ಶಿಕ್ಷಕರ ದಿನಾಚರಣೆ: ಉಡುಪಿಯಲ್ಲಿ ರಾಜ್ಯಮಟ್ಟದ 6ನೇ ಶಿಕ್ಷಕ ಸಾಹಿತಿಗಳ ಸಮ್ಮೇಳನ

Upayuktha
0

  ಮನೋಜ್ ಕಡಬರಿಗೆ ಅಮೃತ ಸಮ್ಮಾನ್ ಪ್ರಶಸ್ತಿ



ಉಡುಪಿ: ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು (ರಿ), ಕೇಂದ್ರ ಸಮಿತಿ ಹುಬ್ಬಳ್ಳಿ ಮತ್ತು ಶ್ರೀ ಜನಾರ್ದನ ಮಹಾಂಕಾಳಿ ದೇವಸ್ಥಾನ ಸಮಿತಿ, ಅಂಬಲಪಾಡಿ ಇವರ ಸಂಯುಕ್ತ ಶ್ರಯದಲ್ಲಿ ಸೆಪ್ಟಂಬರ್ 5 ಮಂಗಳವಾರದಂದು ಅಂಬಲಪಾಡಿಯಲ್ಲಿ ನಡೆದ ಶಿಕ್ಷಕ ಸಾಹಿತಿಗಳ ಆರನೇಯ ಸಮ್ಮೇಳನ ಸಂಭ್ರಮ ಕಾರ್ಯಕ್ರಮದಲ್ಲಿ ಇತರ ರಾಜ್ಯಮಟ್ಟದ ಸಾಧಕರುಗಳೊಂದಿಗೆ ಮನೋಜ್ ಕಡಬ ಅವರು *ರಾಜ್ಯಮಟ್ಟದ ಅಮೃತ ಸಮ್ಮಾನ ಗೌರವ ಪ್ರಶಸ್ತಿ* ಯನ್ನು ಸ್ವೀಕರಿಸಿದರು.


ಉಡುಪಿಯ ಶೆಫಿನ್ಸ್ ಇಂಗ್ಲಿಷ್ ಅಕಾಡೆಮಿಯ ನಿರ್ದೇಶಕ ಮತ್ತು ಸ್ಪೋಕನ್ದ ಇಂಗ್ಲಿಷ್ ತರಬೇತುದಾರರಾದ ಅವರು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ  ಸ್ಪೋಕನ್ ಇಂಗ್ಲಿಷ್ ಕಲಿಸುವ ಮೂಲಕ ಕನ್ನಡ ಮಾಧ್ಯಮ ಶಾಲೆ ಉಳಿಸಿ ಆಂದೋಲನ ವನ್ನು ಆರಂಭಿಸಿ, ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸುವ  ಕಾರ್ಯಕ್ಕಾಗಿ ಇವರನ್ನು ಸನ್ಮಾನಿಸಲಾಯಿತು. ಸಮ್ಮೇಳನದ ಸರ್ವಾಧ್ಯಕ್ಷರಾದ ನೆಂಪು ನರಸಿಂಹ ಭಟ್ಟ, ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ ಸಂಚಾಲಕ ಕೃಷ್ಣಮೂರ್ತಿ ಕುಲಕರ್ಣಿ, ಹಿರಿಯ ಪತ್ರಕರ್ತ ಡಾ.ಶೇಖರ ಅಜೆಕಾರು, ಹಿರಿಯ ಶಿಕ್ಷಕಿ ಶಾಂತಾ ಚಂದ್ರಶೇಖರ ಪುತ್ತೂರು ಮತ್ತಿತರರು ಉಪಸ್ಥಿತರಿದ್ದರು


  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top