ತುಳುಕೂಟ ಕುಡ್ಲದ ಬಂಗಾರ್ ಪರ್ಬ- 7ನೇ ಕಾರ್ಯಕ್ರಮ ಸೆ.28ರಂದು

Upayuktha
0


ಮಂಗಳೂರು: ತುಳು ಕೂಟ ಕುಡ್ಲದ ಬಂಗಾರ್ ಪರ್ಬ ಸರಣಿ ವೈಭವೊ -07ನೇ ಕಾರ್ಯಕ್ರಮ ಸೆಪ್ಟೆಂಬರ್ 28ರಂದು ಗುರುವಾರ ಬೆಳಿಗ್ಗೆ 9:30ಕ್ಕೆ ಕಂಕನಾಡಿ ಗರೋಡಿಯ ಸರ್ವಮಂಗಳಾ ಸಭಾಭವನದಲ್ಲಿ ನಡೆಯಲಿದೆ. ಈ ಬಾರಿ ಬಂಗಾರ್ ಪರ್ಬ ಮಹಿಳಾ ಸಂಭ್ರಮ, ಪೊಂಜೋವುಲೆನ ಆಟ- ಕೂಟೊ- ನಲಿಕೆ ನೆರವೇರಲಿದೆ.


ಮಂಗಳೂರಿನ ಮೇಯರ್ ಸುಧೀರ್ ಶೆಟ್ಟಿ ಜೆ.ಆರ್. ಲೋಬೊ ಮೊದಲಾದ ಗಣ್ಯರು ಭಾಗವಹಿಸಲಿದ್ದಾರೆ. ಶ್ರೀಸಾಯಿ ಶಕ್ತಿ ಬಳಗದ ನಿರ್ದೇಶಕಿ ಶ್ರೀಮತಿ ಲಾವಣ್ಯಾ ವಿಶ್ವಾಸ್ ದಾಸ್, ವಿಶ್ವಾಸ್ ಕುಮಾರ್ ದಾಸ್ ದೀಪ ಬೆಳಗಿಸಲಿದ್ದಾರೆ.


ವಿಶೇಷವಾಗಿ ವಿವಿಧ ಸ್ಪರ್ಧೆಗಳೂ, ಹಗ್ಗ ಜಗ್ಗಾಟವೇ ಮೊದಲಾದ ಕ್ರೀಡೆಗಳಿವೆ. ರಸಪ್ರಶ್ನೆ, ಎದುರುಕತೆ/ ಗಾದೆಗಳ ಸಂವಾದಗಳೂ ಜರಗಲಿವೆ. ಅಪರಾಹ್ನ 1 ಗಂಟೆಗೆ ವಿವಿಧ ಗಣ್ಯರ ಉಪಸ್ಥಿತಿಯಲ್ಲಿ ಸಮಾರೋಪ ಸಮಾರಂಭ ಪ್ರಶಸ್ತಿ ವಿತರಣೆ ನಡೆಯಲಿದೆ ಎಂದು ತುಳುಕೂಟದ ಅಧ್ಯಕ್ಷ ಮರೋಳಿ ಬಿ. ದಾಮೋದರ ನಿಸರ್ಗ ಹಾಗೂ ಪ್ರ.ಕಾರ್ಯದರ್ಶಿ ವರ್ಕಾಡಿ ರವಿ ಅಲೆವೂರಾಯ ಜಂಟಿಯಾಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


إرسال تعليق

0 تعليقات
إرسال تعليق (0)
To Top