ಬಡಕುಟುಂಬಕ್ಕೆ ದಾನಿಗಳ ಸಹಾಯಹಸ್ತದ ಕೋರಿಕೆ
ಬದಿಯಡ್ಕ: ಆತ ಕೇವಲ ಮೂರೂವರೆ ವರ್ಷದ ಪುಟ್ಟ ಮಗು. ತನ್ನ ಬಾಲ್ಯದ ಆಟೋಟಗಳಲ್ಲಿ ಕಳೆಯಬೇಕಾದ ಎಳವೆ. ಮಗುವನ್ನು ಎತ್ತಿ ಆಡಿಸಿ ಸಂತೋಷಪಡಬೇಕಾದ ಹೆತ್ತವರು. ಸಹೋದರನೊಂದಿಗೆ ತುಂಟಾಟದಲ್ಲಿ ತೊಡಗಬೇಕಾದ ಮಗು. ಆದರೆ ಇದ್ಯಾವುದೂ ಆ ಕುಟುಂಬದಲ್ಲಿ ಇಲ್ಲವಾಗಿದೆ. ಪುಟ್ಟ ಮಗುವಿಗೆ ಅಂಟಿದ ವಿಚಿತ್ರ ಖಾಯಿಲೆಯು ಕುಟುಂಬದ ನೆಮ್ಮದಿಯನ್ನೇ ಕಸಿದುಕೊಂಡಿದೆ. ಕಳೆದೆರಡು ವರ್ಷಗಳಿಂದ ಹೆತ್ತವರು ಆಸ್ಪತ್ರೆಯಲ್ಲೇ ವಾಸಿಸುವಂತಾಗಿದೆ.
ಮೂಲತಃ ಕಾಸರಗೋಡು ಜಿಲ್ಲೆಯ ಪಾಲಕ್ಕುನ್ನು ನಿವಾಸಿಯಾಗಿರುವ ಕೆ.ಮೋಹನ್ ಎಂಬವರು ನೀರ್ಚಾಲು ಸಮೀಪದ ಬಿರ್ಮಿನಡ್ಕ ಎಂಬಲ್ಲಿ ವಾಸಿಸುತ್ತಿದ್ದಾರೆ. ಪತ್ನಿ ಶ್ವೇತಾ ಮತ್ತು ಇಬ್ಬರು ಮುದ್ದಾದ ಪುಟ್ಟ ಗಂಡು ಮಕ್ಕಳ ಚಿಕ್ಕ ಚೊಕ್ಕ ಸಂಸಾರ. ದೊಡ್ಡ ಮಗ ತನುಷ್‌ಗೆ 10 ವರ್ಷ ಪ್ರಾಯ. ಈತ ನೀರ್ಚಾಲು ಮಹಾಜನ ವಿದ್ಯಾಸಂಸ್ಥೆಯಲ್ಲಿ ೫ನೇ ತರಗತಿಯ ವಿದ್ಯಾರ್ಥಿ. ಮತ್ತೊಬ್ಬ ಮೂರೂವರೆ ವರ್ಷ ಪ್ರಾಯದ ಇಶಾನ್, ಈತ ಒಂದೂವರೆ ವರ್ಷ ಪ್ರಾಯದಲ್ಲಿರುವಾಗ ಅಕಸ್ಮಾತ್ ಆಗಿ ಅನಾರೋಗ್ಯ ಕಂಡು ಬಂದಿತ್ತು. ಅಪಸ್ಮಾರದ ರೀತಿಯಲ್ಲಿ ಮಗುವು ಮಾನಸಿಕ ವ್ಯಗ್ರತೆಯಿಂದ ಹೊರಳಾಡುವುದು, ಏನೇನೋ ಹೇಳುವುದು ಮಾಡುತ್ತಿತ್ತು. ಆತನನ್ನು ಹಿಡಿದಿಟ್ಟುಕೊಳ್ಳಲು ಇಬ್ಬರ ಸಹಾಯ ಬೇಕಿತ್ತು.
ಅನಂತರ ಶ್ವಾಸವು ನಿಂತುಹೋದ ರೀತಿಯಲ್ಲಿ ಮಗುವು ಒಂದು ವಾರದ ವರೆಗೆ ಅಪ್ರಜ್ಞಾವಸ್ಥೆಯಲ್ಲೇ ಇರುತ್ತಿತ್ತು. ಇದು ಯಾವ ರೋಗವೆಂದು ಗುರುತಿಸಲು ಸಾಧ್ಯವಾಗದೆ ಇತ್ತೀಚೆಗೆ ವೈದ್ಯ ಇದನ್ನು ಮಾಕ್ರೊ ಸೆಫಾಲಿ ರೋಗ ಎಂಬುದಾಗಿ ಹೇಳಿದ್ದರು. ಇದೊಂದು ಅಪೂರ್ವ ರೋಗವಾಗಿದ್ದು, ತಲೆಯ ಒಳಗಡೆ ಎಲುಬು ಬೆಳೆಯುವುದು ಎಂಬುದನ್ನು ಸಂಶೋಧನೆಯ ಮೂಲಕ ಕಂಡುಹಿಡಿಯಲಾಗಿದೆ. ಪ್ರಸ್ತುತ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ನೀಡಲಾಗುತ್ತಿದೆ. 6 ವರ್ಷ ತುಂಬುವ ತನಕ ಚಿಕಿತ್ಸೆ ಮುಂದುವರಿಸಬೇಕಾಗಬಹುದು ಎಂದು ತಜ್ಞ ವೈದ್ಯರ ತಂಡ ತಿಳಿಸಿದೆ.
ಪ್ರಸ್ತುತ ತಿಂಗಳಿಗೆ 30-40 ಸಾವಿರದಷ್ಟು ಖರ್ಚಾಗುತ್ತಿದೆ. ಪುಟ್ಟ ಮಗು ಇಶಾನ್‌ನ ಚಿಕಿತ್ಸೆಗಾಗಿ ಈ ಬಡ ಕುಟುಂಬವು ಸಮಾಜದ ಉದಾರ ದಾನಿಗಳ ಸಹಾಯವನ್ನು ಅಪೇಕ್ಷಿಸಿರುತ್ತಾರೆ. ಒಂದು ಪುಟ್ಟ ಮಗುವಿನ ಜೀವವನ್ನು ಉಳಿಸಿದ ಪುಣ್ಯಕಾರ್ಯದಲ್ಲಿ ಮನುಜರೆಲ್ಲರೂ ಕೈಜೋಡಿಸಬೇಕೆಂದು ಕೇಳಿಕೊಳ್ಳಲಾಗಿದೆ. ತಮ್ಮಿಂದಾದ ಚಿಕ್ಕ ಮೊತ್ತವನ್ನಾದರೂ ನೀಡಿ ಕುಟುಂಬಕ್ಕೆ ಆಸರೆಯಾಗೋಣ.
ಸಹಾಯಧನವನ್ನು ಈ ಕೆಳಗಿನ ಬ್ಯಾಂಕ್ ಖಾತೆಗೆ ಕಳುಹಿಸಲು ಕೋರಲಾಗಿದೆ.
SBI Kasaragod Branch
Mrs: Shwetha
A/c No: 42166650458
IFSC : SBIN0006715
Mahan k. Google pay No: 8848341308
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ