ಅಮೃತೋತ್ಸವ- 2023 ಸದ್ಗುರು ಶ್ರೀ ಮಾತಾ ಅಮೃತಾನಂದಮಯಿ ದೇವಿಯವರ 70ನೆಯ ಜನ್ಮ ದಿನಾಚರಣೆ

Upayuktha
0

ಮಾತಾ ಅಮೃತಾನಂದಮಯಿ ದೇವಿಯವರು "ಭಾರತರತ್ನ" ಪ್ರಶಸ್ತಿಗೆ ಸೂಕ್ತ ಆಯ್ಕೆ: ತಿಪ್ಪಣಪ್ಪ ಕಮಕನೂರು ಪ್ರತಿಪಾದನೆ




ಮಂಗಳೂರು: ಸದ್ಗುರು ಶ್ರೀ ಮಾತಾ ಅಮೃತಾನಂದಮಯಿ ದೇವಿಯವರ 70 ನೆಯ ಜನ್ಮದಿನಚರಣೆ ಶ್ರದ್ಧಾ ಭಕ್ತಿಗಳಿಂದ ಜರುಗಿತು.

ಆ ಪ್ರಯುಕ್ತ ಬೋಳೂರು ಶ್ರೀ ಬ್ರಹ್ಮಸ್ಥಾನ ಕ್ಷೇತ್ರದಲ್ಲಿ ಮಹಾಮೃತ್ಯುಂಜಯ ಹೋಮ ಸಹಿತ ಪೂಜಾವಿಧಿ ವಿಧಾನಗಳು ಜರುಗಿದವು. ನಂತರ ಮಂಗಳೂರು ಉರ್ವ ಸ್ಟೋರ್ಸ್ ಬಳಿ ಇರುವ ಡಾ.ಬಿ‌.ಆರ್. ಅಂಬೇಡ್ಕರ್ ಭವನದಲ್ಲಿ ಮಠಾಧಿಪತಿಗಳಾದ ಸ್ವಾಮಿನಿ ಮಂಗಳಾಮೃತ ಪ್ರಾಣರವರ ಸಾರಥ್ಯದಲ್ಲಿ ಶ್ರೀ ಗುರು ಪಾದುಕಾ ಪೂಜೆ, ಧ್ಯಾನ, ಸತ್ಸಂಗ, ಭಜನೆ ಆರತಿ ಮೊದಲಾದ ಆಧ್ಯಾತ್ಮಿಕ ಕಾರ್ಯಕ್ರಮಗಳನ್ನು ನಡೆಸಲಾಯಿತು.


ಅಮೃತೋತ್ಸವ 2023ರ ಸಭಾ ಕಾರ್ಯಕ್ರಮದಲ್ಲಿ ಅಮ್ಮನವರ ಮಾನವೀಯ ಸೇವೆಗಳ ಉಪಕ್ರಮಗಳಿಗೆ ಚಾಲನೆ ನೀಡಲಾಯಿತು. ಇಂದು ಚಾಲನೆಗೊಂಡ ಯೋಜನೆಗಳ ವಿವರ ಇಂತಿದೆ:

1. ವಿಧಾ ಯೋಜನೆ- ಉ.ಕ. ಜಿಲ್ಲೆಯ ಕೆಳಸೆ ಎಂಬ ತೀರಾ ಹಿಂದುಳಿದ ಗ್ರಾಮದ ಜನರಿಗೆ ಅಯುಧ್ ಸಂಘದ ಮೂಲಕ ಸ್ವಚ್ಚತಾ ಕಿಟ್ ವಿತರಣೆ ಹಾಗೂ ಆರೋಗ್ಯಪೂರ್ಣ ಜೀವನದ ಜಾಗೃತಿ.

2. ವಸ್ತ್ರದಾನ: ಇನ್ನೂರಕ್ಕೂ ಅಧಿಕ ಮಹಿಳೆಯರಿಗೆ ಸೀರೆ ವಿತರಿಸಲಾಯಿತು.

3. ಬೀಜದುಂಡೆಗಳ ವಿತರಣೆ: ಹಸಿರು ಪರಿಸರದ ಅಂಗವಾಗಿ ಒಂದು ಲಕ್ಷ ಬೀಜದ ಉಂಡೆಗಳನ್ನು ಸಿದ್ಧಪಡಿಸಿ ಗಿಡ ಮರಗಳನ್ನು ಬೆಳೆಸುವ ಯೋಜನೆ.

4. ಮಾದಕದ್ರವ್ಯ ಸೇವನೆಯ ದುಷ್ಪರಿಣಾಮಗಳ ವಿರುದ್ಧ ಯುವ ಜನರಿಗೆ ಜಾಗೃತಿ ಮೂಡಿಸುವ ಕಾರ್ಯ.

5. ಅಮೃತಶ್ರೀ ಯೋಜನೆ: ಮಹಿಳಾ ಸಬಲೀಕರಣ- ಸ್ವಾವಲಂಬಿ ಶಿಕ್ಷಣ ಮತ್ತು ಉದ್ಯೋಗ, ಸ್ವಸಹಾಯ ಗುಂಪುಗಳ ರಚನೆ.


ಈ  ಸಮಾಜಮುಖಿ ಸೇವಾ ಕಾರ್ಯಕ್ರಮಗಳಿಗೆ ಮುಖ್ಯ ಅತಿಥಿಯಾಗಿ ವಿಧಾನ ಪರಿಷತ್ ಸದಸ್ಯರಾದ ತಿಪ್ಪಣಪ್ಪ ಕಮಕನೂರು ಭಾಗವಹಿಸಿ ಚಾಲನೆ ನೀಡಿದರು. ಅವರು ಈ ಸಂದರ್ಭದಲ್ಲಿ ಮಾತನಾಡಿ ಸತ್ಯ ನಿಷ್ಠೆ, ಮಾತೃವಾತ್ಸಲ್ಯದ ಬಗ್ಗೆ ಮಾತಾಡಿದರು. ಅಮ್ಮನವರು ನಡೆದಾಡುವ ದೇವರು ಎಂಬುದು ಅವರ ದರ್ಶನಕ್ಕೆ ಬಂದವರಿಗೆ ಅರಿವಾಗುತ್ತದೆ. ಅಂದು ಸ್ವಾಮಿ ವಿವೇಕಾನಂದರು ನುಡಿದ ಮಾತುಗಳು "ನನ್ನ ಕೆಲಸ ಮುಂದುವರಿಸಲು ಈ ಭೂಮಂಡಲಕ್ಕೆ ದೇವಿಯ ರೂಪದಲ್ಲಿ ಒಬ್ಬ ಮಹಿಳೆ ಹುಟ್ಟಿ ಬರುತ್ತಾಳೆ ಎಂಬ ಮಾತು ನಿಜ ಎಂಬುದು ಸದ್ಗುರು ಶ್ರೀ ಮಾತಾ ಅಮೃತಾನಂದಮಯಿ ದೇವಿಯವರ ಅವತರಣದಿಂದ ಅರಿವಾಗುತ್ತದೆ.


ಅಮ್ಮನವರು ಆಧ್ಯಾತ್ಮಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ವೈದ್ಯಕೀಯ ಸೇವೆಗಳ ಮೂಲಕ ದೇಶ ವಿದೇಶಗಳ ಕೋಟ್ಯಾಂತರ ಜನರ ಆಶಾಕಿರಣವೆನಿಸಿದ್ದಾರೆ.ಆದುದರಿಂದ ಅವರು ಭಾರತ ರತ್ನ ಪ್ರಶಸ್ತಿಗೆ‌ ಅರ್ಹತೆ ಹೊಂದಿದ್ದಾರೆ. ನಾನು ಈ ಬಗ್ಗೆ ರಾಜ್ಯ ಸರಕಾರ ಮತ್ತು ಮುಖ್ಯ ಮಂತ್ರಿಗಳ ಮುಖಾಂತರ ಕೇಂದ್ರ ಸರಕಾರಕ್ಕೆ ಮನವಿ ಮಾಡುತ್ತೇವೆ. ಮೇಯರ್ ರವರೂ ಪ್ರಧಾನಿ ನರೇಂದ್ರ ಮೋದಿಯವರಿಗೆ ಈ ಬಗ್ಗೆ ಮನವಿ ಅರ್ಪಿಸುವಂತೆ ತಿಳಿಸಿದರು.


ಮೇಯರ್ ಸುಧೀರ್ ಶೆಟ್ಟಿ ಕಣ್ಣೂರುರವರು ಮಾದಕದ್ರವ್ಯ ಸೇವನೆ ವಿರುದ್ಧ ಜನಜಾಗೃತಿ ಮೂಡಿಸುವ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿ, ಅಮ್ಮನವರು ಬಡಜನರ ಆಶೋತ್ತರಗಳನ್ನು ಈಡೇರಿಸುವ ಕಾರ್ಯಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಮಾತಾ ಅಮೃತಾನಂದಮಯಿ ಮಠವು ಕೈಗೊಳ್ಳುವ ಸಮಾಜಮುಖಿ ಸೇವಾಕಾರ್ಯಗಳಿಗೆ ಮಹಾ ನಗರಪಾಲಿಕೆ ವತಿಯಿಂದ ಸರ್ವ ರೀತಿಯ ಸಹಕಾರ ನೀಡಲಾಗುವುದು ಎಂದರು.


ಲೆಫ್ಟಿನೆಂಟ್ ಕರ್ನಲ್ ವಿವೇಕ್ ಬಿಂದ್ರಾ ರವರು ಬೀಜಡುಂಡೆಗಳ ವಿತರಣೆ ಮಾಡಿದರು. ವೇದಿಕೆಯಲ್ಲಿ ಸೇವಾ ಸಮಿತಿಯ ಅಧ್ಯಕ್ಷರಾದ ಡಾ.ವಸಂತ ಕುಮಾರ್ ಪೆರ್ಲ ಉಪಸ್ಥಿತರಿದ್ದರು. ಡಾ.ದೇವದಾಸ್ ಪುತ್ರನ್ ಹಾಗೂ ಅಕ್ಷತಾ ಶೆಣೈ ಕಾರ್ಯಕ್ರಮ ನಿರೂಪಣೆ ಮಾಡಿದರು.

ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಅಮ್ಮನ ಭಕ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರಸಾದ ಸ್ವೀಕರಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top