ಶ್ರೀ ದುರ್ಗಾದೇವಿಯ ನಾಮಜಪ, ಪ್ರಾರ್ಥನೆ ಯಾವ ರೀತಿ ಮಾಡಬೇಕು?

Upayuktha
0



ಶ್ರೀ ದುರ್ಗಾದೇವ್ಯೈ ನಮಃ’ ಈ ನಾಮಜಪದಲ್ಲಿ ‘ದುರ್ಗಾ’ ಶಬ್ದದ ‘ದ’ಕಾರವು ‘ದೈತ್ಯನಾಶ’ದ ಪ್ರತೀಕವಾಗಿದೆ. ‘ದುರ್ಗಾ’ದಲ್ಲಿನ ‘ದುರ್’ ಎಂದರೆ ‘ಕೆಟ್ಟದ್ದು’, ‘ಗ’ ಎಂದರೆ ಹೋಗಲಾಡಿಸುವ. ಕೆಟ್ಟದ್ದನ್ನು ನಾಶ ಮಾಡುವವಳು ಎಂದರೆ ‘ದುರ್ಗಾ’.



ಕಲಿಯುಗದಲ್ಲಿ ‘ನಾಮಸಾಧನೆ’ ಅಂದರೆ ದೇವರ ನಾಮವನ್ನು ಜಪಿಸುವುದೇ ಉತ್ತಮ ರೀತಿಯ ಸಾಧನೆಯಾಗಿದೆ ಎಂದು ಅನೇಕ ಸಂತಶ್ರೇಷ್ಠರು ಹೇಳಿದ್ದಾರೆ. ಭಗವಂತನ ನಾಮದೊಂದಿಗೆ ಅವನ ರೂಪ, ರಸ, ಗಂಧ ಮತ್ತು ಅವನ ಶಕ್ತಿಯೂ ಇರುತ್ತದೆ. ಭಗವಂತನ ನಾಮವನ್ನು ಜಪಿಸುವಾಗ ಅಥವಾ ಕೇಳುವಾಗ ಈ ತತ್ತ್ವವನ್ನು ಗಮನದಲ್ಲಿ ಇಟ್ಟುಕೊಂಡರೆ ನಾಮಜಪದಿಂದ ಹೆಚ್ಚಿನ ಲಾಭವನ್ನು ಪಡೆದುಕೊಳ್ಳಬಹುದು. ‘ಶ್ರೀ ದುರ್ಗಾದೇವ್ಯೈ ನಮಃ’ ಈ ನಾಮಜಪವನ್ನು ತಾರಕ ಭಾವದಿಂದ ಮಾಡಲು ಪ್ರತಿಯೊಂದು ಶಬ್ದದ ಉಚ್ಚಾರವನ್ನು ದೀರ್ಘವಾಗಿ ಮಾಡಬೇಕು. ಯಾವುದೇ ಶಬ್ದದ ಮೇಲೆ ಒತ್ತನ್ನು ನೀಡದೆ, ಮೃದುವಾಗಿ ಉಚ್ಚರಿಸಬೇಕು. ಇದರಿಂದ ದೇವಿಯ ತಾರಕ ತತ್ತ್ವದ ಹೆಚ್ಚಿನ ಲಾಭವಾಗುತ್ತದೆ. ಇಲ್ಲಿ ನೀಡಿರುವಂತೆ ನೀವು ಕೂಡ ಶಾಸ್ತ್ರಬದ್ಧವಾಗಿ ಶ್ರೀ ದುರ್ಗಾದೇವಿಯ ನಾಮಜಪವನ್ನು ಮಾಡಿ, ಅದರಿಂದ ನಿಮಗೂ ದೇವಿಯ ಅನುಭೂತಿ ಸಿಗುವಂತಾಗಲಿ ಎಂದು ಶ್ರೀ ದೇವಿಯ ಚರಣಗಳಲ್ಲಿ ಪ್ರಾರ್ಥನೆ. ನವರಾತ್ರಿಯಲ್ಲಿ ದೇವಿತತ್ತ್ವವು ಎಂದಿಗಿಂತ 1000 ಪಟ್ಟು ಹೆಚ್ಚು ಕಾರ್ಯನಿರತವಾಗಿರುತ್ತದೆ. ದೇವಿತತ್ತ್ವದ ಲಾಭವನ್ನು ಆದಷ್ಟು ಹೆಚ್ಚು ಪಡೆದುಕೊಳ್ಳಲು ನವರಾತ್ರಿಯ ಕಾಲದಲ್ಲಿ || ಶ್ರೀ ದುರ್ಗಾದೇವ್ಯೈ ನಮಃ || ಎಂಬ ನಾಮಜಪವನ್ನು ಆದಷ್ಟು ಹೆಚ್ಚು ಮಾಡಬೇಕು.



ದೇವಿಗೆ ಮಾಡಬೇಕಾದ ಕೆಲವು ಪ್ರಾರ್ಥನೆಗಳು :

ಹೇ ಶ್ರೀ ದುರ್ಗಾದೇವಿ, ನನಗೆ ಸದ್ಬುದ್ಧಿ ಕೊಡು. ನನ್ನ ಜೀವನದಲ್ಲಿ ಬರುವ ಸಂಕಟಗಳನ್ನು ನಿವಾರಿಸು. ಹೇ ದುರ್ಗಾಮಾತೆ, ರಾಷ್ಟ್ರರಕ್ಷಣೆ ಮತ್ತು ಧರ್ಮರಕ್ಷಣೆಯ ಸೇವೆಯನ್ನು ನಾನು ‘ಸಾಧನೆಯೆಂದು ಮಾಡುವಂತಾಗಲಿ !


ಶ್ರೀ ದುರ್ಗಾಪೂಜೆ ಆರಂಭಿಸುವಾಗ ಮಾಡಬೇಕಾದ ಪ್ರಾರ್ಥನೆ : ಹೇ ಶ್ರೀ ದುರ್ಗಾದೇವಿ, ಈ ಪೂಜಾವಿಧಿಯ ಮೂಲಕ ನನ್ನ ಅಂತಃಕರಣದಲ್ಲಿ ನಿನ್ನ ಬಗ್ಗೆ ಭಕ್ತಿಭಾವ ನಿರ್ಮಾಣವಾಗಲಿ. ಈ ಪೂಜಾವಿಧಿಯಿಂದ ಪ್ರಕ್ಷೇಪಿಸುವ ಚೈತನ್ಯವನ್ನು ನಾನು ಹೆಚ್ಚೆಚ್ಚು ಗ್ರಹಿಸುವಂತೆ ಕೃಪೆ ಮಾಡು.


ನವರಾತ್ರ್ಯುತ್ಸವದ ಕಾಲದಲ್ಲಿ ಮಾಡಬೇಕಾದ ಪ್ರಾರ್ಥನೆ : ಹೇ ಶ್ರೀ ದುರ್ಗಾದೇವಿ, ನವರಾತ್ರ್ಯುತ್ಸವದ ಕಾಲದಲ್ಲಿ ಎಂದಿಗಿಂತ ಸಾವಿರಪಟ್ಟು ಹೆಚ್ಚು ಕಾರ್ಯನಿರತವಾಗಿರುವ ನಿನ್ನ ತತ್ತ್ವದಿಂದ ನನಗೆ ಹೆಚ್ಚೆಚ್ಚು ಲಾಭವಾಗಲಿ.



ಕವಚಪಠಣ : ಕವಚವು ಮಂತ್ರವಿದ್ಯೆಯಲ್ಲಿನ ಒಂದು ವಿಧವಾಗಿದೆ. ಇದರಲ್ಲಿ ದೇವತೆಯು ನಮ್ಮ ದೇಹದ ರಕ್ಷಣೆಯನ್ನು ಮಾಡಬೇಕೆಂಬ ಪ್ರಾರ್ಥನೆಯಿರುತ್ತದೆ. ಅನೇಕ ವಿಧದ ಮಂತ್ರಗಳ ಸಹಾಯದಿಂದ ಮನುಷ್ಯನ ದೇಹದ ಮೇಲೆ ಮಂತ್ರಕವಚಗಳನ್ನು ನಿರ್ಮಿಸಬಹುದು. ಈ ಕವಚಗಳು ಸ್ಥೂಲ ಕವಚಗಳಿಗಿಂತ ಹೆಚ್ಚು ಶಕ್ತಿಶಾಲಿಯಾಗಿರುತ್ತವೆ. ಸ್ಥೂಲ ಕವಚಗಳು ತುಪಾಕಿಯ ಗುಂಡುಗಳಂತಹ ಸ್ಥೂಲ ಆಯುಧಗಳಿಂದ ರಕ್ಷಿಸುತ್ತವೆ, ಆದರೆ ಸೂಕ್ಷ್ಮ ಕವಚಗಳು ಸ್ಥೂಲ ಹಾಗೂ ಭೂತ, ಮಾಟದಂತಹ ಸೂಕ್ಷ್ಮ ಕೆಟ್ಟ ಶಕ್ತಿಗಳಿಂದ ರಕ್ಷಿಸುತ್ತವೆ. ದುರ್ಗಾಕವಚ, ಲಕ್ಷ್ಮೀಕವಚ, ಮಹಾಕಾಲಿಕವಚ ಮುಂತಾದವುಗಳ ಪಠಣದಿಂದ ಶತ್ರು ಹಾಗೂ ಭೂತಬಾಧೆ, ಮಾಟದಂತಹ ಕೆಟ್ಟ ಶಕ್ತಿಗಳಿಂದ ರಕ್ಷಣೆ ಪಡೆಯಲು ಸಹಾಯವಾಗುತ್ತದೆ.



-ಸಂಗ್ರಹ

ಶ್ರೀ. ವಿನೋದ ಕಾಮತ್,


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top