ಕಲ್ಲಡ್ಕ ಕುದ್ರೆಬೆಟ್ಟು ಶ್ರೀ ಕಲ್ಲುರ್ಟಿ ದೈವಸ್ಥಾನದ ಪುನರ್ ನಿರ್ಮಾಣಕ್ಕೆ ಭೂಮಿ ಪೂಜೆ

Upayuktha
0



ಬಂಟ್ವಾಳ :  ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಬಂಟ್ವಾಳ ತಾಲೂಕು ಬಾಳ್ತಿಲ ಗ್ರಾಮದ ಕಲ್ಲಡ್ಕ ಕುದ್ರೆಬೆಟ್ಟುವಿನ ಶ್ರೀ ಕಲ್ಲುರ್ಟಿ ದೈವಸ್ಥಾನದ ಭೂಮಿ ಪೂಜಾ ಕಾರ್ಯಕ್ರಮ ಅರ್ಚಕರಾದ  ಪಳನೀರು ಅನಂತ ಭಟ್  ನೇತೃತ್ವದಲ್ಲಿ ನಡೆಯಿತು. ಇದೇ ಸಂದರ್ಭದಲ್ಲಿ ವಿಜ್ಞಾಪನ ಪತ್ರವನ್ನು ಬಿಡುಗಡೆ ಮಾಡಲಾಯಿತು.



ಊರಿನ ಭಕ್ತಾಭಿಮಾನಿಗಳು ಸೇರಿ ಸುಮಾರು 35 ಲಕ್ಷ ರೂಪಾಯಿ ವೆಚ್ಚದಲ್ಲಿ ನೂತನವಾಗಿ ಪುನರ್ ನಿರ್ಮಾಣ ಮಾಡುತ್ತಿರುವ ಶ್ರೀ ಕಲ್ಲುರ್ಟಿ ದೈವಸ್ಥಾನದ ಭೂಮಿ ಪೂಜನ ಕಾರ್ಯಕ್ರಮದಲ್ಲಿ ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಮಾಜಿ ಶಾಸಕ ಎ. ರುಕ್ಮಯ ಪೂಜಾರಿ ಏಳ್ತಿಮಾರು, ಅಧ್ಯಕ್ಷ ನ್ಯಾಯವಾದಿ ಶ್ರೀಧರ ಶೆಟ್ಟಿ ಪುಳಿಂಚ, ಕಾರ್ಯಾಧ್ಯಕ್ಷ ಗೋಪಾಲ ಮೂಲ್ಯ ನೆಲ್ಲಿ ಶಂಭುಗ, ಪ್ರಧಾನ ಕಾರ್ಯದರ್ಶಿ ರವಿ ಸುವರ್ಣ, ಕೋಶಾಧಿಕಾರಿ ನಿತಿನ್ ಕುದ್ರೆಬೆಟ್ಟು, ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ಬಾಳ್ತಿಲ ಗ್ರಾಮ ಪಂಚಾಯತ್ ಅಧ್ಯಕ್ಷ ಅಣ್ಣು ಪೂಜಾರಿ, ನಿವೃತ್ತ ಸೈನಿಕ ಚಂದ್ರಶೇಖರ್ ದಾಸಕೋಡಿ,



ದಿನೇಶ್ ಅಮ್ಟೂರು, ಸುಲೋಚನಾ  ಭಟ್, ಕಟ್ಟೆಮಾರು ಮಂತ್ರ ದೇವತಾ ಸಾನಿಧ್ಯದ ಧರ್ಮದರ್ಶಿ ಮನೋಜ್ ಕಟ್ಟೆ ಮಾರು, ಗೋಪಾಲಕೃಷ್ಣ ಭಟ್ ಕೆಲಿಂಜ, ನಿವೃತ್ತ ಶಿಕ್ಷಕ ನಾರಾಯಣಗೌಡ, ಸಿದ್ಧಿ ದೇವತಾ ಸಮಿತಿಯ ಪ್ರಮುಖರಾದ ಕೊರಗಪ್ಪ ಪಂಡಿತ್, ಸಮುದ್ರ ಹೋಟೆಲಿನ ಕರುಣಾಕರ ಶೆಟ್ಟಿ, ಪ್ರವೀಣ್ ಶೆಟ್ಟಿ, ಜನಶಕ್ತಿ ಸೇವಾ ಟ್ರಸ್ಟ್ ಅಧ್ಯಕ್ಷ ಜಿನ್ನಪ್ಪ ಏಳ್ತಿಮಾರು, ಕಾರ್ಯದರ್ಶಿ ಸೀತಾರಾಮ್ ಧರ್ಮದಬಳ್ಳಿ, ಭೋಜರಾಜ ಕುದ್ರೆಬೆಟ್ಟು, ಶ್ರೀ ಮಣಿಕಂಠ ಯುವಶಕ್ತಿ ಅಧ್ಯಕ್ಷ ಲೋಕಾನಂದ ಏಳ್ತಿಮಾರ್, ಶ್ರೀ ಮಣಿಕಂಠ ಮಾತೃಶಕ್ತಿಯ ಪದಾಧಿಕಾರಿಗಳು ಹಾಗೂ ಊರ ಹತ್ತು ಸಮಸ್ತರು ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top