ಶ್ರೀಕೃಷ್ಣ ನೀರಮೂಲೆ ಅವರಿಗೆ ದ.ಕ ಜಿಲ್ಲಾ ಮಟ್ಟದ ಅತ್ಯುತ್ತಮ ವಿಜ್ಞಾನ ಶಿಕ್ಷಕ ಪ್ರಶಸ್ತಿ

Upayuktha
0

ಮಂಗಳೂರು: ಮಂಗಳೂರಿನ ಗೋರಿಗುಡ್ಡದ ಕಿಟೆಲ್ ಮೆಮೊರಿಯಲ್ ಅನುದಾನಿತ ಪ್ರೌಢಶಾಲೆಯಲ್ಲಿ ಸುದೀರ್ಘ 39 ವರ್ಷಗಳ ಕಾಲ ನಿರಂತರವಾಗಿ ಪ್ರೌಢಶಾಲಾ ವಿಜ್ಞಾನ ಶಿಕ್ಷಕರಾಗಿ ಸೇವೆ ಸಲ್ಲಿಸಿರುವ ಶ್ರೀಕೃಷ್ಣ ಎನ್ ಅವರು 2023-24ನೇ ಸಾಲಿನ ದ.ಕ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.


ಸಂಸ್ಥೆಯ ಸರ್ವ ಉನ್ನತಿಗೆ ಮತ್ತು ವಿದ್ಯಾರ್ಥಿಗಳ ಬಾಳಿಗೆ ಜ್ಞಾನದ ಬೆಳಕಾಗಿ, ವಿಜ್ಞಾನ ವಿಷಯದ ಸಂಪನ್ಮೂಲ ವ್ಯಕ್ತಿ, ತನು-ಮನದ ಹೃದಯ ಶ್ರೀಮಂತಿಕೆಯುಳ್ಳ ನಗುಮೊಗದ ಸರಳ ಸಜ್ಜನಿಕೆಯ ಸಾಕಾರಮೂರ್ತಿ ಆಗಿರುವ ಅವರು, ಎಸ್.ಎಸ್.ಎಲ್. ಸಿ ವಿಜ್ಞಾನ ವಿಷಯ ಮೌಲ್ಯಮಾಪನ ಕೇಂದ್ರದಲ್ಲಿ ಆನೇಕ ಮಹತ್ತರ  ಹುದ್ದೆಗಳನ್ನು ನಿಭಾಯಿಸಿದ್ದಾರೆ. ಕಳೆದ 5 ವರ್ಷಗಳಿಂದ ಜಂಟಿ ಮುಖ್ಯ ಮೌಲ್ಯಮಾಪಕರಾಗಿ ಯಶಸ್ವಿ ಸೇವೆಯನ್ನು ಸಲ್ಲಿಸಿದ ಕೀರ್ತಿ ಅವರದ್ದು. ಈ ಸಂದರ್ಭದಲ್ಲಿ ತಮಗೆ ದ.ಕ ಜಿಲ್ಲೆಯ ಸಮಸ್ತ ವಿಜ್ಞಾನ ಶಿಕ್ಷಕರು ಶ್ರೀಕೃಷ್ಣ ನೀರಮೂಲೆ ಅವರಿಗೆ ಗೌರವಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. 


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 

إرسال تعليق

0 تعليقات
إرسال تعليق (0)
To Top