ಶರಣ್‌ ಮೇಲಿನ ಪ್ರಕರಣವನ್ನು ಹಿ೦ಪಡೆಯಲು ಬಿಜೆಪಿ ಆಗ್ರಹ

Upayuktha
0


ಮಂಗಳೂರು: ಶ್ರೀ ಮಂಗಳಾದೇವಿ ದೇವಸ್ಥಾನದ ನವರಾತ್ರಿ ಉತ್ಸವ ಸಂದರ್ಭ ನಡೆಯುವ ವ್ಯಾಪಾರ ವಿಚಾರವಾಗಿ ಶರಣ್‌ ಪಂಪ್‌ವೆಲ್‌ ಮತ್ತು ಹಿ೦ದೂ ಸಂಘಟನೆಯ ಕಾರ್ಯಕರ್ತರ ಮೇಲೆ ವಿನಾ ಕಾರಣ ಸ್ವಯಂಪ್ರೇರಿತ ಪ್ರಕರಣ ದಾಖಲು ಮಾಡಿರುವ ಪೊಲೀಸ್‌ ಇಲಾಖೆಯ ಕ್ರಮವನ್ನು ಬಿಜೆಪಿ ದ.ಕ. ಜಿಲ್ಲಾಧ್ಯಕ್ಷ ಸುದರ್ಶನ ಎಂ. ಖಂಡಿಸಿದ್ದಾರೆ.


ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ನಿಯಮಾವಳಿಯ ಪ್ರಕಾರ ಹಿ೦ದೂ ಧಾರ್ಮಿಕ ಕ್ಷೇತ್ರದ ಪರಿಸರದಲ್ಲಿ ಅನ್ಯಮತೀಯರಿಗೆ ವ್ಯಾಪಾರ ವ್ಯವಹಾರ ಮಾಡಲು ಅವಕಾಶವಿರುವುದಿಲ್ಲ. ದೇವಸ್ಥಾನದ ಸಾಮಾಗ್ರಿ ಸರಬರಾಜಿನ ಹಾಗೂ ಜಾತ್ರಾ ಸಂದರ್ಭದ ವ್ಯಾಪಾರ ವ್ಯವಹಾರಗಳ ಯಾವುದೇ ಟೆಂಡರ್‌ ಪ್ರಕ್ರಿಯೆಯಲ್ಲಿ ಅನ್ಯಮತೀಯರಿಗೆ ಭಾಗವಹಿಸಲು ಅವಕಾಶವಿಲ್ಲ. ಈ ನಿಯಮಾವಳಿಯ ಪ್ರಕಾರ ದೇವಸ್ಥಾನದ ಆಡಳಿತ ಮಂಡಳಿ ವ್ಯವಸ್ಥಿತವಾಗಿ ಟೆಂಡರ್‌ ಪಕ್ಷಿಯೆ ನಡೆಸಿಯೇ ವ್ಯಾಪಾರ ನಡೆಸಲು ಹಿಂದೂಗಳಿಗೆ ಗುತ್ತಿಗೆ ನೀಡಿರುತ್ತಾರೆ. ಹಿಂದೂ ಸಂಘಟನೆಯ ಕಾರ್ಯಕರ್ತರು ಹಿಂದೂಗಳು ಗುತ್ತಿಗೆ ಪಡೆದಿರುವ ಅ೦ಗಡಿಗಳಲ್ಲಿ ಕೇಸರಿ ದ್ವಜವನ್ನು ಹಾಕಿರುವುದರಲ್ಲಿ ತಪ್ಪೇನಿದೆ?. ಇದರಲ್ಲಿ ಕೋಮು ಪ್ರಚೋದನೆಯ ವಿಷಯ ಎಲ್ಲಿದೆ? ಎಂದು ಸುದರ್ಶನ್ ಪ್ರಶ್ನಿಸಿದ್ದಾರೆ.


ಹಿಂದೂಗಳು ತಮ್ಮ ಅಂಗಡಿಗಳಲ್ಲಿ ಕೇಸರಿ ಧ್ವಜ ಅಳವಡಿಸಲು ಯಾರ ಅನುಮತಿಯೂ ಬೇಕಿಲ್ಲ. ಕೇಸರಿ ಧ್ವಜ ಅಳವಡಿಸಿರುವ ಅಂಗಡಿ ಮಾಲಕರು ಯಾರೂ ಕೂಡ ಈ ಬಗ್ಗೆ ದೂರು ನೀಡಿರುವುದಿಲ್ಲ. ಯಾವುದೇ ದೂರು ಇಲ್ಲದೇ ಕೇವಲ ರಾಜಕೀಯ ಒತ್ತಡದಿಂದ ಹಾಗೂ ಮುಸ್ಲಿಂರನ್ನು ಓಲೈಸಲು ವಿನಾಕಾರಣ ಶರಣ್‌ ಪಂಪ್‌ವೆಲ್‌ ಮತ್ತು ಸಂಘಟನೆಯ ಕಾರ್ಯಕರ್ತರ ಮೇಲೆ ಕೇಸು ದಾಖಲಾಗಿದೆ. ಸರಕಾರ ತಕ್ಷಣ ಈ ಪ್ರಕರಣವನ್ನು ಹಿ೦ಪಡೆಯಬೇಕು ಎಂದು ಸುದರ್ಶನ್ ಅವರು ಆಗ್ರಹಿಸಿದ್ದಾರೆ. ಸಂಘಟನೆಯ ಎಲ್ಲಾ ರೀತಿಯ ಕಾನೂನಾತ್ಮಕ ಹೋರಾಟಕ್ಕೆ ಬಿಜೆಪಿ ಸದಾ ಬೆಂಬಲ ನೀಡುತ್ತದೆ ಎಂದು ಅವರು ತಿಳಿಸಿರುತ್ತಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top