ಉಜಿರೆ: ಬ್ರಹ್ಮಾವರ ತಾಲ್ಲೂಕಿನ ಅಲೆಯ ಮೇಲ್ಮಠ ಗೋಪಾಲಕೃಷ್ಣ ಆಂಜನೇಯ ಹೂವಿನ ಕೋಲು ಜಾನಪದ ಕಲಾ ತಂಡದ ಕಲಾವಿದರು ಭಾನುವಾರ ಧರ್ಮಸ್ಥಳದಲ್ಲಿ “ಮೀನಾಕ್ಷಿ ಕಲ್ಯಾಣ” ಯಕ್ಷಗಾನ ಪ್ರದರ್ಶನ ನೀಡಿದರು.
ಆರು ವರ್ಷ ಪ್ರಾಯದ ಶ್ರೀವತ್ಸ ಅಡಿಗ ಈಶ್ವರನ ಪಾತ್ರದಲ್ಲಿ, 10 ವರ್ಷ ಪ್ರಾಯದ ಬಾಲಕಿ ಕುಮಾರಿ ಸೃಷ್ಟಿ ಅಡಿಗ ಮೀನಾಕ್ಷಿ ಪಾತ್ರದಲ್ಲಿ ಉತ್ತಮ ಅಭಿನಯದೊಂದಿಗೆ. ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು.
ಶ್ರೀಮತಿ ರಶ್ಮಿ ಅಡಿಗ ಇವರಿಗೆ ತರಬೇತಿ ನೀಡಿರುವರು. ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯೋಪಾಧ್ಯಾಯ ಉಡುಪ ಬಾಲ ಕಲಾವಿದರಿಗೆ ಮಾರ್ಗದರ್ಶನ ಮತ್ತು ಪ್ರೇರಣೆ ನೀಡಿ ಪ್ರೋತ್ಸಾಹಿಸಿದ್ದಾರೆ. ಹಿಮ್ಮೇಳದಲ್ಲಿ ಭಾಗವತರಾಗಿ ಗುಂಡಾಚಾರ್ ಮತ್ತು ಮದ್ದಳೆವಾದನದಲ್ಲಿ ಮನೋಜ್ ಸಹಕರಿಸಿದರು.
ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಯಕ್ಷಗಾನ ಪ್ರದರ್ಶನ ವೀಕ್ಷಿಸಿ ಬಾಲಕಲಾವಿದರನ್ನು ಅಭಿನಂದಿಸಿ ಆಶೀರ್ವದಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ