ಗೃಹರಕ್ಷಕ ಕ್ಷೇಮಾಭಿವೃದ್ಧಿ ನಿಧಿಯಿಂದ ಗೃಹರಕ್ಷಕರ ಕುಟುಂಬಕ್ಕೆ ಸಹಾಯ ಧನ

Upayuktha
0




ಮಂಗಳೂರು: ಗೃಹರಕ್ಷಕ ಕ್ಷೇಮಾಭಿವೃದ್ಧಿ ನಿಧಿಯಿಂದ ಗೃಹರಕ್ಷಕರ ಮಕ್ಕಳ ವಿದ್ಯಾಭ್ಯಾಸ ಹಾಗೂ ಗೃಹರಕ್ಷಕರ ಮತ್ತು ಅವರ ಕುಟುಂಬದವರಿಗೆ ವೈದ್ಯಕೀಯ ವೆಚ್ಚ ಸಹಾಯ ಧನವನ್ನು ನೀಡಲಾಗುತ್ತದೆ.



ಸುಬ್ರಹ್ಮಣ್ಯ ಘಟಕದ ಪ್ರಭಾರ ಘಟಕಾಧಿಕಾರಿಯಾದ ಹರಿಶ್ಚಂದ್ರ ಇವರ ಮಗಳಾದ ಗೌತಮಿ ಕೆ.ಹೆಚ್ ರವರ ಮೂರನೇ ವರ್ಷದ ಬಿಕಾಂ ಮತ್ತು ಸಿಎ ಹಾಗೂ 2ನೇ ಮಗಳು ಗಾನವಿ ಕೆ.ಹೆಚ್, ರವರ ಬಿಸಿಎ ಮೊದಲನೇ ವರ್ಷದ ವ್ಯಾಸಂಗಕ್ಕಾಗಿ ಒಟ್ಟು ರೂ.-10,000/- ಕೇಂದ್ರ ಕಛೇರಿಯಿಂದ ಸಹಾಯ ಧನ ಮಂಜೂರಾಗಿದ್ದು, ಈ ನಿಟ್ಟಿನಲ್ಲಿ ಸೆ. 30 ರಂದು ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳ ಕಛೇರಿ, ಮೇರಿಹಿಲ್‌ನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರು ಇವರು ಹರಿಶ್ಚಂದ್ರ ಇವರಿಗೆ ಚೆಕ್ ನೀಡಿದರು. 



ಈ ಸಂದರ್ಭದಲ್ಲಿ ಉಪಸಮಾದೇಷ್ಟರಾದ ರಮೇಶ್, ಕಛೇರಿಯ ಪ್ರಥಮ ದರ್ಜೆ ಸಹಾಯಕಿ ಶ್ಯಾಮಲಾ ಎ., ಗೃಹರಕ್ಷಕರಾದ ಸುಲೋಚನಾ, ಜಯಲಕ್ಷ್ಮಿ, ಚಿದಾನಂದ ರವಿಚಂದ್ರ ಮುಂತಾದವರು ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ


web counter 




Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top