ನಿಟ್ಟೆ: ರಾಷ್ಟ್ರೀಯ ಅಕ್ಕಿ ಮಾಸವನ್ನು ಆಚರಿಸುವ ಸಲುವಾಗಿ ನಿಟ್ಟೆಯ ಮಹಾಲಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಕಾಲೇಜಿನ ಕೌನ್ಸೆಲಿಂಗ್, ವೆಲ್ಫೇರ್, ತರಬೇತಿ ಮತ್ತು ಉದ್ಯೋಗ ವಿಭಾಗವಾದ ಅಭ್ಯುದಯದ ಅಡಿಯಲ್ಲಿ 'ಅನ್ನದಾನ ಕ್ಲಬ್' ಗಮನಾರ್ಹ ಸಮುದಾಯ ಸಂಪರ್ಕ ಕಾರ್ಯಕ್ರಮವಾದ 'ಅನ್ನದಾನ ಅಭಿಯಾನ' ಹಮ್ಮಿಕೊಂಡಿತ್ತು.
ಈ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳ 'ಅನ್ನದಾನ ಕ್ಲಬ್' 400 ಕಿಲೋಗ್ರಾಂಗಳಷ್ಟು ಅಕ್ಕಿಯನ್ನು ಸಿಬ್ಬಂದಿಗಳು, ವಿದ್ಯಾರ್ಥಿಗಳ ಮೂಲಕ ಸಂಗ್ರಹಿಸಿ ಸ್ಪೂರ್ತಿದಾಯಕ ಸಾಧನೆಯನ್ನು ಮಾಡಿದೆ. ಈ ಯೋಜನೆಯಡಿ ಸಂಗ್ರಹಿಸಲಾದ ಅಕ್ಕಿಯನ್ನು ಕಾರ್ಕಳ ಪ್ರದೇಶದ ವಿವಿಧ ಅರ್ಹ ಆಶ್ರಮ/ಶಾಲೆಗಳಿಗೆ ದಾನದ ರೂಪದಲ್ಲಿ ಒದಗಿಸುವ ಉದ್ದೇಶ ಈ ಕ್ಲಬ್ ನದ್ದಾಗಿದೆ.
ಅನ್ನದಾನ ಕ್ಲಬ್ ಸಂಗ್ರಹಿಸಿದ ಅಕ್ಕಿಯನ್ನು ಈ ಕೆಳಗಿನ ಪ್ರತಿಯೊಂದು ಸಂಸ್ಥೆಗಳಿಗೆ 100 ಕಿಲೋಗ್ರಾಂಗಳಷ್ಟು ಅಕ್ಕಿಯನ್ನು ದಾನ ಮಾಡಿತು:
೧) ದೇವದಿತಾ ವೃದ್ಧಾಶ್ರಮ, ಕೆದಿಂಜೆ, ಕಾರ್ಕಳ
೨) ಚೇತನಾ ವಿಶೇಷ ಶಾಲೆ, ಕಾರ್ಕಳ
೩) ವಿಜೇತಾ ವಿಶೇಷ ಶಾಲೆ, ಕಾರ್ಕಳ
೪) ಸುರಕ್ಷಾ ಸೇವಾಶ್ರಮ, ಕಾರ್ಕಳ
ಅನ್ನದಾನ ತಂಡವು ಹಸಿವು ಮತ್ತು ಹಸಿವಿನ ಸಮಸ್ಯೆಗಳನ್ನು ಪರಿಹರಿಸಲು ಅರ್ಥಪೂರ್ಣ ಕೊಡುಗೆ ನೀಡುತ್ತಾ ಬಂದಿದ್ದು ಇನ್ನು ಮುಂದೆಯೂ ಇಂತಹ ಅರ್ಥಪೂರ್ಣ ಯೋಜನೆಗಳನ್ನು ಕೈಗೆತ್ತಿಕೊಳ್ಳಲಿದೆ ಎಂದು ಕಾಲೇಜಿನ ಪತ್ರಿಕಾ ಪ್ರಕಟಣೆ ತಿಳಿಸಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ