ಮಂಗಳೂರು: ತುಳುಕೂಟ (ರಿ.) ಕುಡ್ಲ ಇದರ ಬಂಗಾರ ಪರ್ಬ ಸರಣಿ -07 ರ ಕಾರ್ಯಕ್ರಮದ ಪೂರ್ವಭಾವಿ ಸಭೆಯನ್ನು ನಿಸರ್ಗ ಮನೆಯಲ್ಲಿ ನಡೆಸಲಾಯಿತು. ಈ ಬಾರಿ ವಿಶೇಷವಾಗಿ ಮಹಿಳಾ ಸಂಭ್ರಮ ನಡೆಸುವುದು. ಆ ಮೂಲಕ ತುಳು ಮಾತೃ ಭಾಷೆಯ ಕಲಾಪ್ರತಿಭೆಗಳಿಗೆ ಅವಕಾಶ ನೀಡುವುದು ಸಾಧ್ಯವಾಗುತ್ತದೆ. ಪೊಂಜೋವುಲೆ ಆಟ- ಕೂಟೊ- ನಲಿಕೆ ಎಂಬ ಹೆಸರಿನಲ್ಲಿ ಕ್ರೀಡೋತ್ಸವಗಳು, ಎದುರುಕತೆ ಗಾದೆಮಾತುಗಳು ಹಾಗೂ ನೃತ್ಯ ಕಾರ್ಯಕ್ರಮಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿವೆ. ಎಂದು ಕೂಟದ ಅಧ್ಯಕ್ಷ ಬಿ. ದಾಮೋದರ ನಿಸರ್ಗ ವಿವರಣೆ ನೀಡಿದರು.
ಮಹಿಳೆಯರಿಗಾಗಿ ಹೂವು, ಉಪ್ಪಿನ ಹರಳು, ಬಿಡಿಹೂ, ರಂಗೋಲಿ ಹುಡಿಯಿಂದ ರಂಗೋಲಿ ಸ್ಪರ್ಧೆ, ಹೂವು ಕಟ್ಟುವ ಸ್ಪರ್ಧೆ, ಹಗ್ಗ ಜಗ್ಗಾಟವೇ ಮೊದಲಾದ ಸ್ಪರ್ಧೆಗಳನ್ನು ಆಯೋಜಿಸುವುದಾಗಿ ಪ್ರಧಾನ ಕಾರ್ಯದರ್ಶಿ ವರ್ಕಾಡಿ ರವಿ ಅಲೆವೂರಾಯ ತಿಳಿಸಿದರು.
ಶ್ರೀಮತಿ ಸುಜಾತಾ ಸುವರ್ಣ, ದಿನೇಶ್ ಕುಂಪಲ, ಹೇಮಾ ನಿಸರ್ಗ, ರಮೇಶ ಕುಲಾಲ್ ಬಾಯಾರ್, ವಿಶ್ವನಾಥ್ ಉಪಸ್ಥಿತರಿದ್ದರು. ವಿವಿಧ ಸ್ಪರ್ಧೆಗಳ ಬಹುಮಾನಗಳನ್ನು ನಗರದ ಗಣ್ಯರಿಂದ ಕೊಡಿಸುವುದಾಗಿಯೂ ಅಧ್ಯಕ್ಷ್ಯರು ಹೇಳಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ