ದುಷ್ಟ ಸಂಹಾರಕ್ಕಾಗಿ ಜಗದಿ ಅವತರಿಸಿದ ಗೋವರ್ಧನ ಕೃಷ್ಣ

Upayuktha
0


ಭಾರತದಲ್ಲಿ ಆಚರಿಸುವ ಪ್ರಮುಖ ಹಬ್ಬಗಳಲ್ಲಿ ಕೃಷ್ಣ ಜನ್ಮಾಷ್ಟಮಿಯೂ ಒಂದು. ಭಾದ್ರಪದ ಕೃಷ್ಣ ಪಕ್ಷದ ಅಷ್ಟಮಿ ದಿನದಂದು ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸುತ್ತಾರೆ. ಈ ದಿನವನ್ನು ಕೃಷ್ಣನ ಹುಟ್ಟುಹಬ್ಬ ಎಂದು ಸಹ ಹೇಳುವ ವಾಡಿಕೆ ಇದೆ. ವಿಷ್ಣುವಿನ ಎಂಟನೇ ಅವತಾರವೇ ಶ್ರೀ ಕೃಷ್ಣನ ಅವತಾರ. ದುಷ್ಟ ಶಿಕ್ಷೆಗೆ ಶಿಷ್ಟ ರಕ್ಷಣೆಗಾಗಿ ಶ್ರೀ ಕೃಷ್ಣನು ಭೂಮಿಯ ಮೇಲೆ ಅವತರಿಸಿದ ಎನ್ನುವುದೇ ಪ್ರತೀತಿ.


ಮಥುರಾದ ರಾಜನಾದ ಕಂಸನು ತನ್ನ ತಂಗಿ ದೇವಕಿಯನ್ನು ವಸುದೇವನಿಗೆ ಕೊಟ್ಟು ಮದುವೆ ಮಾಡುತ್ತಾನೆ. ದೇವಕಿ ಮತ್ತು ವಸುದೇವನಿಗೆ ಜನಿಸುವ ಎಂಟನೇ ಮಗುವಿನಿಂದ ಕಂಸನ ಮರಣ ಸಂಭವಿಸುತ್ತದೆ ಎಂಬ ವಿಚಾರ ಕಂಸನಿಗೆ ತಿಳಿಯುತ್ತದೆ.


ಇದನ್ನು ತಿಳಿದ ಕಂಸನು ಕೋಪದಿಂದ ದೇವಕಿಗೆ ಜನಿಸಿದ ಶಿಶುಗಳನ್ನು ಕೊಲ್ಲುತ್ತಾ, ನಂತರ ಇವರಿಬ್ಬರನ್ನು ಸೆರೆಮನೆಯಲ್ಲಿಟ್ಟು ಬಿಡುತ್ತಾನೆ. ದೇವಕಿಯ ಗರ್ಭದಲ್ಲಿದ್ದ ಏಳನೇ ಮಗು ಬಲರಾಮನ ದೈವಿಕ ಶಕ್ತಿಯಿಂದ ರೋಹಿಣಿಯ ಗರ್ಭಕ್ಕೆ ವರ್ಗಾವಣೆಗೊಳ್ಳುತ್ತದೆ, ಎಂಟನೇ ಮಗುವಿನ ಜನನವಾದಾಗ ವಸುದೇವನು ತನ್ನ ಮಗುವನ್ನು ಗೋಕುಲದ ಮುಖ್ಯಸ್ಥ ನಂದನ ಮನೆಗೆ ಗುಟ್ಟಾಗಿ ತೆಗೆದುಕೊಂಡು ಹೋಗಿ ಅಲ್ಲಿ ನಂದ ಮತ್ತು ಯಶೋದೆಗೆ ಜನಿಸಿದ ಹೆಣ್ಣು ಮಗುವನ್ನು ಬದಲಾಯಿಸಿಕೊಂಡು ಬರುತ್ತಾನೆ. ಅಲ್ಲಿ ಯಶೋದಾ ನಂದರ ಮಡಿಲಲ್ಲಿ ಕೃಷ್ಣನು ಬೆಳೆದು ದೊಡ್ಡವನಾಗುತ್ತಾನೆ.


ಕೆಲವೊಂದು ಸ್ಥಳಗಳಲ್ಲಿ ಈ ಹಬ್ಬವನ್ನು ತುಂಬಾ ಅದ್ದೂರಿಯಿಂದ ಆಚರಿಸುವುದೂ ಇದೆ. ಕೃಷ್ಣನ ದೇವಾಲಯಗಳನ್ನು ದೀಪಗಳಿಂದ ಅಲಂಕರಿಸಿ, ಹಲವಾರು ಕಾರ್ಯಕ್ರಮಗಳನ್ನು ಆಚರಿಸುವುದು. ರಾತ್ರಿ 12 ಗಂಟೆವರೆಗೂ ಎಚ್ಚರವಿದ್ದು, ಪೂಜೆ ಪುನಸ್ಕಾರಗಳನ್ನು ಹಾಗೆಯೇ ಉಪವಾಸವನ್ನೂ ಸಹ ಮಾಡುತ್ತಾರೆ. ಕೃಷ್ಣ ಜನ್ಮಾಷ್ಟಮಿಯಂದು ಉಪವಾಸ ಮಾಡಿದರೆ, ಉಳಿದ ಉಪವಾಸಗಳ ಪ್ರಯೋಜನವನ್ನು ಪಡೆಯಬಹುದೆಂಬ   ನಂಬಿಕೆ ಹಿರಿಯರದ್ದು. ಇನ್ನು ಈ ದಿನದಂದು ಶ್ರದ್ಧೆ, ಭಕ್ತಿಯಿಂದ ಉಪವಾಸ ಮಾಡಿದರೆ, ಜೀವನದಲ್ಲಿ ಸುಖ, ಸಂತೋಷವನ್ನು ಪಡೆಯಬಹುದು ಎಂಬ ನಂಬಿಕೆ. ಅಂತೆಯೇ ದೀರ್ಘಾಯಷ್ಯವನ್ನು ಪಡೆಯುತ್ತೇವೆ ಎನ್ನುವುದು ಹಿಂದಿನವರ ವಿಚಾರವಾಗಿತ್ತು. ಬಾಲ ಕೃಷ್ಣನ ಮೂರ್ತಿಯನ್ನು ಸ್ನಾನ ಮಾಡಿಸಿ, ಅದಕ್ಕೆ ಬಟ್ಟೆ ತೊಡಿಸಿ, ತೊಟ್ಟಿಲಲ್ಲಿ ಮಲಗಿಸಲಾಗುತ್ತದೆ. ಅದಾದ ಬಳಿಕ ಭಕ್ತರು ಅನ್ನವನ್ನು, ಸಿಹಿತಿಂಡಿಯನ್ನು ತಿಂದು ಉಪವಾಸವನ್ನು ಮುಗಿಸುತ್ತಾರೆ. ಮಹಿಳೆಯರು ತಮ್ಮ ಮನೆ ಬಾಗಿಲ ಮುಂದೆ  ಸಣ್ಣ ಸಣ್ಣ ಹೆಜ್ಜೆ ಗುರುತುಗಳನ್ನು ಬಿಡಿಸುತ್ತಾರೆ. ಕಾರಣ, ಕೃಷ್ಣನು ತಮ್ಮ ಮನೆಗಳಿಗೆ ಬರುತ್ತಾನೆ ಎಂಬ ನಂಬಿಕೆ. ಕೃಷ್ಣ ಜನ್ಮಾಷ್ಟಮಿಯಂದು ಬಗೆ ಬಗೆಯ ತಿಂಡಿ, ಸ್ಪರ್ಧೆಗಳನ್ನೆಲ್ಲಾ ಆಯೋಜಿಸುತ್ತಾರೆ. ಬಹಳ ಅದ್ದೂರಿಯಾಗಿಯೂ ಈ ಒಂದು ಹಬ್ಬವನ್ನು ಆಚರಿಸಿ, ಸಡಗರದಿಂದ ದಿನ ಕಳೆಯುತ್ತಾರೆ.

      


-ಧನ್ಯಶ್ರೀ   

ದ್ವಿತೀಯ ಪತ್ರಿಕೋಧ್ಯಮ ವಿದ್ಯಾರ್ಥಿನಿ

ವಿವೇಕಾನಂದ ಕಾಲೇಜು ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ) ಪುತ್ತೂರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top