ದಸರಾ ಚಿತ್ರೋತ್ಸವದಲ್ಲಿ: ಮಕ್ಕಳ ಚಿತ್ರ ಗಾಂಧಿ ಮತ್ತು ನೋಟು ಪ್ರದರ್ಶನ

Upayuktha
0



ದೇವಸಾಗರ.. ಕರ್ನಾಟಕದ ಅನೇಕ ಮೂಲಸೌಕರ್ಯಗಳಿಂದ ವಂಚಿತವಾಗಿರುವ ಒಂದು ಪುಟ್ಟ ಗ್ರಾಮ. ಬಿದಿರು ಹೆಣೆಯುವ ಬಡ ಕುಟುಂಬದ ಹತ್ತು ವರ್ಷದ ಸುಕ್ರಿ ತುಂಬಾ ಸೂಕ್ಷ್ಮ ಮನಸ್ಸಿನ ಬುದ್ಧಿವಂತ ಹುಡುಗಿ. ಸ್ವಾತಂತ್ರ್ಯ ಹೋರಾಟಗಾರರು  ಗಾಂಧಿ ಅದರ್ಶ ಮೈಗೂಡಿಸಿಕೊಂಡಿರುವ  ಗಾಂಧಿ ಅಜ್ಜ ನಡೆಸುತ್ತಿರುವ ಆಶ್ರಮವೊಂದರ ನಿಕಟ ಸಂಪರ್ಕ ಹೊಂದಿ ಸುಕ್ರಿ ಗಾಂಧಿ ಅಜ್ಜನಿಂದ ಗಾಂಧೀಜಿ ಬಾವಚಿತ್ರದ ಮಹತ್ವ  ಹಾಗೂ ಅದಕ್ಕಿರುವ  ಅಪ್ರತಿಮ ಶಕ್ತಿಯ ಬಗ್ಗೆ ಅರಿವು ಹೊಂದುತ್ತಾಳೆ. ಅಪ್ಪನ ಕುಡಿತ ಚಟಕ್ಕೆ  ಬೇಸತ್ತಿರುವ ಸುಕ್ರಿಗೆ ಅನೇಕ ಮಹತ್ತರ ಮೌಲ್ಯಗಳ ಗಾಂಧಿ ಬಾವಚಿತ್ರ  ಇರುವ  ನೋಟನ್ನು ಹೀಗೆ ದುಶ್ಚಟಗಳಿಗೆ ದುಷ್ಕಾರ್ಯಕ್ಕೆ ಬಳಸುವುದು ಗಾಂಧೀಜಿಗೆ  ಅವರ ಆದರ್ಶಗಳಿಗೆ ಅವಮಾನಿಸಿದ ಹಾಗಲ್ಲವೇ..? ಎಂಬ ಮಹತ್ವದ ಆಲೋಚನೆ ಅಚಾನಕ್ಕಾಗಿ ಮನದಲ್ಲಿ ಮೂಡುತ್ತದೆ. 




ಈ ಪ್ರಕ್ರಿಯೆ ವಿರುದ್ಧ ಸುಕ್ರಿ ಗಾಂಧೀಜಿ ತೋರಿದ ಸೌಮ್ಯ ಮಾರ್ಗದಲ್ಲೇ ಪ್ರತಿಭಟನೆಗೆ ಹೊರಡುತ್ತಾಳೆ. ಆರಂಭದಲ್ಲಿ ಎಲ್ಲರ ನಿರ್ಲಕ್ಷ್ಯಕ್ಕೆ ಒಳಗಾಗದರೂ ಸುಕ್ರಿಯ ಪ್ರತಿಭಟನೆ ಕಾಲ ಸರಿದಂತೆ ಬಹು ಗಂಭೀರ ಸ್ವರೂಪ ಪಡೆಯುತ್ತದೆ. ಜನ ಪ್ರತಿನಿಧಿಗಳ ಅಧಿಕಾರಿಗಳ ಆತಂಕಕ್ಕೆ ಕಾರಣವಾಗಿ ಹೊಸ ಸಂಚಲನ ಮೂಡಿಸುತ್ತದೆ. ಸಪ್ನಾದತ್ ಎಂಬ ಪತ್ರಿಕಾ ವರದಿಗಾರ್ತಿಯ ಪ್ರಾಮಾಣಿಕ ಪ್ರಯತ್ನದಿಂದ ಸುಕ್ರಿಯ ಪ್ರತಿಭಟನೆ ವಿಷಯ  ಪ್ರಧಾನಿಗೆ ತಲುಪುತ್ತದೆ. ಹೀಗೆ ಗಾಂಧಿ ತೋರಿದ ಹಾದಿಯಲ್ಲಿ ಸಾಗುವ  ಸುಕ್ರಿ  ನಿಜಕ್ಕೂ ಗಾಂಧೀಜಿ  ಮೌಲ್ಯಗಳನ್ನು ಎತ್ತಿ ಹಿಡಿಯಲು ಸಫಲಳಾದಳೇ..? ಸುಕ್ರಿಯ ಪ್ರತಿಭಟನೆಗೆ ನ್ಯಾಯ ಸಿಕ್ಕಿತೆ..?  ಈ  ಪ್ರಶ್ನಾರ್ಥಕ ಚಿಹ್ನೆಯೊಂದಿಗೆ ಕಥೆ ಮುಗಿಯುತ್ತದೆ. 




ಗಾಂಧೀಜಿ ಎಂದೆಂದಿಗೂ ಪ್ರಸ್ತುತ. ಅವರ ಮೌಲ್ಯಗಳು ತತ್ವಗಳ ಕುರಿತಾಗಿ ಅನೇಕ ಸಿನಿಮಾಗಳು, ನಾಟಕಗಳು,  ಕಥೆಗಳು ಬರುತ್ತಲೇ ಇವೆ. ನಾನು ಹಲವು ನಾಟಕಗಳನ್ನು ನೋಡಿ ವಿಮರ್ಶೆ ಕೂಡ ಬರೆದಿದ್ದೆನು. ಈ ವರ್ಷ ಕುಟುಂಬದೊಂದಿಗೆ ಗುಜರಾತ್ ಪ್ರವಾಸ ಕೈಗೊಂಡು  ಆಗಸ್ಟ್ ಮಾಹೆಯಲ್ಲಿ ಗಾಂಧೀಜಿ  ಮನೆಗೆ ಭೇಟಿ ನೀಡಿ ಧನ್ಯನಾದೆ ಎಂದುಕೊಂಡಿದ್ದೆನು.  ಸದ್ಯ ಯೋಗಿ ದೇವಗಂಗೆ ನಿರ್ದೇಶಕರು ಗಾಂಧಿ ಮತ್ತು ನೋಟು ಸಿನಿಮಾ ಮಾಡಿದ್ದಾರೆ. 



ಗಾಂಧಿ ತತ್ವ ಮೌಲ್ಯ ಶಿಕ್ಷಣ ಹೋರಾಟವನ್ನು ಚಿತ್ರದಲ್ಲಿ ಪ್ರತಿಫಲಿಸಿದ್ದಾರೆ. ನಿರ್ಮಾಪಕರು ಸುಧಾರಾಣಿ ಹೆಚ್.ಆರ್., ಹೆಚ್.ಕೆ.ವೀಣಾ ಪದ್ಮನಾಭ., ಮಂಜುನಾಥ್ ಬಿ.ಎನ್. ಅವರಾಗಿದ್ದಾರೆ. ಈ ಸಿನಿಮಾದಲ್ಲಿ ಚಿತ್ರ ಸಾಹಿತಿ ನಾಗೇಂದ್ರ ಪ್ರಸಾದ್ ಅವರ ಮಗಳು ದಿವಿಜಾ ಮುಖ್ಯ ಪಾತ್ರದಲ್ಲಿ ನಟಿಸಿದ್ದಾಳೆ. ಲೋಕೇಶ್ ಪ್ರಜ್ಞಾ ಸೇರಿದಂತೆ ಹಲವು ರಂಗಭೂಮಿ ನಟರು ಚಿತ್ರದಲ್ಲಿದ್ದಾರೆ. ಮಲೆನಾಡಿನ ಹಳ್ಳಿಗಳ ಶಿಕ್ಷಣ ವ್ಯವಸ್ಥೆಯಲ್ಲಿ ಸಿಗುವ ಗಾಂಧಿ ಮಂದಿರಗಳು ಮಕ್ಕಳ ಮಾನಸಿಕವಾಗಿ ಬೌಧಿಕವಾಗಿ ಗಾಂಧಿ ಆದರ್ಶಗಳು  ಎಷ್ಟು ಪ್ರಭಾವ ಬೀರುತ್ತದೆ ಎಂದು ನಿರೂಪಿಸುವ ಚಿತ್ರ 2023ರ ಮೈಸೂರು ದಸರಾ ಫಿಲಂ ಫೆಸ್ಟಿವೆಲ್‍ನಲ್ಲಿ  ದಿ.22-1-2023ರ ಭಾನುವಾರ ಬೆ.10ಕ್ಕೆ ಮೈಸೂರು ಐನಾಕ್ಸ್ ಚಿತ್ರಮಂದಿರದಲ್ಲಿ ಪ್ರದರ್ಶಿತವಾಗುತ್ತಿದೆ. ನೋಡಿ ಚಿತ್ರತಂಡವನ್ನು ಪ್ರೋತ್ಸಾಹಿಸಿ. 




-ಗೊರೂರು ಅನಂತರಾಜು, ಹಾಸನ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 



Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top