ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್-ವಾರ್ಷಿಕ ಮಹಾಸಭೆ

Upayuktha
0

ಉಡುಪಿ:  ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ ವಾರ್ಷಿಕ ಮಹಾಸಭೆಯು ಗುಂಡಿಬೈಲಿನ ಬ್ರಾಹ್ಮಿ ಸಭಾಭವನದಲ್ಲಿ ಜರುಗಿತು. ಪರಿಷತ್ತಿನ ಅಧ್ಯಕ್ಷರಾದ ಚೈತನ್ಯ ಎಂ.ಜಿ. ಪ್ರಸ್ತಾವನೆಗೈದು ಸ್ವಾಗತಿಸಿದರು. ಗತವರ್ಷದಲ್ಲಿ ನಿಧನರಾದ ಪರಿಷತ್ತಿನ ಸದಸ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಗತ ಮಹಾಸಭೆಯ ವರದಿ ಮತ್ತು ವಾರ್ಷಿಕ ವರದಿಯನ್ನು ಪ್ರಧಾನ ಕಾರ್ಯದರ್ಶಿ ವಿವೇಕಾನಂದ ಎನ್. ಮಂಡಿಸಿದರು. ವಾರ್ಷಿಕ ಪರಿಶೋಧಿತ ಲೆಕ್ಕಪತ್ರಗಳನ್ನು ಕೋಶಾಧಿಕಾರಿ ಕುಮಾರಸ್ವಾಮಿ ಉಡುಪ ಮಂಡಿಸಿದರು.


ನಂತರ ಶಿಕ್ಷಕ ದಿನಾಚರಣೆಯ ಪ್ರಯುಕ್ತ  ಗುಂಡಿಬೈಲು ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯನಿ ಸರಸ್ವತಿ ಕೆ. ಐತಾಳ ಮತ್ತು ಇಂಜಿನಿಯರ್ಸ್ ದಿನಾಚರಣೆ ಪ್ರಯುಕ್ತ ಯುವ ಸ್ಟ್ರಕ್ಚರಲ್ ಇಂಜಿನಿಯರ್ ಯು. ರಾಜೇಂದ್ರ ಮಯ್ಯ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಹಿರಿಯ ಸಿವಿಲ್ ಇಂಜಿನಿಯರ್ ಯು.ಕೆ. ರಾಘವೇಂದ್ರ ರಾವ್ ಶ ಶುಭಾಶಂಸನೆಗೈದರು.


ಇನ್ನೋರ್ವ ಮುಖ್ಯ ಅತಿಥಿ ಆದಿಉಡುಪಿ ಪ್ರೌಢಶಾಲೆಯ ನ ನಿವ್ರತ್ತ ಮುಖ್ಯೋಪಾಧ್ಯಾಯಿನಿ ಕವಿತಾ ನಾರಾಯಣ ಮಡಿ ಅವರು ಮಾತನಾಡಿ, ಯುವ ಬ್ರಾಹ್ಮಣ ಪರಿಷತ್ ಅನೇಕ ವರ್ಷಗಳಿಂದ ಜನೋಪಯೋಗಿ ಕೆಲಸಗಳನ್ನು ಮಾಡುತ್ತಾ ಇದೀಗ ಹೆಮ್ಮರವಾಗಿ ಬೆಳೆದು ನಿಂತು ಸ್ವಂತ ಸೂರಿನಡಿಯಲ್ಲಿ ಕಾರ್ಯ ನಿರ್ವಹಿಸುತ್ತಾ ಎಲ್ಲಾ ಸಂಘಟನೆಗಳಿಗೆ ಆದರ್ಶಪ್ರಾಯವಾಗಿದೆ ಎಂದು ಅಭಿಪ್ರಾಯಪಟ್ಟರು.


ಸಮಾಜದ ಅಶಕ್ತರಿಗೆ ವಿದ್ಯಾರ್ಜನೆಗೆ ಮತ್ತು ವೈದ್ಯಕೀಯ ನೆರವಿಗಾಗಿ ರೂ. 30,000 ಸಹಾಯಧನ ವಿತರಿಸಲಾಯಿತು. ಬ್ರಾಹ್ಮೀ ಸಭಾಭವನದ ಸುಲಲಿತ ನಿರ್ವಹಣೆಗೆ 20 ಸದಸ್ಯರನ್ನು ಒಳಗೊಂಡ ಉಸ್ತುವಾರಿ ಸಮಿತಿಯನ್ನು ರಚಿಸಲಾಯಿತು. ಅರವತ್ತು ಸಂವತ್ಸರಗಳ ಸಾರ್ಥಕ, ಅನ್ಯೋನ್ಯ ದಾಂಪತ್ಯ ಜೀವನ ಪೂರೈಸಿದ ಸುಮತಿ ಭಟ್ ಮತ್ತು ಅನಂತಪದ್ಮನಾಭ ದಂಪತಿಗಳನ್ನು ಗೌರವಿಸಲಾಯಿತು.


2023- 24ನೇ ಸಾಲಿಗೆ ನೂತನ ಪದಾಧಿಕಾರಿಗಳ ಆಯ್ಕೆ ನಡೆದು ಅಧ್ಯಕ್ಷರಾಗಿ ಚಂದ್ರಕಾಂತ್ ಕೆ.ಎನ್. ಪ್ರಧಾನ ಕಾರ್ಯದರ್ಶಿಯಾಗಿ ರಾಜೇಶ್ ಭಟ್ ಪಣಿಯಾಡಿ‌ ಮತ್ತು ಕೋಶಾಧಿಕಾರಿಯಾಗಿ ಕುಮಾರಸ್ವಾಮಿ ಉಡುಪ ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.


ಆಶಾ ರಘುಪತಿ ರಾವ್, ಗಾಯತ್ರಿ ಜೆ. ಭಟ್, ರೂಪಶ್ರೀ ರಾಜೇಶ್, ವಿಷ್ಣುಪ್ರಸಾದ್ ಪಾಡಿಗಾರ್, ಕೆ ರಘುಪತಿ ರಾವ್, ಮುರಳಿದರ ತಂತ್ರಿ, ನಾರಾಯಣ ಭಟ್, ಸುನೀತಾ ಚೈತನ್ಯ, ಶಶಿಪ್ರಭಾ ವಿವೇಕಾನಂದ ಸಹಕರಿಸಿದರು. ಪ್ರಧಾನ ಕಾರ್ಯದರ್ಶಿ ವಿವೇಕಾನಂದ ಎನ್. ವಂದಿಸಿದರು.


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top