ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈದ ಅಂಬಿಕಾ ಕಾಲೇಜಿನ ಧನ್ವಿತ್

Upayuktha
0



ಪುತ್ತೂರು : ನಗರದ ನಟ್ಟೋಜ ಪೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ನೆಲ್ಲಿಕಟ್ಟೆಯ ಅಂಬಿಕಾ ಪದವಿ ಪೂರ್ವ ವಿದ್ಯಾಲಯದ ಪ್ರಥಮ ಪಿ.ಯು.ಸಿ ವಿದ್ಯಾರ್ಥಿ ಧನ್ವಿತ್ ಅವರು ಕೆನಡಾದ ವಿಂಡ್ಸರ್‍ನಲ್ಲಿ ಸೆಪ್ಟಂಬರ್ ಹದಿಮೂರರಿಂದ ಹದಿನೇಳನೆ ತಾರೀಕಿನವರೆಗೆ ನಡೆದ ಕಾಮನ್ ವೆಲ್ತ್ ಲೈಫ್ ಸೇವಿಂಗ್ ಚಾಂಪಿಯನ್‍ಶಿಪ್‍ನಲ್ಲಿ ಸ್ಪರ್ಧಿಸಿ ಸಾಧನೆಗೈದಿದ್ದಾರೆ. 



4x25 ಮೀಟರ್ ಮನಿಕಿನ್ ಕ್ಯಾರಿ ರಿಲೆಯಲ್ಲಿ ಎಂಟನೆಯ ಸ್ಥಾನ, 4x50 ಮಿಡ್ಲೆ ರಿಲೆಯಲ್ಲಿ ಏಳನೆಯ ಸ್ಥಾನ ಹಾಗೂ 200 ಮೀಟರ್ ಒಬ್ಸ್ಟೆಕಲ್ ಸ್ವಿಮ್‍ನಲ್ಲಿ ಹದಿನೈದನೆಯ ಸ್ಥಾನ ಪಡೆದು ವಿಶ್ವದ ಗಮನ ಸೆಳೆದಿದ್ದಾರೆ. ಮರೀಲಿನ ಕೇಶವ ಕುಮಾರ್ ಕೆ ಎಂ ಮತ್ತು ಮೀನಾಕ್ಷಿ ದಂಪತಿ ಪುತ್ರನಾದ ಧನ್ವಿತ್ ಇವರು, ಪುತ್ತೂರು ಬಾಲವನ ಈಜು ಕೊಳದ ನುರಿತ ತರಬೇತುದಾರರಾದ ರೋಹಿತ್ ಪಿ, ದೀಕ್ಷಿತ್ ರಾವ್, ಪಾರ್ಥ ವಾರಣಾಸಿ ಮತ್ತು ನಿರೂಪ್ ಜಿ.ಆರ್ ಅವರಿಂದ ತರಬೇತಿ ಪಡೆದಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ


web counter 


إرسال تعليق

0 تعليقات
إرسال تعليق (0)
To Top