ಹಾಸನ: ಹಾಸನದಲ್ಲಿ ನಿರಂತರವಾಗಿ ನಡೆದುಕೊಂಡು ಬಂದಿರುವ ಮನೆ ಮನೆ ಕವಿಗೋಷ್ಠಿ ಸಾಹಿತ್ಯ ಸಂಘಟನೆಯ 311ನೇ ತಿಂಗಳ ಕಾರ್ಯಕ್ರಮಕವಿ ಎನ್.ಎಲ್.ಚನ್ನೇಗೌಡರ ಪ್ರಾಯೋಜನೆಯಲ್ಲಿ ಇವರ ಮನೆ ಕಾವ್ಯಶ್ರೀ, ಎಂ.ಎಲ್.ಎ. ಶ್ರೀ ಹೆಚ್.ಎಸ್.ಪ್ರಕಾಶ್ ಮನೆ ಹಿಂಭಾಗ, ಮಣಿಕಂಠ ಸ್ಟೋರ್ಸ್‍ಎದುರು, ಹೇಮಾವತಿ ನಗರ, ಹಾಸನ ಇಲ್ಲಿ ದಿ.5-11-2023ರ ಭಾನುವಾರ ಮದ್ಯಾಹ್ನ ಮೂರು ಗಂಟೆಗೆ 3ಕೃತಿ ಬಿಡುಗಡೆ, ಕವಿಗೋಷ್ಠಿ ಕನ್ನಡ ನಾಡು ನುಡಿ ಬಾವಗೀತೆ ಗಾಯನ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಕವಿ ಎನ್.ಎಲ್.ಚನ್ನೇಗೌಡರ ರಾಮಾಯಣದೊಳಗೊಂದಿಷ್ಟು ರಾಮಾಯಣ ಕೃತಿಯನ್ನು ಎಂ.ಕುಸುಮಾ, ಇಂಗ್ಲೀಷ್ ಪ್ರಾಧ್ಯಾಪಕರು, ಹಾಸನ ಇವರು ಬಿಡುಗಡೆ ಮಾಡಿ ಮಾತನಾಡುವರು. ಮೌನದೊಳಗಿನ ಮಾತು ಕವನ ಸಂಕಲನವನ್ನು ಕವಿ ಪರಮೇಶ್ ಮಡಬಲು ಬಿಡುಗಡೆ ಮಾಡಿ ಮಾತನಾಡಿದರೆ ನುಡಿತೋರಣ ಕುರಿತು ರಾಜೇಶ್ ಬಿ.ಹೊನ್ನೇನಹಳ್ಳಿ ಉಪನ್ಯಾಸಕರು ಮಾತನಾಡುವರು. ಆಗಮಿತ ಕವಿಗಳಿಂದ ಕವಿಗೋಷ್ಠಿ, ಗಾಯಕ ಗಾಯಕಿಯರಿಂದ ಭಾವಗೀತೆ ಕಾರ್ಯಕ್ರಮ ಇರುವುದು. ಹೆಚ್ಚಿನ ಸಂಖೈಯಲ್ಲಿ ಕವಿ, ಗಾಯಕರು, ಸಾಹಿತ್ಯಾಭಿಮಾನಿಗಳು ಆಗಮಿಸಬೇಕೆಂದು ಸಂಚಾಲಕರು ಗೊರೂರು ಅನಂತರಾಜು ಕೋರಿದ್ದಾರೆ.
ಮೈಸೂರು ದಸರಾ ನಾಟಕೋತ್ಸವ: ಹಾಸನ ಶಾರದ ತಂಡದಿಂದ ಕುರುಕ್ವೇತ್ರ ನಾಟಕ ಮೈಸೂರುದಸರಾ ಮಹೋತ್ಸವ ಅಂಗವಾಗಿ ಮೈಸೂರಿನ ಪುರಭವನದಲ್ಲಿ ದಿನಾಂಕ 22-10-2023ರ ಭಾನುವಾರ ಮದ್ಯಾಹ್ನ 3 ಗಂಟೆಯಿಂದ 5 ಗಂಟೆಯವರೆಗೆ ಹಾಸನದ ಹೆಚ್.ಜಿ.ಗಂಗಾಧರ್ ಸಾರಥ್ಯದ ಶ್ರೀ ಶಾರದ ಕಲಾ ಸಂಘದ ಕಲಾವಿದರಿಂದ ಕುರುಕ್ಷೇತ್ರ ಪೌರಾಣಿಕ ನಾಟಕ ಪ್ರದರ್ಶನಏರ್ಪಡಿಸಲಾಗಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ