1) ಈ ಸರ್ವೇಯರ್ (PR ಅಥವಾ ಬೆಳೆ ಸಮೀಕ್ಷೆಗಾರರು)ಗಳ ನೇಮಕ ಹೇಗೆ ನೆಡೆಯುತ್ತದೆ?
2) ಈ ಸರ್ವೇಯರ್ (PR) ಆಗಲು ಅರ್ಹತೆಗಳೇನು?
3) ಪ್ರತೀ ವರ್ಷ ಹಿಂದಿನ ವರ್ಷ ಆಯ್ಕೆಯಾದ PR ಗಳೇ ಮುಂದುವರೆಯುತ್ತಾರಾ?
4) PRಗಳಿಗೆ ಬೇರೆ ಕೆಲಸಗಳನ್ನೂ ಕೊಡಮಾಡಲಾಗುತ್ತದೆಯಾ?- ಎಲೆ ಚುಕ್ಕಿ ಸರ್ವೆ PRರವರೇ ಮಾಡುವುದಾ? (ಶಿವಮೊಗ್ಗ ವಿವಿ ಬ್ರಯಿನ್‌ಸ್ಟಾರ್ಮಿಂಗ್ ಕಾರ್ಯಕ್ರಮದಲ್ಲಿ ಅಧಿಕಾರಿಗಳು ಹಾಗೆ ಹೇಳಿದ್ರು. ಮನೆಯಲ್ಲೇ ಕುಳಿತು ಸರ್ವೆ ಮಾಡುವ ನಮ್ಮ PR ಗೆ ಕೇಳಿದರೆ ಆ ವಿಚಾರ ನಮಗೆ ಗೊತ್ತೇ ಇಲ್ಲ ಅಂದ್ರು!)
5) ಅಂಗನವಾಡಿ ಕಾರ್ಯಕರ್ತೆಯರ ತರಹ PR ಗಳನ್ನು ಪರ್ಮನೆಂಟ್ ಮಾಡಿಕೊಳ್ಳುವ, ಆ ಮೂಲಕ ಬೇರೆ ಬೇರೆ ಕೃಷಿ ಸಂಬಂಧಿತ ಕೆಲಸಗಳಿಗೆ ನಿಯೋಜಿಸಬಹುದಾ? ಗ್ರಾಮ ಪಂಚಾಯತಿ ವ್ಯಾಪ್ತಿಯ, VA ವ್ಯಾಪ್ತಿಯ, ಕೃಷಿ ಇಲಾಖೆ ವ್ಯಾಪ್ತಿಯ, ತೋಟಗಾರಿಕೆ ಇಲಾಖೆ ವ್ಯಾಪ್ತಿಯ ಕೆಲಸಗಳನ್ನು PR ಗಳು ಮಾಡಬಹುದು. ಪಂಚಾಯತಿ, ಕೃಷಿ, ಹಾರ್ಟಿಕಲ್ಚರ್, VA ಆಫೀಸ್‌ಗಳಲ್ಲಿ ಸದಾ ಫೀಲ್ಡ್ ವರ್ಕ್ ನಲ್ಲೇ ಇರುವ ಅಧಿಕಾರಿಗಳಿಗೆ ಸ್ವಲ್ಪ ವಿಶ್ರಾಂತಿಯೂ ಸಿಗುತ್ತೆ!
(ಬಹುತೇಕ ಸರಕಾರಿ ಕಛೇರಿಗಳಲ್ಲಿ ಶಾಶ್ವತವಾಗಿ ಇರುವ ಎರಡು ಪ್ರಾಬ್ಲಮ್ ಅಂದ್ರೆ ಒಂದು "ಸಾಯಿಬ್ರು ಫೀಲ್ಡ್ ವರ್ಕ್‌ಗೆ ಹೋಗಿದಾರೆ" ಅನ್ನುವುದು, ಇನ್ನೊಂದು "ಸರ್ವರ್ ಡೌನ್ ಇದೆ" ಅನ್ನುವುದು!!! ಸರಕಾರಿ ಇಲಾಖೆಗಳಲ್ಲಿ ಇನ್ನೊಂದು ತಮಾಷೆ ಇದೆಯಂತೆ!!?: ಎಷ್ಟೇ ಸರ್ವರ್ ಡೌನ್ ಆದರೂ, ಬಹುತೇಕ ಕಂಪ್ಯೂಟರ್‌ಗಳಲ್ಲಿ ಸಾಲಿಟೇರ್ ಪ್ಲೇಯಿಂಗ್ ಕಾರ್ಡ್ಸ್ ಗೇಮ್‌ಗಳು ಯಾವಾಗಲೂ ಆ್ಯಕ್ಟಿವೇಟ್ ಆಗಿರುತ್ತಂತೆ!!. ಇದು ಸತ್ಯ ಇರಬಹುದು ಆದರೂ ತಮಾಷೆಯಾಗಿಯೇ ತಗೊಳೋಣ!!) PR ಗಳಿಗೆ ಉತ್ತಮ ಮೊಬೈಲ್ ಕೊಟ್ಟು, ಪಕ್ಕಾ ಟ್ರೈನಿಂಗ್ ಕೊಟ್ಟು, ಕ್ರಾಪ್ ಸರ್ವೆ, GPS ಸರ್ವೆ, ಡಾಟಾ ಎಂಟ್ರಿ, ಮನೆ ಕಂದಾಯ, ಕೃಷಿ ಭೂಮಿ ಕಂದಾಯ, ರೇಷನ್ ಕಾರ್ಡ್ ಅಪ್‌ಡೇಷನ್ನು, ರೇಷನ್ ಕಾರ್ಡ್ ಇನ್ಸ್ಪೆಕ್ಷನ್.... ಇತ್ಯಾದಿಗಳನ್ನು ಮಾಡಿಸಬಹುದು. ಅಧಿಕಾರಿಗಳಿಗೆ ಫೀಲ್ಡ್‌ವರ್ಕೂ ಕಮ್ಮಿ ಆಗುತ್ತೆ, ಸರ್ವರ್ ಡೌನ್ ಆಗುವುದೂ ಕಮ್ಮಿ ಆಗಬಹುದು.
6) PR ಗಳನ್ನು ಸಾರ್ವಜನಿಕ ಉದ್ಯೋಗ ಜಾಹೀರಾತಿನ ಪ್ರಕಟಣೆ ಕೊಟ್ಟು ನೇಮಕ ಮಾಡಿಕೊಳ್ಳಲಾಗುತ್ತಿದೆಯಾ?
ಏನೇ ಇರಲಿ,
1) ಈ ಬೆಳೆ ಸಮೀಕ್ಷೆಗಾರರಿಗೆ (PR) ಕೆಲಸ ಮುಗಿದ ತಕ್ಷಣ ಹಣ ಕೊಡಬೇಕು.
2) ಅದಕ್ಮುಂಚೆ ಅವರಿಗೆ ಸರ್ವೆ ಮಾಡಲು ಸರಿಯಾದ ಟ್ರೈನಿಂಗ್ ಕೊಡಬೇಕು.
3) ಒಬ್ಬ PR ಒಂದು ದಿನದಲ್ಲಿ ಎಷ್ಟು ಸರ್ವೆ ಮಾಡಬಹುದೋ ಅಷ್ಟನ್ನು ಮಾತ್ರ ಕಾಂಟ್ರಾಕ್ಟ್ ಕೊಡಬೇಕು.
4) ಮುಖ್ಯವಾಗಿ PR ಗಳು ತಮ್ಮ ಮನೆಯಲ್ಲೇ ಕುಳಿತು ಊರಿನ ಎಲ್ಲರ ತೋಟದ ಸರ್ವೆ ಮಾಡುವ ಆಪ್ಷನ್‌ನ್ನು ಬೆಳೆ ಸರ್ವೆ ಆ್ಯಪ್‌ನಿಂದ ತೆಗೆದು ಹಾಕಬೇಕು. ಆಗ ಸರ್ವೆ ಕರೆಕ್ಟಾಗುತ್ತೆ. ಬೆಳೆ ಸರ್ವೆಯಲ್ಲಿ ತೀರ ಒಂದು ಜಿಲ್ಲೆಯಲ್ಲಿ 8768 ಕೇಸುಗಳು ಮಿಸ್‌ಮ್ಯಾಚ್ ಆಗಲ್ಲ! (ಬರೇ ಚಿಕ್ಕಮಗಳೂರು ಡಿಸ್ಟಿಕ್‌ನಲ್ಲಿ 2023-24ರ RWBCIS ಕ್ರಾಪ್ ಸರ್ವೆಯಲ್ಲಿ 8768 ಮಿಸ್‌ಮ್ಯಾಚ್‌ಗಳಾಗಿವೆ!)
*****
ಅದೇ ರೀತಿ...
ಕಳೆದ ನವಂಬರ್-ಡಿಸೆಂಬರ್ ಮಾಹಿತಿ ಪ್ರಕಾರ ರಾಜ್ಯದಲ್ಲಿ 45,000 ಹೆಕ್ಟೇರ್ ಎಲೆ ಚುಕ್ಕಿ ಬಾದಿತ ಅಡಿಕೆ ತೋಟಗಳಿವೆ ಎಂದು ಸರ್ವೆ ರಿಪೋರ್ಟ್ ಹೇಳುತ್ತೆ. ಅದರಲ್ಲಿ 22,000 ಹೆಕ್ಟೇರ್ ಚಿಕ್ಕಮಗಳೂರು ಜಿಲ್ಲೆಯಲ್ಲಿ. ಬೆಳೆ ಸರ್ವೆ ಮಿಸ್‌ಮ್ಯಾಚಿಂಗ್ ತರಹ ಇದರಲ್ಲೂ ವ್ಯತ್ಯಾಸ ಆಗಿರಬಹುದಾ?
ಕಳೆದ ತಿಂಗಳು ಶಿವಮೊಗ್ಗದ ವಿವಿಯಲ್ಲಿ ನಡೆದ brainstorming ಸಭೆಯಲ್ಲಿ ಮಲೆನಾಡು ಪ್ರಾಂತ್ಯ ಅಡಿಕೆ ಬೆಳೆಗಾರರ ಸಂಘ ಈ ಬಗ್ಗೆ ಅನುಮಾನ ವ್ಯಕ್ತ ಪಡಿಸಿದ್ದು, ಸಭೆಯಲ್ಲಿ "ಸರ್ವೆಯಲ್ಲಿ ತಪ್ಪುಗಳಾಗಿರ ಬಹುದು" ಎಂದು ಒಪ್ಪಿ, ತೀರ್ಮಾನಿಸಿ, ಕರಾರುವಾಕ್ಕಾದ ಮರು ಸರ್ವೆಗೆ ತಿಂಗಳ ಗಡುವು ನೀಡಿ ತೋಟಗಾರಿಕೆ ಇಲಾಖೆಗೆ ಸೂಚಿಸಲಾಗಿತ್ತು. ಮರು ಸರ್ವೆ ವರದಿ ಇನ್ನೂ ಪ್ರಕಟವಾದಂತಿಲ್ಲ.
*****
ಅದೇ ರೀತಿ....
ಕಳೆದ ಸಾಲಿನಲ್ಲಿ ಭೇಟಿ ಕೊಟ್ಟ ಕೇಂದ್ರ ತಜ್ಞರ ಸಮಿತಿಯ ಸರ್ವೆ ಮತ್ತು ಶಿಫಾರಸ್ಸಿನ ವರದಿಯೂ ಇನ್ನೂ ಪ್ರಕಟ ಆಗಿಲ್ಲ.
****
ಸರ್ವೇ, ಸರ್ವೇಯರ್‌ಗೆ ಹಣ, ಸರ್ವರ್ ಡೌನ್... ಇತ್ಯಾದಿ ಸರ್ವವೂ ಸರಿಯಾಗುವುದು ಯಾವಾಗ!?
- ಅರವಿಂದ ಸಿಗದಾಳ್, ಮೇಲುಕೊಪ್ಪ.
ಸಂಘಟನಾ ಕಾರ್ಯದರ್ಶಿ,
ಮಲೆನಾಡು ಪ್ರಾಂತ್ಯ ಅಡಿಕೆ ಬೆಳೆಗಾರರ ಸಂಘ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ