ಬಂಟ್ವಾಳ: “ಮಕ್ಕಳ ಕಲಾಲೋಕ” ಕನ್ನಡ ಸಾಹಿತ್ಯ ಪರಿಷತ್ತು ಬಂಟ್ವಾಳ ತಾಲೂಕು ಘಟಕ ಇದರ 17ನೇ ವರ್ಷದ ಮಕ್ಕಳ ಸಾಹಿತ್ಯ ಸಮ್ಮೇಳನವನ್ನು 2023ರ ಡಿಸೆಂಬರ್ ಮೊದಲ ವಾರದಲ್ಲಿ ದ.ಕ.ಜಿ.ಪಂ ಹಿರಿಯ ಪ್ರಾಥಮಿಕ ಶಾಲೆ ಕಡೇಶ್ವಾಲ್ಯದ ಸಹಭಾಗಿತ್ವದಲ್ಲಿ ನೆರವೇರಲಿದೆ.
ಬಂಟ್ವಾಳ ತಾಲೂಕಿನಲ್ಲಿ 18 ವರ್ಷ ಪ್ರಾಯದೊಳಗಿನ ಮಕ್ಕಳಿರುವ ಸರಕಾರಿ, ಅನುದಾನಿತ, ಅನುದಾನ ರಹಿತ ವಿದ್ಯಾಸಂಸ್ಥೆಗಳಲ್ಲಿ ಐದು ವರ್ಷಗಳ ಈಚೆಗೆ ಸಾಹಿತ್ಯ ಹಾಗೂ ಇತರ ಕಲೆಗಳಲ್ಲಿ ಮಾಡಿದ ಸಾಧನೆಗಳ ವಿವರಗಳನ್ನು ಬರೆದು ಕಳುಹಿಸಬೇಕಾಗುತ್ತದೆ. ಆಯ್ದ ಒಂದು ವಿದ್ಯಾಸಂಸ್ಥೆಗೆ “ಸಾಹಿತ್ಯ ತಾರೆ” ಪ್ರಶಸ್ತಿಯನ್ನು ನೀಡಲಾಗುವುದು.
ಮಕ್ಕಳಿಗಾಗಿ ಸಾಹಿತ್ಯ ಹಾಗೂ ವಿವಿಧ ಕಲೆಗಳಲ್ಲಿ ಸಹಕರಿಸುತ್ತಿರುವ ಶಿಕ್ಷಕರು ಅಥವಾ ಸಾರ್ವಜನಿಕ ಕಲಾಗಾರರ ಸಾಧನೆಗಳ ವಿವರಗಳನ್ನು ಪಟ್ಟಿ ಮಾಡಿ ಕಳುಹಿಸಿರಿ. ಆಯ್ದ ಸಾಧಕರೊಬ್ಬರಿಗೆ “ಬಾಲ ಬಂಧು” ಪ್ರಶಸ್ತಿ ನೀಡಿ ಗೌರವಿಸಲಾಗುವುದು. ವಿವರಗಳನ್ನು 2023 ಅಕ್ಟೋಬರ್ 25ರೊಳಗೆ ಕೆಳಗಿನ ವಿಳಾಸಕ್ಕೆ ತಲುಪಿಸಬೇಕೆಂದು “ಮಕ್ಕಳ ಕಲಾ ಲೋಕ”ದ ಅಧ್ಯಕ್ಷರಾದ ರಮೇಶ ಎಂ. ಬಾಯಾರು ಪ್ರಕಟಣೆಯಲ್ಲಿ ತಿಳಿಸಿರುವರು. ವಿವರಗಳಿಗೆ- ಮೊ: 9448626093
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ