ವೀರಾಪುರ ಶ್ರೀಗಳು ರಾಜ್ಯ ಧಾರ್ಮಿಕ ಪರಿಷತ್ತಿಗೆ ಆಯ್ಕೆ

Upayuktha
0


ಬೆಂಗಳೂರು: ಮುಜರಾಯಿ ಸಚಿವ ರಾಮಲಿಂಗ ರೆಡ್ಡಿಯವರು ರಾಜ್ಯ ಧಾರ್ಮಿಕ ಪರಿಷತ್‌ಗೆ ಶಿವಮೊಗ್ಗ ಜಿಲ್ಲೆಯ ವೀರಾಪುರ ಹಿರೇಮಠದ ಡಾ. ಮರುಳಸಿದ್ಧ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳನ್ನು ನೇಮಕ ಮಾಡಿದ್ದಾರೆ.


ಭಾರತೀಯ ಷೋಡಶ ಸಂಸ್ಕಾರಗಳು ವೈಚಾರಿಕ ದೃಷ್ಠಿ ಕೋನ ಪ್ರಬಂಧಕ್ಕೆ ಅಮೇರಿಕ ವಿಶ್ವವಿದ್ಯಾಲಯದಿಂದ ಮತ್ತು ಋಷಿ ಮುನಿಗಳ ಕೃಷಿ ಪ್ರಬಂಧಕ್ಕೆ ರಾಯಚೂರು ಕೃಷಿ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪಡೆದಿದ್ದಾರೆ. ಪ್ರಾಚೀನ ಅರಸರ ನ್ಯಾಯ ದಾನ ಪದ್ಧತಿ ಸಂಶೋಧನಾ ಕೃತಿಗೆ ಸರ್ಕಾರ ಗೌರವಿಸಿದೆ.


ಹಂಪಿ ಕನ್ನಡ ವಿಶ್ವವಿದ್ಯಾನಿಲಯ ಡಿ ಲಿಟ್ ಪದವಿ ನೀಡಿ ಗೌರವಿಸಿದೆ. ಜಗದೇಕ ಸುಮುಖ, ದೇವಿ ಪುರಾಣ ಮುಂತಾದ ಕೃತಿಗಳು ಇವರಿಂದ ರಚನೆಯಾಗಿವೆ. ಸಂಸ್ಕೃತ, ಕನ್ನಡ, ವೇದ, ಜ್ಯೋತಿಷ್ಯ, ಆಧ್ಯಾತ್ಮಿಕ, ಪಾಠಶಾಲೆಯನ್ನು ಶ್ರೀ ಮಠದಲ್ಲಿ ತೆರೆದು ವಿದ್ಯಾರ್ಥಿಗಳಿಗೆ ಬೋಧನೆ ಮಾಡುತ್ತಿದ್ದಾರೆ. ಇವರನ್ನು ಆಯ್ಕೆ ಮಾಡಿರುವುದು ಇವರ ವಿದ್ವತ್ತಿಗೆ ಸಂದ ಗೌರವ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top