ಬಾಗಲಕೋಟೆ: ಇಂದಿನ ದಿನಮಾನಗಳಲ್ಲಿ ವಿದ್ಯಾರ್ಥಿಗಳಿಗೆ ವೈಜ್ಞಾನಿಕ ಸತ್ಯ ಸಂಗತಿಗಳ ಅರಿವು ಮೂಡಿಸಿ ಅವರನ್ನು ಭವಿಷ್ಯದ ವಿಜ್ಞಾನಿಗಳನ್ನಾಗಿ ರೂಪಿಸಬೇಕಾದ ಮಹತ್ತರ ಕಾರ್ಯ ಶಿಕ್ಷಕರ ಮೇಲಿದೆ ಎಂದು ಶಾಲಾ ಶಿಕ್ಷಣ ಇಲಾಖೆಯ ಶಿಕ್ಷಣಾಧಿಕಾರಿಗಳಾದ ಎಚ್ ಜಿ ಮಿರ್ಜಿ ಕರೆ ನೀಡಿದ್ದಾರೆ.
ಅವರು ಕ.ರ.ವಿ.ಪ ಜಿಲ್ಲಾ ಸಮಿತಿ ಶಾಲಾ ಶಿಕ್ಷಣ ಇಲಾಖೆ ಹಾಗೂ ವಾಗ್ದೇವಿ ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯದ ಸಯುಕ್ತ ಆಶ್ರಯದಲ್ಲಿ ಜರುಗಿದ 31ನೇ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶದ ಬಾಗಲಕೋಟೆ ಜಿಲ್ಲಾ ಮಟ್ಟದ ಶಿಕ್ಷಕರ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡುತ್ತಿದ್ದರು.
ವಿದ್ಯಾರ್ಥಿಗಳು ದೈಹಿಕವಾಗಿ ಆರೋಗ್ಯವಾದ ಆರೋಗ್ಯವಾದರಷ್ಟೆ ಸಾಲದು ಮಾನಸಿಕವಾಗಿಯೂ ಬಲಿಷ್ಠರಾಗಬೇಕೆಂದು ಅವರು, ಮೂಢನಂಬಿಕೆ ಮತ್ತು ಕಂದಾಚಾರಗಳ ವಿರುದ್ಧ ಹೋರಾಡಿ ಸಮಾಜದಲ್ಲಿ ಶಾಂತಿ ನೆಮ್ಮದಿ ನೆಲೆಸಲು ಸಂಶೋಧನಾ ಪ್ರವೃತ್ತಿ ಬೆಳೆಸಿಕೊಳ್ಳಬೇಕೆಂದರು.
ಮುಖ್ಯ ಅತಿಥಿಗಳಾಗಿ ಎಂ.ಈ. ಹಿರೇಮಠ, ಎಸ್.ವಿ. ಶೆಟ್ಟರ್, ಎಸ್.ಎಸ್. ಬಳ್ಳೂರಗಿ ಹಾಗೂ ಶ್ರೀಮತಿ ಪುಷ್ಪಾ ಪುರದ, ಎ.ಕೆ. ಮಾಗಿ ಪಾಲ್ಗೊಂಡಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಾಗ್ದೇವಿ ವಿಜ್ಞಾನ ಪಿಯು ಕಾಲೇಜಿನ ಕಾರ್ಯಾಧ್ಯಕ್ಷರಾದ ಶ್ರೀ ರಾಜೀವ್ ಕುಲಕರಣಿ ವಹಿಸಿದ್ದರು. ನಿರ್ದೇಶಕರಾದ ಎಸ್.ಎಸ್. ಕಲ್ಯಾಣಿ, ಎಲ್. ಕೆ. ಕಾಮಾ ಹಾಗೂ ರಾಜ್ಯ ಸಂಯೋಜಕರಾದ ಎಚ್. ಜಿ. ಹುದ್ದಾರ್ ಉಪಸ್ಥಿತರಿದ್ದರು.
ಸ್ವಾಗತವನ್ನು ಜಿಲ್ಲಾ ಸಂಯೋಜಕರಾದ ವಿಷ್ಣು ಚೌಹಾನ್ ಮಾಡಿದರು. ಶಿಕ್ಷಕ ಸಂಜಯ್ ನಡುವಿನಮನಿ ನಿರೂಪಿಸಿದ ಕಾರ್ಯಕ್ರಮವನ್ನು ಮುತ್ತುಸ್ವಾಮಿ ದೇವಾಂಗಮಠ ವಂದಿಸಿದರು. ಜಿಲ್ಲೆಯ ಸುಮಾರು 50ಕ್ಕೂ ಹೆಚ್ಚು ಶಾಲೆಯ ವಿಜ್ಞಾನ ಶಿಕ್ಷಕರು ಈ ತರಬೇತಿ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ

