ಕಲ್ಲಡ್ಕ: ನಿಟಿಲಾಕ್ಷ ಕೃಷಿ ಉತ್ಪಾದಕರ ಸಂಘದ ಹಾಳೆತಟ್ಟೆ ಘಟಕ ಉದ್ಘಾಟನೆ

Upayuktha
0


ಕಲ್ಲಡ್ಕ: ದೀನ್ ದಯಳ್ ಅಂತ್ಯೋದಯ ಯೋಜನೆ, ಸಂಜೀವಿನಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಅಭಿಯಾನ, ಮೌಲ್ಯ ಸರಪಳಿ ಅಭಿವೃದ್ಧಿ ಮತ್ತು ಮಾರುಕಟ್ಟೆ ಜೋಡಣೆ ವಿಭಾಗ, ಸ್ನೇಹ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ವೀರಕಂಭ ಗ್ರಾಮ ಪಂಚಾಯತ್ ಇದರ ಸಹಯೋಗದಲ್ಲಿ ಬಂಟ್ವಾಳ ತಾಲೂಕು ವೀರಕಂಭ ಗ್ರಾಮದ ಕೆಲಿಂಜ ಬೆಂಜ್ಞಾತಿಮಾರು ಎಂಬಲ್ಲಿ ನಿಟಿಲಾಕ್ಷ ಕೃಷಿ ಉತ್ಪಾದಕರ ಸಂಘದ ಹಾಳೆತಟ್ಟೆ ಘಟಕವನ್ನು ವೀರಕಂಭ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಜನಾರ್ದನ ಪೂಜಾರಿ ಉದ್ಘಾಟಿಸಿದರು.


ಈ ಸಂದರ್ಭದಲ್ಲಿ ದೇವಿಪ್ರಸಾದ್ ಶೆಟ್ಟಿ ಬೆಂಜ್ಞಾತಿಮಾರು, ಎನ್ ಆರ್ ಎಲ್ ಎಂ ಮೇಲ್ವಿಚಾರಕಿ ಕುಸುಮ, ಎಂ ಬಿ ಕೆ ಮಲ್ಲಿಕಾ ಎಸ್ ಶೆಟ್ಟಿ, ಎಲ್ ಸಿ ಆರ್ ಪಿ ಜಯಂತಿ, ಸಂಜೀವಿನಿ ಒಕ್ಕೂಟ ಅಧ್ಯಕ್ಷ ವಿಜಯ, ಉಪಾಧ್ಯಕ್ಷೆ ಕೋಮಲಾಕ್ಷಿ, ಕಾರ್ಯದರ್ಶಿ ದೀಪ, ಜೊತೆ ಕಾರ್ಯದರ್ಶಿ ದೀಪ್ತಿ, ಕೃಷಿ ಉದ್ಯೋಗ ಸಖಿ ಇಂದಿರಾ ಮೊದಲಾದವರು ಉಪಸ್ಥಿತರಿದ್ದರು.


إرسال تعليق

0 تعليقات
إرسال تعليق (0)
To Top