ವಿದ್ಯಾಗಿರಿ: ‘ಸ್ವಯಂ ರಕ್ಷಣೆಯೇ ಅತ್ಯುತ್ತಮ ರಕ್ಷಣೆ’ ಎಂದು ಸ್ವರಕ್ಷಾ ಫಾರ್ ವುಮೆನ್ ಟ್ರಸ್ಟ್ ಸಂಸ್ಥಾಪಕ ಕಾರ್ತಿಕ್ ಎಸ್. ಕಟೀಲ್ ಹೇಳಿದರು.
ಆಳ್ವಾಸ್ ಪದವಿಪೂರ್ವ ಕಾಲೇಜಿನ ಮಹಿಳಾ ಕ್ಷೇಮಪಾಲನಾ ಸಮಿತಿ ಈಚೆಗೆ ಹಮ್ಮಿಕೊಂಡ ‘ಮಹಿಳೆಯರಿಗೆ ಸ್ವರಕ್ಷಾ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದೈಹಿಕ ಮತ್ತು ಮಾನಸಿಕ ದೌರ್ಜನ್ಯಗಳಿದ್ದು, ಶೇಕಡಾ 98.2ರಷ್ಟು ದೌರ್ಜನ್ಯಗಳು ಪರಿಚಿತರಿಂದಲೇ ನಡೆದಿವೆ. ಮೊಬೈಲ್ ಸೇರಿದಂತೆ ಯಾವುದೇ ವೈಯಕ್ತಿಕ ವಸ್ತುಗಳನ್ನು ಇತರರ ಜೊತೆ ಹಂಚಿಕೊಳ್ಳಬಾರದು ಎಂದರು.
‘ಅತಿಯಾದ ನಂಬಿಕೆ, ಅವಲಂಬನೆ, ವ್ಯಾಮೋಹಕ್ಕೆ ಒಳಗಾಗಬಾರದು. ಉಚಿತ ಮತ್ತಿತರ ಆಮಿಷದ ಸೆಳೆತಕ್ಕೂ ಒಳಗಾಗಬೇಡಿ. ವಾಹನಗಳಲ್ಲೂ ಅನಗತ್ಯ ‘ಡ್ರಾಪ್’ ನೀಡುವುದು ಅಥವಾ ಪಡೆಯುವುದು ಬೇಡ’ ಎಂದರು.
‘ಒಳ್ಳೆಯ ಮತ್ತು ಕೆಟ್ಟ ಸ್ಪರ್ಶದ ಬಗ್ಗೆ ಮಕ್ಕಳಿಗೆ ಜಾಗೃತಿ ಮೂಡಿಸಬೇಕು’ ಎಂದು ಪೋಷಕರಿಗೆ ತಿಳಿಸಿದರು.
ಕಾಲೇಜಿನ ಮಹಿಳಾ ಕ್ಷೇಮಪಾಲನಾ ಸಮಿತಿ ಸಂಯೋಜಕಿ ವಿನೆಟ್ ಚಂದನ ಮಸ್ಕರೇನಸ್, ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ರಾಘವೇಂದ್ರ ಎನ್., ವಿಜ್ಞಾನ ವಿಭಾಗ-9ರ ಸಂಯೋಜಕಿ ವಿದ್ಯಾ ಕೆ., ಕಾರ್ತಿಕ್ ಎಸ್. ಕಟೀಲ್ ಅವರ ತಾಯಿ ಶೋಭಲತಾ ಇದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ


