ದ.ಕ-ಉಡುಪಿ ಜಿಲ್ಲಾ ಮಟ್ಟದ ಅಂತರ್ ಐಟಿಐ ತ್ರೋಬಾಲ್ ಪಂದ್ಯಾಟ: ಎಸ್‌ಡಿಎಂ ಮಹಿಳಾ ಐಟಿಐ ಪ್ರಥಮ

Upayuktha
0


ಉಜಿರೆ: ಸಂತ ಅಲೋಶಿಯಸ್ ಐಟಿಐ ಹಳೆ ವಿದ್ಯಾರ್ಥಿ ಸಂಘ ಹಾಗೂ ರಿಯಲ್ ಎಸ್ಟೇಟ್ ಗ್ರೂಪ್ ಮಂಗಳೂರು ಇವರ ಜಂಟಿ ಆಶ್ರಯದಲ್ಲಿ  ಶನಿವಾರ (ಅ.28) ಸಂತ ಅಲೋಶಿಯಸ್ ಕಾಲೇಜಿನಲ್ಲಿ (ಡಿಗ್ರಿ ಕಾಲೇಜಿನ ಮುಂಭಾಗ) ನಡೆದ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ಮಟ್ಟದ ಅಂತರ್ ಐಟಿಐ (ಪ್ರಸ್ತುತ ಸಾಲಿನಲ್ಲಿ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ) ವಾಲಿಬಾಲ್ (ಹುಡುಗರಿಗೆ) ಹಾಗೂ ತ್ರೋಬಾಲ್ (ಹುಡುಗಿಯರಿಗೆ) ಪಂದ್ಯಾಟವನ್ನು ನಡೆಸಲಾಯಿತು.


ಹುಡುಗಿಯರ ತ್ರೋಬಾಲ್ ಪಂದ್ಯಾವಳಿಯಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆ ಉಜಿರೆಯ ವಿದ್ಯಾರ್ಥಿನಿಯರು ಪ್ರಥಮ ಸ್ಥಾನ ಪಡೆದು ಶೀಲ್ಡ್ ಹಾಗೂ ರೂಪಾಯಿ ನಾಲ್ಕು ಸಾವಿರವನ್ನು ತಮ್ಮದಾಗಿಸಿಕೊಂಡರು.


ಕು. ರಮ್ಲತ್ ಆಲ್ ರೌಂಡರ್ ಆಗಿ ಕು. ಶಾಲಿನಿ ಡಿ. ಉತ್ತಮ ಎಸೆತಗಾರ್ತಿಯಾಗಿ ಆಯ್ಕೆ ಆಗಿರುತ್ತಾರೆ. 


ವಿಜೇತ ವಿದ್ಯಾರ್ಥಿನಿಯರನ್ನು ಸಂಸ್ಥೆಯ ಅಧ್ಯಕ್ಷರಾದ ಪೂಜ್ಯ ಡಾ.ಡಿ ವೀರೇಂದ್ರ ಹೆಗ್ಗಡೆಯವರು ಹಾಗೂ ಮಾತೃಶ್ರೀ ಹೇಮಾವತಿ ವಿ. ಹೆಗ್ಗಡೆಯವರು ಹಾಗೂ ಗೌರವಾನ್ವಿತ ಕಾರ್ಯದರ್ಶಿಗಳಾದ ಡಿ. ಹರ್ಷೇಂದ್ರ ಕುಮಾರ್ ಹಾಗೂ ಡಾ. ಸತೀಶ್ಚಂದ್ರ ಎಸ್ ಇವರು ಅಭಿನಂದನೆಗಳನ್ನು ಸಲ್ಲಿಸಿದರು.


ದೈಹಿಕ ನಿರ್ದೇಶಕರಾದ ರಮೇಶ್ ಇವರು ವಿದ್ಯಾರ್ಥಿನಿಯರಿಗೆ ತರಬೇತಿಯನ್ನು ನೀಡಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top