ಅಂಬೇಡ್ಕರ್ ಎಂದರೆ ಅರಿವಿನ ಮಾರ್ಗ: ಪ್ರೊ. ಎಚ್.ಟಿ ಪೋತೆ

Upayuktha
0

ಬಸವನಗುಡಿ (ಬೆಂಗಳೂರು): ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಚಿಂತನೆಗಳು ಅರಿವಿನ ಮಾರ್ಗವಾಗಬೇಕಿದೆ ಮೇಲ್ವರ್ಗದ ಕೇರಿಗಳಲ್ಲಿ ಅಂಬೇಡ್ಕರ್ ಪ್ರತಿಮೆಗಳನ್ನು ಸ್ಥಾಪಿಸುವುದು ಅವಮಾನ ಎಂದು ಭಾವಿಸುವ ಸಂದರ್ಭದಲ್ಲಿ ಕೆಲವರ್ಗದ ಕೇರಿಗಳಲ್ಲಿ ಯಾವುದೇ ದೇವರ ದೇವಸ್ಥಾನಗಳನ್ನು ಕಟ್ಟುವುದು ಶ್ರೇಷ್ಠ ಎಂದು ಭಾವಿಸುವ ಕೆಲವರಿಗೆ ಜನರ ಮನಸ್ಥಿತಿ ಬದಲಾಗಬೇಕಾಗಿದೆ. ವರ್ಗ ವರ್ಗಗಳ ನಡುವೆ ಇರುವ ಶೋಷಣೆಯ ನೆಲೆಯನ್ನು ಅರಿಯಲು ಅಂಬೇಡ್ಕರ್ ಮಾರ್ಗ ದಾರಿದೀಪವಾಗಿದೆ ಎಂದು ಜನಪದ ವಿದ್ವಾಂಸ, ವಿಮರ್ಶಕ ಎಚ್‌.ಟಿ ಪೋತೆ ಹೇಳಿದರು.



ಅವರು ಇಲ್ಲಿನ ಬಿ. ವಾಡಿಯಾ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಡಾ. ಜೆ.ಪಿ ದೊಡ್ಡಮನಿ ಅವರು ಮರಾಠಿಯಿಂದ ಕನ್ನಡಕ್ಕೆ ಅನುವಾದಿಸಿರುವ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಜೀವನ ಚರಿತ್ರೆಯನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು.



ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಡಾ. ಮೂಡ್ನಾ ಕೂಡು ಚಿನ್ನಸ್ವಾಮಿ ಮಾತನಾಡಿ, ಜಾತಿ ಪದ್ಧತಿಯನ್ನು ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಂದಲೂ ತಿರಸ್ಕೃತವಾಗುವಂತೆ ಶಿಕ್ಷಣ ನೀಡಬೇಕು ಎಂದರು. ಗಾಂಧೀಜಿ ಮತ್ತು ಅಂಬೇಡ್ಕರ್ ಅವರ ನಡುವೆ ಜಾತಿ ಪದ್ಧತಿಯ ಕುರಿತು ಭಿನ್ನಾಭಿಪ್ರಾಯಗಳು ಇರುವ ವಿಚಾರಗಳನ್ನು ಪುಸ್ತಕದಲ್ಲಿ ದಾಖಲಾಗಿರುವ ಚರ್ಚೆಗಳನ್ನು ಕುರಿತು ಅವರು ವಿವರಿಸಿದರು. ಕಾರ್ಯಕ್ರಮದಲ್ಲಿ ಡಾ. ಸುಭಾಷ್ ರಾಜಮಾನೆ ಕೃತಿಕಾರ ಡಾ. ಜೆ.ಪಿ ದೊಡ್ಡಮನಿ ಶ್ರೀಮತಿ ಪ್ರಭಾ ಬೂರಾ ಗಾವಂಕರ ಹಾಜರಿದ್ದರು.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top