ಕುಂಬಳೆ: ಇಂದು (ಅ.29) ಭಾನುವಾರ ಮಧ್ಯಾಹ್ನ ಕಂಬಾರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ನಡೆದ ಕುಡಾಲು-ಬಾಡೂರು ಗ್ರಾಮಗಳ ಭಕ್ತರ ಸಭೆಯಲ್ಲಿ ಇನ್ನೂರಕ್ಕೂ ಮಿಕ್ಕಿ ಜನರು ಭಾಗವಹಿಸಿದ್ದರು.
ಶಾಂಭವಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವು ಶ್ರೀಮತಿ ವೀಣಾ ಶೆಟ್ಟಿ ಆನೆಬಾಗಿಲು ಅವರ ಪ್ರಾರ್ಥನೆಯೊಂದಿಗೆ ಆರಂಭಗೊಂಡಿತು. ಮೊಕ್ತೇಸರರಾದ ನೆರಿಯ ಹೆಗಡೆ ಲಕ್ಷ್ಮೀ ನಾರಾಯಣ ಭಟ್, ರವಿಶಂಕರ ಭಟ್ ಎಡಕ್ಕಾನ ಹಾಗೂ ಕ್ಷೇತ್ರದ ಸೇವಾ ಸಮಿತಿಯ ಅಧ್ಯಕ್ಷರಾದ ಕೃಷ್ಣ ಭಟ್ ಮರುವಳ ವೇದಿಕೆಯಲ್ಲಿದ್ದರು.
ರವಿಶಂಕರ್ ಭಟ್ ಅವರು ಮುಂದಿನ ನವೆಂಬರ್ 2ನೇ ತಾರೀಖು ನಡೆಯಲಿರುವ ಅನುಜ್ಞಾ ಕಲಶ ಹಾಗೂ ಜಟಾಧಾರಿ, ಗಣಪತಿ,ಶಾಸ್ತಾರ ದೇವರುಗಳ ಬಾಲಾಲಯ ಪ್ರತಿಷ್ಠೆ ಕುರಿತು ಮಾಹಿತಿ ನೀಡಿದರು. ಮುಂದುವರಿದು ಸುತ್ತು ಗೋಪುರ, ಪಾಕಶಾಲೆ,ವಸಂತಕಟ್ಟೆ ಮತ್ತಿತರ ಪುನರ್ನಿರ್ಮಾಣ ಬಗ್ಗೆ ವಿವರಿಸಿದರು.
ಲಕ್ಷ್ಮೀ ನಾರಾಯಣ ಭಟ್ ಅವರು ಜೀರ್ಣೋದ್ಧಾರ ಕಾಮಗಾರಿಗಳ ಬಗ್ಗೆ ಇನ್ನಷ್ಟು ವಿಷಯ ತಿಳಿಸಿದರು. ಕೃಷ್ಣ ಭಟ್ ಅವರು ಜೀರ್ಣೋದ್ಧಾರ ಕಾಮಗಾರಿಗಳ ಯಶಸ್ಸಿಗೆ ಊರ ಪರವೂರ ಭಕ್ತರ ನೆರವು ಕೋರಿದರು.
ಮಧ್ಯಾಹ್ನ ದ ಮಹಾ ಪೂಜೆಯ ಸಂದರ್ಭದಲ್ಲಿ ಸಮಸ್ತ ಭಕ್ತರ ಪರವಾಗಿ ವಿಶೇಷ ಕಾರ್ತಿಕ ಪೂಜೆ ಸೇವೆ ಸಲ್ಲಿಸಿ ಸಾಮೂಹಿಕ ಪ್ರಾರ್ಥನೆ ನಡೆಸಲಾಯಿತು. ಸೇವಾ ಸಮಿತಿಯ ಕಾರ್ಯದರ್ಶಿ ಅಶೋಕ್ ಬಾಡೂರು ವಂದನಾರ್ಪಣೆ ಮಾಡಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ