ಮಂಗಳೂರು: ಮಂಗಳೂರಿನ ನೃತ್ಯ ತಂಡ ಗಾನ ನೃತ್ಯ ಆಕಾಡೆಮಿಯ ನಿರ್ದೇಶಕಿ ಗುರು ವಿದ್ಯಾಶ್ರೀ ರಾಧಾಕೃಷ್ಣ ಮತ್ತು ತಂಡ ಭಾರತ ಸರಕಾರದ ಸಂಸ್ಕೃತಿ ಸಚಿವಾಲಯ ಅಂಗವಾದ ಇಂಡಿಯನ್ ಕೌನ್ಸಿಲ್ ಫಾರ್ ಕಲ್ಚರಲ್ ರಿಲೇಶನ್ಸ್ (ICCR) ಪ್ರಾಯೋಜಕತ್ವದಲ್ಲಿ ದಕ್ಷಿಣ ಕೊರಿಯಾದ ರಾಜಧಾನಿ ಸಿಯೋಲ್ ಒಳಗೊಂಡಂತೆ ಅನೇಕ ವೇದಿಕೆಗಳಲ್ಲಿ ನೃತ್ಯ ಪ್ರದರ್ಶನ ಹಾಗೂ ಕಾರ್ಯಾಗಾರಗಳನ್ನು ಯಶಸ್ವಿಯಾಗಿ ನಡೆಸಿತು.
ಭಾರತ ಹಾಗೂ ಕೊರಿಯಾದ ರಾಜತಾಂತ್ರಿಕ ವ್ಯವಹಾರಗಳ 50ನೇ ವರ್ಷಾಚರಣೆಯ ಸಲುವಾಗಿ ಭಾರತೀಯ ಕಲೆಗಳ ಪ್ರದರ್ಶನಗಳ ಉತ್ಸವ ಇದಾಗಿತ್ತು. ಕೊರಿಯಾದ ವಿವಿಧ ಪ್ರಖ್ಯಾತ ವೇದಿಕೆಗಳಲ್ಲಿ ಒಟ್ಟು 7 ಪ್ರದರ್ಶನಗಳು ಹಾಗೂ 2 ಪ್ರಾತ್ಯಕ್ಷಿಕೆಗಳನ್ನು ಆಯೋಜಿಸಲಾಗಿತ್ತು.
ಅಕ್ಟೋಬರ್ 11ರಂದು ಯೊಂಗ್ಸೆ ಯೂನಿವರ್ಸಿಟಿ ಸಭಾಂಗಣದಲ್ಲಿ ನಡೆದ ಸಾರಂಗ್ ಉತ್ಸವದ ಮುಖ್ಯ ಅಂಗವಾಗಿ ಪ್ರದರ್ಶನಗೊಂಡ ವಿದ್ಯಾಶ್ರೀ ರಾಧಾಕೃಷ್ಣ ತಂಡದ ಕಾರ್ಯಕ್ರಮವು ಭಾರತೀಯ ರಾಯಭಾರಿ ಶ್ರೀ ಅಮಿತ್ ಕುಮಾರ್ ಸೇರಿದಂತೆ ಅನೇಕ ರಾಜತಾಂತ್ರಿಕ ಗಣ್ಯರು, ಮಾಧ್ಯಮ, ಕಲೆ ಹಾಗೂ ಸಿನಿಮಾ ಕ್ಷೇತ್ರಗಳ 500ಕ್ಕೂ ಮಿಕ್ಕಿ ಪ್ರೇಕ್ಷಕರಿಂದ ಪ್ರಶಂಸೆಗೂಳಗಾಯಿತು. ಆಹ್ವಾನಿತ ತಂಡದಲ್ಲಿ ವಿದ್ಯಾಶ್ರೀ ರಾಧಾಕೃಷ್ಣ ಇವರ ಶಿಷ್ಯೆಯರಾದ ಅಂಕಿತ ರೈ, ಮೇಘಾ ಮಲರ್, ತ್ವಿಶಾ ಶೆಟ್ಟಿ, ದಿಶಾ ಗಿರೀಶ್, ಪೂರ್ವೀ ಕೃಷ್ಣ, ಬಿಲ್ವ ನೃತ್ಯ ಸಂಸ್ಥೆಯ ರಶ್ಮಿ ಉಡುಪ ಹಾಗೂ ತಾಂತ್ರಿಕ ಸಹಕಾರದಲ್ಲಿ ರಾಧಾಕೃಷ್ಣ ಭಟ್ ಭಾಗವಹಿಸಿದ್ದರು.
ICCR ಮೂಲಕ ಭಾರತವನ್ನು ಪ್ರತಿನಿಧಿಸಿ ವಿದೇಶದಲ್ಲಿ ನೃತ್ಯ ಕಾರ್ಯಕ್ರಮವನ್ನು ನೀಡಿದ ಮಂಗಳೂರಿನ ಪ್ರಥಮ ತಂಡ ಇದಾಗಿದೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ