ಮಂಗಳೂರು: ಭಾರತದ ಡೌನ್‍ಲೋಡ್‍ಗಳು ಮತ್ತು ದೈನಂದಿನ ಸಕ್ರಿಯ ಬಳಕೆದಾರರ ವಿಷಯದಲ್ಲಿ ನಂ. 1 ಮ್ಯೂಸಿಕ್ ಸ್ಟ್ರೀಮಿಂಗ್ ಆ್ಯಪ್ ಎನಿಸಿದ ವಿಂಕ್ ಸ್ಟುಡಿಯೋ, ಬ್ಯಾಡ್ಮಿಂಟನ್ ಸೂಪರ್‍ಸ್ಟಾರ್ ಪಿ.ಗೋಪಿಚಂದ್ ಅವರ ಜೀವನವನ್ನು ಆಧರಿಸಿದ ಕೆ.ಕೆ.ಮೆನನ್ ಅಭಿನಯದ 'ಲವ್ ಆಲ್' ಚಿತ್ರದ ವಿತರಣಾ ಹಕ್ಕುಗಳನ್ನು ಗೆದ್ದಿದೆ.
ಮಹೇಶ್ ಭಟ್ ಮತ್ತು ಪಿ.ಗೋಪಿಚಂದ್ ಜೊತೆಗೆ ಆನಂದ್ ಪಂಡಿತ್ "ಲವ್ ಆಲ್" ಚಿತ್ರ ನಿರ್ಮಾಣ ಮಾಡಿದ್ದಾರೆ. ಇದನ್ನು ಲಕ್ಷ್ಮಿ ಗಣಪತಿ ಫಿಲ್ಮ್ ಸ್ಟುಡಿಯೋಸ್ ಸೆಪ್ಟೆಂಬರ್ 01 ರಂದು ಬಿಡುಗಡೆ ಮಾಡಲಿದೆ. ಸುಧಾಂಶು ಶರ್ಮಾ ನಿರ್ದೇಶನದ ಈ ಚಿತ್ರದಲ್ಲಿ ಸ್ವಸ್ತಿಕಾ ಮುಖರ್ಜಿ, ರಾಬಿನ್ ದಾಸ್, ಶ್ರೀಶ್ವರ್, ಅತುಲ್ ಶ್ರೀವಾಸ್ತವ ಮತ್ತು ರಾಜ ಬುಂದೇಲಾ ಕೂಡ ನಟಿಸಿದ್ದಾರೆ. ಚಲನಚಿತ್ರವು ಬ್ಯಾಟನ್ ಬ್ಯಾಟನ್ ಮೇ, ಗಿಲ್ಲಿ ಸಿ ಸುಬಾ, ಚಲ್ ಉತ್ ಛತ್ ಪಥ್, ಲವ್ ಆಲ್ ಬೋಲ್ ದೇ ಹಾಗೂ ಸಾಹಸ್ ದೋ ಸಾಹಸ್ ಎಂಬ ಐದು ಸ್ಮರಣೀಯ ಟ್ರ್ಯಾಕ್‍ಗಳನ್ನು ಹೊಂದಿದ್ದು, ಇವು ಈಗಾಗಲೇ ವಿಂಕ್ ನಲ್ಲಿ ಲಭ್ಯವಿದೆ ಎಂದು ಏರ್‍ಟೆಲ್ ಡಿಜಿಟಲ್ ಸಿಇಓ ಮತ್ತು ಚೀಫ್ ಪ್ರಾಡಕ್ಟ್ ಆಫೀಸರ್ ಆದರ್ಶ್ ನಾಯರ್ ಪ್ರಕಟಣೆಯಲ್ಲಿ ಹೇಳಿದ್ದಾರೆ.
"ಸ್ವತಂತ್ರ ಕಲಾವಿದರಿಗೆ ಸೃಜನಾತ್ಮಕ ವೇದಿಕೆಯನ್ನು ನೀಡುವ ದೃಷ್ಟಿಯೊಂದಿಗೆ ಸ್ಥಾಪಿಸಲಾದ ವಿಂಕ್ ಸ್ಟುಡಿಯೊ ಅವರು ಎದುರಿಸಬಹುದಾದ ಹಣಕಾಸು ಮತ್ತು ಅನ್ವೇಷಣೆ ಸಮಸ್ಯೆಗಳಿಗೆ ಸಹಾಯ ಮಾಡುತ್ತದೆ. ನಾವು ಸ್ವತಂತ್ರ ಕಲಾವಿದರೊಂದಿಗೆ ಉತ್ತಮ ಯಶಸ್ಸನ್ನು ಹೊಂದಿದ್ದೇವೆ ಮತ್ತು ಪ್ರಸ್ತುತ ನಮ್ಮ ರೋಸ್ಟರ್‍ನಲ್ಲಿ 1000 ಕಲಾವಿದರು ಇದ್ದಾರೆ ಎಂದು ವಿವರಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ