ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಹೇಮಾವತಿ ವೀ. ಹೆಗ್ಗಡೆಯವರು “ಸಿರಿ” ಸಂಸ್ಥೆಯ ಹೊಸ ಉತ್ಪನ್ನಗಳನ್ನು ಧರ್ಮಸ್ಥಳದಲ್ಲಿ ಲೋಕಾರ್ಪಣೆ ಮಾಡಿದರು.
ಉಜಿರೆ: ದಿನ ನಿತ್ಯದ ಪೂಜೆ, ದೇವರ ಧ್ಯಾನ ಹಾಗೂ ಪ್ರಾರ್ಥನೆ ಸಮಯದಲ್ಲಿ ದೀಪ ಮತ್ತು ಧೂಪ ಬಳಸುವುದು ನಮ್ಮ ಸಂಪ್ರದಾಯವಾಗಿದೆ. ಸಿರಿ ಸಂಸ್ಥೆಯ ನೂತನ ಉತ್ಪನ್ನಗಳಾದ ಶೃತಿ, ಸ್ತುತಿ, ಸಂಯಮ ಮತ್ತು ಶ್ರದ್ಧಾ ಎಂಬ ಹೊಸ ಅಗರ್ ಬತ್ತಿಗಳನ್ನು ಮೈಸೂರಿನ ಸೈಕಲ್ ಬ್ರಾಂಡ್ ಅಗರ್ ಬತ್ತಿ ಸಹಭಾಗಿತ್ವದಲ್ಲಿ ಧರ್ಮಸ್ಥಳದಲ್ಲಿ ಸೋಮವಾರ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಬಿಡುಗಡೆಗೊಳಿಸಿ ಶುಭ ಹಾರೈಸಿದರು.
ನೂತನ ಉತ್ಪನ್ನಗಳು ಎಲ್ಲರ ಮನೆ-ಮನಗಳನ್ನು ಬೆಳಗಲಿ ಎಂದು ಹೆಗ್ಗಡೆಯವರು ಹಾರೈಸಿದರು. ನೂತನ ಉತ್ಪನ್ನಗಳಿಂದ ಗ್ರಾಮೀಣ ಮಹಿಳೆಯರಿಗೆ ಹೆಚ್ಚಿನ ಉದ್ಯೋಗಾವಕಾಶ ಲಭಿಸಲಿದೆ ಎಂದು ಹೆಗ್ಗಡೆಯವರು ತಿಳಿಸಿದರು.
ಸೈಕಲ್ ಬ್ರಾಂಡ್ ಅಗರ್ ಬತ್ತಿಯ ಸಿ.ಇ.ಒ. ಅರ್ಜುನ್‌ರಂಗ ಮತ್ತು ವಿಜಿರೋಮ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ವಿಜಯಲಕ್ಷ್ಮಿ ವಿಜಯಕುಮಾರ್ ಶುಭಾಶಂಸನೆ ಮಾಡಿದರು.
ಸಿರಿ ಸಂಸ್ಥೆಗೆ ನಾಲ್ಕು ಸಂಚಾರಿ ವಾಹನಗಳನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಹಸ್ತಾಂತರಿಸಲಾಯಿತು. ಸಿ.ಒ.ಒ. ಅನಿಲ್ ಕುಮಾರ್ ಉಪಸ್ಥಿತರಿದ್ದದರು.
ಸಿರಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೆ. ಎನ್. ಜನಾರ್ದನ್ ಸ್ವಾಗತಿಸಿದರು. ಆಡಳಿತ ನಿರ್ದೇಶಕ ಪ್ರಸನ್ನ ಯು. ಧನ್ಯವಾದವಿತ್ತರು. ಜೀವನ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ