದಿ ಬಿಗ್ ಬಿಲಿಯನ್ ಡೇಸ್ ಸೇಲ್, ಮಿಂತ್ರಾ ಬಿಗ್ ಫ್ಯಾಷನ್ ಫೆಸ್ಟಿವಲ್‍ಮತ್ತು ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ಜತೆಗೆ ಐಸಿಐಸಿಐ ಬ್ಯಾಂಕ್ ಪಾಲುದಾರಿಕೆ ಹೊಂದಿದೆ. ಗೃಹ ಸಾಲ, ವಾಹನ ಸಾಲ ಮತ್ತು ದ್ವಿಚಕ್ರ ವಾಹನ ಸಾಲದಂತಹ ಚಿಲ್ಲರೆ ಸಾಲ ಉತ್ಪನ್ನಗಳ ಮೇಲೆಯೂ ಬ್ಯಾಂಕ್ ತನ್ನ ಗ್ರಾಹಕರಿಗೆ ವಿಶೇಷ ಮತ್ತು ಆಕರ್ಷಕ ಕೊಡುಗೆಗಳನ್ನು ಶೀಘ್ರದಲ್ಲೇ ಪರಿಚಯಿಸಲಿದೆ ಎಂದು ಹೇಳಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ