ವಿವಿ ಕಾಲೇಜು ಮಂಗಳೂರು: ಅಂತಾರಾಷ್ಟ್ರೀಯ ಬಿದಿರು ದಿನಾಚರಣೆ

Upayuktha
0

ಮಂಗಳೂರು: ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು, ಇಲ್ಲಿಯ ದ್ವಿತೀಯ ವರ್ಷದ ಜೀವವಿಜ್ಞಾನ ವಿದ್ಯಾರ್ಥಿಗಳು ಅಂತಾರಾಷ್ಟ್ರೀಯ ಬಿದಿರು ದಿನವನ್ನು ಆಚರಿಸಿದರು.


ವಿಶ್ವ ಬಿದಿರು ದಿನದ ಅಂಗವಾಗಿ ದ್ವಿತೀಯ ವರ್ಷದ ವಿಜ್ಞಾನ ವಿದ್ಯಾರ್ಥಿಗಳಾದ ನಮನ್ ಹಾಗೂ ನಾಝಿಯಾರವರು ವಿಶ್ವ ಬಿದಿರು ದಿನ ಶುರುವಾದ ಬಗೆ, ಬಿದಿರು ಸಂರಕ್ಷಣೆ ಹಾಗು ಮಹತ್ವವನ್ನು ತಿಳಿಸಿಕೊಟ್ಟರು. ನಂತರ ಯಶ್ಮಿ  ಮತ್ತು ತಂಡದವರು ರಸಪ್ರಶ್ನೆ ಕಾರ್ಯಕ್ರಮದ ಮೂಲಕ ಬಿದಿರಿಗೆ ಸಂಬಂಧಿಸಿದಂತೆ ಅನೇಕ ಕೌತುಕದ ವಿಷಯಗಳನ್ನು ತಿಳಿಸಿಕೊಟ್ಟರು.


ಕಾರ್ಯಕ್ರಮವು ತೃತೀಯ ವಿಜ್ಞಾನ ವಿದ್ಯಾರ್ಥಿನಿ ಪ್ರಗತಿಯವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾಗಿ, ಸುಮಯ್ಯ ಶಿಫಾನರವರು ಸ್ವಾಗತ ಮಾಡಿದರೆ ರಕ್ಷಿತಾರವರು ವಂದನಾರ್ಪಣೆ ಮಾಡಿದರು. ಕಾರ್ಯಕ್ರಮವು ಸಸ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಡಾ. ಸಿದ್ದರಾಜು ಎಂ.ಎನ್ ಮತ್ತು ಡಾ. ಕಾರುಣ್ಯ ರವರ ಮಾರ್ಗದರ್ಶನದಲ್ಲಿ ನೆರವೇರಿತು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 




Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top