ಇನ್ಸ್ಟಿಟ್ಯೂಟ್ ಆಫ್ ಏವಿಯೇಷನ್ ಸ್ಟಡೀಸ್‌ನಲ್ಲಿ ಮೆಹೆಂದಿ ಸ್ಪರ್ಧೆ

Upayuktha
0 minute read
0


ಮಂಗಳೂರು: ಇನ್‌ಸ್ಟಿಟ್ಯೂಟ್ ಆಫ್ ಏವಿಯೇಷನ್ ಸ್ಟಡೀಸ್, ಶ್ರೀನಿವಾಸ್ ವಿಶ್ವವಿದ್ಯಾಲಯವು ಇತ್ತೀಚೆಗೆ ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಮೆಹೆಂದಿ ಸ್ಪರ್ಧೆಯನ್ನು ಹಂಪನಕಟ್ಟೆಯಲ್ಲಿರುವ ಕ್ಯಾಂಪಸ್‌ನಲ್ಲಿಇತ್ತೀಚೆಗೆ ಆಯೋಜಿಸಿತ್ತು.


ಸಾಂಸ್ಕೃತಿಕ ಪರಂಪರೆ ಮತ್ತು ಕಲಾ ಪ್ರತಿಭೆಯನ್ನು ಪ್ರದರ್ಶಿಸುವ  ಆಚರಣೆ ಇದಾಗಿತ್ತು. ಸಂಕೀರ್ಣವಾದ ಮೆಹೆಂದಿ ವಿನ್ಯಾಸಗಳನ್ನು ರಚಿಸುವಲ್ಲಿ ತಮ್ಮ ಪ್ರಾವೀಣ್ಯತೆಯನ್ನು ಪ್ರದರ್ಶಿಸಲು ವಿದ್ಯಾರ್ಥಿಗಳಿಗೆ ಅವಕಾಶ ದೊರೆಯಿತು.


ಅನುಭವಿ ಕಲಾವಿದರು ಮತ್ತು ಅಧ್ಯಾಪಕರನ್ನು ಒಳಗೊಂಡಿರುವ ತೀರ್ಪುಗಾರರು ನಿಖರತೆ ಮತ್ತು ಸೃಜನಶೀಲತೆಯ ಆಧಾರದ ಮೇಲೆ ವಿಜೇತರನ್ನು ಆಯ್ಕೆ ಮಾಡಿದರು. ಸ್ಪರ್ಧೆಯು ಸಾಂಸ್ಕೃತಿಕ ವಿನಿಮಯ ಮತ್ತು ಏಕತೆಯನ್ನು ಉತ್ತೇಜಿಸಿ ವಿದ್ಯಾರ್ಥಿಗಳ ನಡುವಿನ ಅಂತರವನ್ನು ಕಡಿಮೆ ಮಾಡಿತು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top