ಉಜಿರೆ: ಧರ್ಮಸ್ಥಳದಲ್ಲಿ 25ನೆ ವರ್ಷದ ಭಜನಾ ತರಬೇತಿ ಕಮ್ಮಟ ಸೆ.28 ರಿಂದ ಅಕ್ಟೋಬರ್ 4 ರ ವರೆಗೆ ನಡೆಯಲಿದೆ. ನಾಳೆ ಗುರುವಾರ ಪೂರ್ವಾಹ್ನ 11 ಗಂಟೆಗೆ ಮಹೋತ್ಸವ ಸಭಾಭವನದಲ್ಲಿ ಮಂಡ್ಯ ಜಿಲ್ಲೆಯ ಆರತಿಪುರದ ಪೂಜ್ಯ ಸಿದ್ಧಾಂತಕೀರ್ತಿ ಸ್ವಾಮೀಜಿ ಭಜನಾ ಕಮ್ಮಟವನ್ನು ಉದ್ಘಾಟಿಸುವರು.
ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಅಧ್ಯಕ್ಷತೆ ವಹಿಸುವರು.
ಮಾಣಿಲದ ಮೋಹನದಾಸ ಸ್ವಾಮೀಜಿ ಆಶೀರ್ವಚನ ನೀಡುವರು.
ಹೇಮಾವತಿ ವೀ. ಹೆಗ್ಗಡೆ ಮತ್ತು ಡಿ. ಹರ್ಷೇಂದ್ರ ಕುಮಾರ್ ಶುಭಾಶಂಸನೆ ಮಾಡುವರು.
ಸಮಾರೋಪ ಸಮಾರಂಭ: ಅಕ್ಟೋಬರ್ 4 ರಂದು ಬುಧವಾರ ಪೂರ್ವಾಹ್ನ ಹನ್ನೊಂದು ಗಂಟೆಗೆ ಅಮೃತವರ್ಷಿಣಿ ಸಭಾಭವನದಲ್ಲಿ ನಡೆಯುವ ಸಮಾರೋಪ ಸಮಾರಂಭದಲ್ಲಿ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗ ರೆಡ್ಡಿ ಮತ್ತು ಚಲನಚಿತ್ರ ನಿರ್ದೇಶಕ ಇಳೈಯರಾಜ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಹುಬ್ಬಳ್ಳಿ ಮೂರು ಸಾವಿರ ಮಠದ ಡಾ. ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಆಶೀರ್ವಚನ ನೀಡುವರು.
ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಅಧ್ಯಕ್ಷತೆ ವಹಿಸುವರು.
ಶಾಸಕರುಗಳಾದ ಹರೀಶ್ ಪೂಂಜ, ಕೆ. ಪ್ರತಾಪಸಿಂಹ ನಾಯಕ್ ಮತ್ತು ಕೆ. ಹರೀಶ್ ಕುಮಾರ್ ಶುಭಾಶಂಸನೆ ಮಾಡುವರು.
ಬುಧವಾರ ಬೆಳಿಗ್ಯೆ ಒಂಭತ್ತು ಗಂಟೆಯಿಂದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಆಯ್ದ ಭಜನಾ ಮಂಡಳಿಗಳ ಮುನ್ನೂರು ಭಜನಾ ತಂಡಗಳ ಐದು ಸಾವಿರ ಭಜನಾಪಟುಗಳಿಂದ ಶೋಭಾಯಾತ್ರೆ ಹಾಗೂ ನೃತ್ಯ ಭಜನೆ ನಡೆಯಲಿದೆ.
ಭಜನಾ ತರಬೇತಿ ಕಮ್ಮಟದ ಸಂದರ್ಭ ಪ್ರತಿದಿನ ಸಂಜೆ ಗಂಟೆ 5.30 ರಿಂದ ಶಿಬಿರಾರ್ಥಿಗಳಿಂದ ನಗರ ಭಜನೆ ಕಾರ್ಯಕ್ರಮವಿದೆ.
ಪ್ರತಿದಿನ ರಾತ್ರಿ ಗಂಟೆ 7.30 ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳಿವೆ.
ಸಂಪನ್ಮೂಲ ವ್ಯಕ್ತಿಗಳು: ಕಾರ್ಯಾಗಾರದಲ್ಲಿ ಖ್ಯಾತ ಗಾಯಕರಾದ ಬೆಂಗಳೂರಿನ ಶಂಕರ್ ಶ್ಯಾನ್‌ಬಾಗ್ ಮತ್ತು ಎಂ.ಎಸ್. ಗಿರಿಧರ್, ಕಾಸರಗೋಡಿನ ರಾಮಕೃಷ್ಣ ಕಾಟುಕುಕ್ಕೆ, ಮಣಿಪಾಲದ ಉಷಾ ಹೆಬ್ಬಾರ್, ಉಡುಪಿಯ ಸಂಗೀತಾ ಬಾಲಚಂದ್ರ, ಧರ್ಮಸ್ಥಳದ ಮನೋರಮಾ ತೋಳ್ಪಾಡಿತ್ತಾಯ, ಸುನಿಲ್ ಶೆಟ್ಟಿ, ಸೌಮ್ಯ ಸುಭಾಷ್, ಮಂಗಲದಾಸ ಗುಲ್ವಾಡಿ, ಎಂ. ನಾಗೇಶ್ ಶೆಣೈ, ರವಿರಾಜ್ ಉಜಿರೆ, ರಮೇಶ್ ಕಲ್ಮಾಡಿ, ಶಂಕರ್ ಉಡುಪಿ, ಕುಮಾರಿ ಚೈತ್ರಾ ಮತ್ತು ಕುಮಾರಿ ಮಾಧವಿ, ಎಂ.ಎಸ್. ಹಾಗೂ ಡಾ. ಶಶಿಕಾಂತ್ ಜೈನ್ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಮಾಹಿತಿ, ಮಾರ್ಗದರ್ಶನ ನೀಡುವರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ


