ಪುತ್ತೂರು: ಕ್ಯಾಪಿಟಲ್ ಮಾರ್ಕೆಟ್ ಸೆಕ್ಯೂರಿಟಿ ಅಂಡ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾದ ಅಡಿಯಲ್ಲಿ ಕಾನೂನುಬದ್ಧ ಜೂಜಾಟಕ್ಕೆ ಪೂರಕವಾದ ವ್ಯವಸ್ಥೆಯಾಗಿದ್ದು, ಇದರಲ್ಲಿ ಹೂಡಿಕೆ ಮಾಡುವಾಗ ಪ್ರಕ್ರಿಯೆಯ ಬಗ್ಗೆ ಸರಿಯಾಗಿ ಅರಿತುಕೊಳ್ಳುವುದು ಮುಖ್ಯವಾಗಿದೆ. ಇಂದಿನ ಕಾಲಘಟ್ಟದಲ್ಲಿ ಹಣಕಾಸಿನ ಸಾಕ್ಷರತೆ ಇರಬೇಕಾದದ್ದು ಅತ್ಯವಶ್ಯಕವಾಗಿದ್ದು, ತಮ್ಮ ವಿದ್ಯಾರ್ಥಿ ಜೀವನದಲ್ಲಿ ಹಣಕಾಸಿನ ಸಾಕ್ಷರತೆಗಾಗಿ ಅತ್ಯಮೂಲ್ಯ ಸಮಯವನ್ನ ಹೂಡಿಕೆ ಮಾಡಬೇಕು, ಇದು ಭವಿಷ್ಯದ ಭದ್ರತೆಗೆ ಸಹಾಯ ಮಾಡುತ್ತದೆ ಎಂದು ಎಂಪಿನೆಲ್ಲೆಡ್ ಬಿ ಎಸ್ ಇ ರಿಸೋರ್ಸ್ ಪರ್ಸನ್ ದೀಕ್ಷಾ ರಾವ್ ಹೇಳಿದರು.
ಅವರು ಪುತ್ತೂರಿನ ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ (ಸ್ವಾಯತ್ತ) ಮಹಾವಿದ್ಯಾಲಯದ ಸ್ನಾತಕೋತ್ತರ ವಾಣಿಜ್ಯ ವಿಭಾಗ ಮತ್ತು ಐಕ್ಯೂಎಸಿ ಘಟಕದ ಸಹಯೋಗದಲ್ಲಿ ಆಯೋಜಿಸಿದ ಬಾಂಬೆ ಸ್ಟಾಕ್ ಎಕ್ಸ್ಚೇಂಜ್- ಬಂಡವಾಳ ಮಾರುಕಟ್ಟೆಯ ಜಾಗೃತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಷ್ಣು ಗಣಪತಿ ಭಟ್ ಮಾತನಾಡಿ "ಸಂಪನ್ಮೂಲವನ್ನು ಹೂಡಿಕೆ ಮಾಡುವಾಗ ಮಾರುಕಟ್ಟೆ ವಿಶ್ಲೇಷಣೆ ಮಾಡಬೇಕು, ಮಾರುಕಟ್ಟೆಯ ಏರುಳಿತಗಳನ್ನು ಅರಿತುಕೊಂಡ ನಂತರವೇ ಹೂಡಿಕೆ ಮಾಡುವುದು ಉತ್ತಮ, ಇದರಿಂದ ನಷ್ಟದ ಸಾಧ್ಯತೆಗಳನ್ನು ಕಡಿಮೆ ಮಾಡಬಹುದು" ಎಂದು ಹೇಳಿದರು.
ಈ ಸಂದರ್ಭದಲ್ಲಿ ಸ್ನಾತಕೋತ್ತರ ವಿಭಾಗದ ಮುಖ್ಯಸ್ಥೆ ಡಾ. ವಿಜಯ ಸರಸ್ವತಿ, ಪ್ರಾಧ್ಯಾಪಕ ಲಕ್ಷ್ಮೀ ಭಟ್, ರಾಘವೇಂದ್ರ, ಶ್ವೇತಾ ಜಿ ರಾವ್ ಉಪಸ್ಥಿತರಿದ್ದರು. ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಸ್ವಾತಿ ಸ್ವಾಗತಿಸಿ, ಪ್ರಜ್ಞಾ ವಂದಿಸಿದರು. ವಿದ್ಯಾರ್ಥಿ ವರುಣ್ ಕಾರ್ಯಕ್ರಮ ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ