ದೇವರು ಮತ್ತು ಭಕ್ತರ ನಡುವಿನ ಸಂವಾದಕ್ಕೆ ಭಜನೆಯೇ ಸುಲಭ ಮಾರ್ಗ: ಡಾ. ಡಿ. ಹೇಮಾವತಿ ವೀ. ಹೆಗ್ಗಡೆ

Upayuktha
0

ಭಜನಾ ಕಮ್ಮಟದ ರಜತ ಮಹೋತ್ಸವ, ಭಜನಾ ತರಬೇತಿ-6ನೇ ದಿನ




ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯುತ್ತಿರುವ ಭಜನಾ ಕಮ್ಮಟದ ರಜತ ಮಹೋತ್ಸವದ ಆರನೇ ದಿನವಾದ ಮಂಗಳವಾರ (ಅ.3) ಸಂಪನ್ಮೂಲ ವ್ಯಕ್ತಿಗಳಾಗಿ ಶಂಕರ್‌ ಶ್ಯಾನ್‌ಭೋಗ್‌ ಅವರು ಭಜನಾ ತರಬೇತಿಯನ್ನು ನಡೆಸಿಕೊಟ್ಟರು. ಮತ್ತು ಶ್ರೀಮತಿ ಸೌಮ್ಯ ಸುಭಾಷ್‌ ಅವರು ಭಜನೆ, ಶೋಭಾನೆ, ಸಂಪ್ರದಾಯ ಹಾಡುಗಳನ್ನು ಕಮ್ಮಟದಲ್ಲಿ ಹೇಳಿಕೊಟ್ಟರು.


ಮಧ್ಯಾಹ್ನ 12 ಘಂಟೆಗೆ ಡಾ| ಡಿ. ಹೇಮಾವತಿ ವೀ ಹೆಗ್ಗಡೆಯವರು ಧಾರ್ಮಿಕ ಉಪನ್ಯಾಸವನ್ನು ನಡೆಸಿಕೊಟ್ಟರು. ಅವರು ಭಜನಾ ಸಂಸ್ಕತಿ ಬೆಳೆಸುವಲ್ಲಿ ಭಜನಾ ಮಂಡಳಿಗಳ ಪಾತ್ರದ ಬಗ್ಗೆ ಮಾತನಾಡುತ್ತಾ, “ಪಾಪ ಕಳೆಯಲು ಭಜನೆ ಮುಖ್ಯ. ಭಜನಾ ಕಮ್ಮಟ ಇಪ್ಪತ್ತೈದು ವರ್ಷಗಳನ್ನು ಪೂರೈಸಿತು ಎನ್ನುವಾಗ ಆಶ್ಚರ್ಯವಾಗುತ್ತದೆ. ಈ ಕಮ್ಮಟವು ಒಂದು ವಾರ ಉತ್ಸಾಹ, ಹುಮ್ಮಸ್ಸನ್ನು ತುಂಬುವ ಕಾರ್ಯಕ್ರಮವಾಗಿದೆ. ಇಡೀ ಊರಿಗೆ ನಗರ ಸಂಕೀರ್ತನೆಯ ಮೂಲಕ ಭಜನೆಯ ಸುದ್ದಿಯನ್ನು ತಲುಪಿಸುವ ಕಾರ್ಯಕ್ರಮ ಇದಾಗಿದೆ. ಈ ಒಂದು ವಾರದ ಭಜನೆಯ ಮೂಲಕ ಇಡೀ ಸಮಾಜವೇ ಶುದ್ಧಿಯಾಗುತ್ತದೆ. ದೇವರು ಮತ್ತು ಭಕ್ತರ ನಡುವಿನ ಮಾತುಕತೆ, ಸಂವಾದ ಪ್ರಾರ್ಥನೆ, ನಡೆಸಲು ಭಜನೆಯೇ ಸುಲಭ ಮಾರ್ಗವಾಗಿದೆ. ಓರ್ವನ ಪ್ರಾರ್ಥನೆಗಿ೦ತ ಸಾಮೂಹಿಕ ಪ್ರಾರ್ಥನೆಗೆ ಅಧಿಕ ಶಕ್ತಿ ಇದೆ. ಚಂದ್ರಯಾನದ ಬಾಹ್ಯಾಕಾಶ ಯಾನ ಯಶಸ್ವಿಯಾಗಲು ಕೂಡ ವಿಜ್ಞಾನಿಗಳು ತಿರುಪತಿಗೆ ಹೋಗಿ ಪ್ರಾರ್ಥನೆ ಸಲ್ಲಿಸಿದ್ದರು. ನಾವು ಯಂತ್ರಗಳನ್ನು ಜೋಡಿಸುತ್ತೇವೆ. ಆದರೆ ಜಯಪ್ರದ ಆಗಬೇಕು ಎಂದರೆ ದೇವರ ಅನುಗ್ರಹ ಬೇಕು, ದೇವರ ಬಗ್ಗೆ ನಂಬಿಕೆ ಬೇಕು'' ಎಂದು ಹೇಳಿದರು.


ಕೋಪ, ಅಸಹನೆ, ಅಶಿಸ್ತು ದುಡುಕುತನ ಬಿಟ್ಟು ಹೋಗಬೇಕು. ಒಳ್ಳೆಯ ವಿಚಾರ ತೆಗೆದುಕೊ೦ಡು ಹೋಗಬೇಕು, ಕ್ಷೇತ್ರದ ರಾಯಭಾರಿಗಳಾಗಬೇಕು. ನೀರಿನ ಮಧ್ಯಕ್ಕೆ ಹೋಗಬೇಕಾದರೆ ದೋಣಿಯಲ್ಲಿ ರಂಧ್ರವಿದ್ದರೆ ದೋಣಿಯಾನ ಸುರಕ್ಷಿತವಲ್ಲ. ದೋಣಿ ಸರಿಯಾಗಿದ್ದರೆ ಮಾತ್ರ ದಡಕ್ಕೆ ಮುಟ್ಟಿಸುವ ಕೆಲಸಮಾಡುತ್ತದೆ. ನಮ್ಮಲ್ಲಿರುವ ದುರಭ್ಯಾಸಗಳೆಂಬ ರ೦ಧ್ರವನ್ನು ಮುಚ್ಚಬೇಕಾಗಿದೆ. ಸುವರ್ಣಗೆಡ್ಡೆ ಬೆಳೆಯಬೇಕಾದರೆ ಹಳ್ಳಿಗಳಲ್ಲಿ ಗಿಡದ ಮೇಲೆ ಕಲ್ಲು ಇಡುತ್ತಾರೆ. ನೋಟಿಗೆ ಮುದ್ರೆ ಬಿದ್ದಾಗ ಮಾತ್ರ ಆ ನೋಟಿಗೆ ಬೆಲೆ ಬರುತ್ತದೆ. ಇಲ್ಲದಿದ್ದರೆ ಅದು ಕೇವಲ ಬರೀ ಕಾಗದವಾಗುತ್ತದೆ. ಜನ ಅದನ್ನು ಸುಟ್ಟುಹಾಕುತ್ತಾರೆ. ಹಾಗೆಯೇ ದೇವರ ಮೇಲೆ ಶ್ರದ್ಧೆ ಭಕ್ತಿ ಬರಬೇಕು. ಕಲ್ಲಿನಲ್ಲಿ ಶ್ರದ್ಧೆ ಭಕ್ತಿ ಹುಟ್ಟಿದಾಗ ದೇವರ ಮೂರ್ತಿಯಾಗುತ್ತದೆ. ಘಟ ಸ್ನಾನ ಮಾಡಿದ ಹಾಗೆ ಜೀವನ ಆಗಬಾರದು. ಸಂಜೆ ಸಮಯದಲ್ಲಿ ಹತ್ತು ನಿಮಿಷ ಭಜನೆ ಮಾಡಿದಾಗ ದಿನದ ಪಾಪಕ್ಯತ್ಯವೆಲ್ಲ ನಾಶವಾಗುತ್ತದೆ. ಭಾರತದ ಸಂಸ್ಕೃತಿ ಶ್ರೇಷ್ಠ ಸಂಸ್ಕೃತಿಯಾಗಿದ್ದು ಅದಕ್ಕೆ ಭಜನೆಯೇ ಸ್ನಾಯಾಗಿದೆ. ಕರ್ಮಸಿದ್ಧಾಂತ ಎನ್ನುವುದು ನಾವು ಮಾಡುವ ಪಾಪ ಪುಣ್ಯದಲ್ಲಿದೆ. ಬದುಕು ಧಾರ್ಮಿಕ ಪ್ರವೃತ್ತಿಯ ಮೇಲೆ ನಿಂತಿದೆ. ದೃಷ್ಟಿ ಬದಲಾದರೆ ಚಿಂತನೆ ಬದಲಾಗುತ್ತದೆ. ಹಾಗೆಯೇ ಸಜ್ಜನರ ಸಹವಾಸದಿ೦ದ ಜೀವನ ಪಾವನವಾಗುತ್ತದೆ ಎಂದು  ಡಾ| ಡಿ. ಹೇಮಾವತಿ ವೀ ಹೆಗ್ಗಡೆಯವರು ನುಡಿದರು.


ಶ್ರೀ ಹರ್ಷೇಂದ್ರ ಕುಮಾರ್ ಅವರು ಭಾಗವಹಿಸಿ ಭಜಕರಿಗೆ, ನಾವೆಲ್ಲ ಅನುಷ್ಠಾನ ಮಾಡುವವರಾಗುವ ಬದಲು ಅನುಭವಿಸುವಂತವರಾಗಬೇಕು, ಡಾ|| ಡಿ ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ, ಡಾ| ಹೇಮಾವತಿ ವೀ ಹೆಗ್ಗಡೆಯವರ ಪರಿಕಲ್ಪನೆಯಲ್ಲಿ ನಡೆಯುವ ಈ ಕಮ್ಮಟದಲ್ಲಿ ತಾವೆಲ್ಲರೂ ಭಾಗವಹಿಸಿರುತ್ತೀರಿ ಇದರ ಸದುಪಯೋಗವನ್ನು ಪಡೆದುಕೊಳ್ಳಿ.  ಸ್ವಾಮಿಯ ಅನುಗ್ರಹ ಸದಾ ನಿಮ್ಮ ಮೇಲಿರಲಿ ಎಂದು  ಶುಭ ಹಾರೈಸಿದರು.


ಶ್ರೀ ಕ್ಷೇತ್ರದ ವಿವಿಧ ಭಾಗಗಳಿಗೆ ನಗರ ಸ೦ಕೀರ್ತನೆಗೆ ತೆರಳಿ ಶ್ರೀ ಕ್ಷೇತ್ರದಲ್ಲಿ ವಿಶೇಷ ಭಜನಾ ಸ೦ಚಲನವನ್ನು ಮೂಡಿಸಲಾಯಿತು. ಈ ಸಂದರ್ಭದಲ್ಲಿ ನಾಗರಿಕರ ಸಹಕಾರ ಮತ್ತು ಸ್ಟ೦ದನೆ ಅತ್ಯದ್ಭುತವಾಗಿತ್ತು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಹಾಸ್ಯಭರಿತ ಮಾತಿನ ಮ೦ಟಪ' ಕಾರ್ಯಕ್ರಮವನ್ನು ಚಿಕ್ಕಮಗಳೂರು ಜಿಲ್ಲೆಯ ಹಿರೇಮಗಳೂರಿನ ಕನ್ನಡ ಪೂಜಾರಿ, ಸಾಹಿತಿಗಳೂ ಆದ ಶ್ರೀ ಹಿರೇಮಗಳೂರು ಕಣ್ಣನ್‌ ಇವರು ನಡೆಸಿಕೊಟ್ಟರು. ಪ್ರತೀ ದಿನ ಪುರುಷ ಶಿಬಿರಾರ್ಥಿಗಳಿಗೆ ರಾಜ್ಯಮಟ್ಟದ ನೃತ್ಯ ಭಜನಾ ತರಬೇತುದಾರರಾದ ರಮೇಶ್‌ ಕಲ್ಮಾಡಿ ಹಾಗೂ ಶಂಕರ್‌, ಅವರಿಂದ ಕುಣಿತ ಭಜನಾ ತರಬೇತಿಯನ್ನು, ಮಹಿಳಾ ಶಿಬಿರಾರ್ಥಿಗಳಿಗೆ ವಿದುಷಿ ಚೈತ್ರಾ ಧರ್ಮಸ್ಥಳ ಅವರಿಂದ ನೃತ್ಯ ಭಜನಾ ತರಬೇತಿಯನ್ನು ನಡೆಸಲಾಗುತ್ತಿದೆ.


ಭಜನಾ ಕಮ್ಮಟದಲ್ಲಿ ಶ್ರೀ ಶ್ರೀ ಶ್ರೀ ಮೋಹನದಾಸ ಸ್ಟಾಮೀಜಿ, ಶ್ರೀ ಧಾಮ ಮಾಣಿಲ, ಡಾ| ಹೇಮಾವತಿ ವೀ. ಹೆಗ್ಗಡೆಯವರು, ಶ್ರೀಮತಿ ಸುಪ್ರಿಯಾ ಹರ್ಷೇಂದ್ರ ಕುಮಾರ್‌, ಕಮ್ಮಟದ ಸಂಚಾಲಕರಾದ ಸುಬ್ರಹ್ಮಣ್ಯಪ್ರಸಾದ್‌, ಕಾರ್ಯದರ್ಶಿ ಸುರೇಶ್‌ ಮೊಯಿಲಿ, ಪರಿಷತ್‌ನ ಅಧ್ಯಕ್ಷರಾದ ಬಾಲಕೃಷ್ಣ ಪಂಜ, ಕಾರ್ಯದರ್ಶಿ ಪುರುಷೋತ್ತಮ ಪಿ.ಕೆ., ಕಮ್ಮಟದ ಸದಸ್ಯರಾದ ರತ್ನವರ್ಮ ಜೈನ್‌, ಕ್ರೀನಿವಾಸ್‌ರಾವ್‌, ಕೋಶಾಧಿಕಾರಿ ಧರ್ಣಪ್ಪ, ಭವಾನಿ, ಸಂಗೀತ, ಶ್ರೀನಿವಾಸ್‌, ಜನಾರ್ಧನ್‌, ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top