ನಿಟ್ಟೆ ಸಂಸ್ಥೆಯಿಂದ ಅ.8 ರಂದು ಮುಂಡ್ಕೂರಿನಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ

Upayuktha
0


ಕಾರ್ಕಳ: ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಅಂಗಸಂಸ್ಥೆಯಾಗಿರುವ ದೇರಳಕಟ್ಟೆಯ ಪ್ರತಿಷ್ಟಿತ ಜಸ್ಟೀಸ್ ಕೆ. ಎಸ್. ಹೆಗ್ಡೆ ಚಾರಿಟೇಬಲ್ ಆಸ್ಪತ್ರೆ ಮತ್ತು ಅಂಧರ ಸೇವಾ ಸಂಘ, ದಕ್ಷಿಣ ಕನ್ನಡ (ರಿ), ಮುಂಡ್ಕೂರು ವ್ಯವಸಾಯ ಸೇವಾ ಸಹಕಾರಿ ಸಂಘ ಇವರ ಜಂಟಿ ಆಶ್ರಯದಲ್ಲಿ ಅ. 8 ರಂದು ಭಾನುವಾರ ಬೆಳಿಗ್ಗೆ 10.00 ರಿಂದ 1.00 ರವರೆಗೆ ಮುಂಡ್ಕೂರಿನ ನಡಿಗುತ್ತು ಸಿದ್ದು ಶೆಟ್ಟಿ ಆರೋಗ್ಯ ಕೇಂದ್ರದಲ್ಲಿ ಕಣ್ಣಿನ ತಪಾಸಣೆ, ಮಧುಮೇಹ, ರಕ್ತದೊತ್ತಡ ಹಾಗೂ ಸಾಮಾನ್ಯ ಖಾಯಿಲೆಗಳ 'ಉಚಿತ ಆರೋಗ್ಯ ತಪಾಸಣಾ ಶಿಬಿರ'ವನ್ನು ಹಮ್ಮಿಕೊಳ್ಳಲಾಗಿದೆ.



ವೈದ್ಯರು ಸೂಚಿಸಿದವರಿಗೆ ಇ.ಸಿ.ಜಿ ಪರೀಕ್ಷೆಗಳನ್ನು ಉಚಿತವಾಗಿ ಮಾಡಲಾಗುವುದು. ಸಾಮಾನ್ಯ ಔಷಧಗಳನ್ನು ಉಚಿತವಾಗಿ ನೀಡಲಾಗುವುದು. ಸಾಮಾನ್ಯ ಮತ್ತು ನಿಯಮಿತ ಕನ್ನಡಕವನ್ನು ಉಚಿತವಾಗಿ ವಿತರಿಸಲಾಗುವುದು. ಕಣ್ಣಿನ ಶಸ್ತ್ರಚಿಕಿತ್ಸೆಯನ್ನು  ಆಸ್ಪತ್ರೆಯಲ್ಲಿ ಉಚಿತವಾಗಿ ಮಾಡಲಾಗುವುದು.



ಶಿಬಿರದಲ್ಲಿ ಕ್ಷೇಮ ಹೆಲ್ತ್ ಕಾರ್ಡ್ ನೋಂದಾವಣೆ ಮಾಡಲಾಗುವುದು. ಕ್ಷೇಮ ವಿಮಾ ಯೋಜನೆಯ ನೊಂದಾವಣೆಗೆ ಬೇಕಾಗುವ ದಾಖಲೆಗಳು: 1. ವಿಮಾ ಯೋಜನೆಗೆ ಸೇರುವ ಎಲ್ಲಾ ಸದಸ್ಯರ ಆಧಾರ್ ಕಾರ್ಡಿನ ಜೆರಾಕ್ಸ್. 2. ರೇಷನ್ ಕಾರ್ಡಿನ ಜೆರಾಕ್ಸ್. 3. ಸಣ್ಣ ಮಕ್ಕಳಾದಲ್ಲಿ ಜನನ ಪತ್ರದ ಜೆರಾಕ್ಸ್ ಹೆಚ್ಚಿನ ಮಾಹಿತಿಗಾಗಿ: ರವಿ- 9482099110, ಸುನಿಲ್ ಶೆಟ್ಟಿ- 8657174589 ಸಂಪರ್ಕಿಸಬಹುದು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top