ಗೋವಿಂದದಾಸ ಕಾಲೇಜ್‌ : ಮಳೆನೀರು ಕೊಯ್ಲು ಕಾರ್ಯಾಗಾರ

Upayuktha
0

ಸುರತ್ಕಲ್‌:  “ಮಳೆ ನೀರು ಮನುಷ್ಯನಿಗೆ ಸಿಕ್ಕಿರುವ ಅದ್ಭುತವಾದ ವರದಾನ ಅದನ್ನು ಪೋಲಾಗದಂತೆ ಸಂಗ್ರಹಿಸುವುದು ಅಥವಾ ಬಳಸಿಕೊಳ್ಳುವುದು ನಿಜವಾದ ಜಾಣತನ. ಅಂತರ್ಜಲ ಮಟ್ಟ ಹೆಚ್ಚಿಬ್ದಾರಿಸುವ ಜವಾಯುತ ಕೈಂಕರ್ಯಕ್ಕೆ ನಾವೆಲ್ಲರು ಕೈಗೂಡಿಸಬೇಕು” ಎಂದು ಇಂಜಿನಿಯರ್ ಭರತ್‍ ಜೆ. ಹೇಳಿದರು.


ಗೋವಿಂದದಾಸ ಕಾಲೇಜು ಸುರತ್ಕಲ್‍ನ ರಾಷ್ಟ್ರೀಯ ಸೇವಾ ಯೋಜನೆ, ಆಂತರಿಕ ಗುಣಮಟ್ಟ ಖಾತರಿಕೋಶ ಹಾಗೂ ಜೆ.ಸಿ.ಐ. ಸುರತ್ಕಲ್‍ ಇದರ ಜಂಟಿ ಆಶ್ರಯದಲ್ಲಿ ಗೋವಿಂದದಾಸ ಕಾಲೇಜು ಸುರತ್ಕಲ್‍ನಲ್ಲಿ ನಡೆದ ಮಳೆನೀರು ಕೊಯ್ಲು ಕಾರ್ಯಗಾರವನ್ನು ಉದ್ದೇಶಿಸಿ ಅವರು ಮಾತನಾಡಿದರು.


ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲ ಪ್ರೊ.ಪಿ ಕೃಷ್ಣಮೂರ್ತಿ ಅವರು “ಆಧುನಿಕ ವಿಧಾನಗಳ ಮೂಲಕ ಮಳೆನೀರು ಕೊಯ್ಲು ಮಾಡುವುದರಿಂದ ಭೂಮಿಯ ಅಂತರ್ಜಲ ಮಟ್ಟವನ್ನು ಸುಲಭವಾಗಿ ಹೆಚ್ಚಿಸಿಕೊಳ್ಳಬಹುದಾಗಿದೆ” ಎಂದು ಹೇಳಿದರು.


ರಾಷ್ಟ್ರೀಯ ಸೇವಾ ಯೋಜನಾಧಿಕಾರಿಗಳಾದ ಅಕ್ಷತಾ ವಿ. ಹಾಗೂ ಡಾ. ಭಾಗ್ಯಲಕ್ಷ್ಮಿ ಎಂ, ಜೆ.ಸಿ.ಐ ಸಪ್ತಾಹದ ನಿರ್ದೇಶಕಿ ಜ್ಯೋತಿ ಪ್ರವೀಣ್ ಶೆಟ್ಟಿ, ಜೆ.ಸಿ.ಐ ತರಬೇತಿ ವಿಭಾಗದ ಮುಖ್ಯಸ್ಥೆ ಜ್ಯೋತಿ ಜಯರಾಮ್ ಶೆಟ್ಟಿ, ಜೆ.ಸಿ.ಐ ಜೊತೆ ಕಾರ್ಯದರ್ಶಿ ಸವಿತಾ ಶೆಟ್ಟಿ, ಉಪನ್ಯಾಸಕಿ ರಮಿತಾ ಉಪಸ್ಥಿತರಿದ್ದರು.


ಜೆ.ಸಿ.ಐ ಅಧ್ಯಕ್ಷ ಜಯರಾಜ್‍ ಆಚಾರ್ಯ ಸ್ವಾಗತಿಸಿ ವಿದ್ಯಾರ್ಥಿ ನಿರ್ಮಿಕಾ ವಂದಿಸಿದರು. ವಿದ್ಯಾರ್ಥಿನಿ ಹಿತಾ ಉಮೇಶ್ ಅತಿಥಿಗಳನ್ನು ಪರಿಚಯಿಸಿದರು. ಧನುಶ್ರೀ ಕಾರ್ಯಕ್ರಮ ನಿರೂಪಿಸಿದರು.


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter  

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top