ಎಸ್.ವಿ. ಪ್ರಸಾದ್ ಅವರಿಗೆ ಡಾಕ್ಟರೇಟ್ ಪದವಿ

Upayuktha
0


ಸುಳ್ಯ: ಮೂಡುಬಿದಿರೆಯ ಯೆನೆಪೋಯ ತಾಂತ್ರಿಕ ಮಹಾವಿದ್ಯಾಲಯದ ಇಲೆಕ್ಟಾನಿಕ್ಸ್ ಮತ್ತು ಕಮ್ಯೂನಿಕೇಷನ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಎಸ್.ವಿ. ಪ್ರಸಾದ್ ಅವರು ಬೆಂಗಳೂರಿನ ರೇವಾ ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿ ಪಡೆದಿದ್ದಾರೆ.


"ಡಿಸೈನ್ ಆಂಡ್ ಅನಾಲಿಸಿಸ್ ಆಫ್ ವೇದಿಕ್ ಮಲ್ಟಿಪ್ಲಯರ್ ಫ಼ಾರ್ ಡಿಎಸ್ಪಿ ಪ್ರೊಸೆಸರ್" ಎನ್ನುವ ವಿಷಯದ ಬಗ್ಗೆ ಅವರು ಸಂಶೋಧನೆ ನಡೆಸಿ ಪ್ರಬಂಧ ಮಂಡಿಸಿದ್ದರು.


ರೇವಾ ವಿಶ್ವವಿದ್ಯಾನಿಲಯದ ಇಲೆಕ್ಟಾನಿಕ್ಸ್ ಮತ್ತು ಕಮ್ಯೂನಿಕೇಷನ್ ವಿಭಾಗದ ಪ್ರೊಫೆಸರ್ ಡಾ. ಶಶಿಕಲಾ ಜಿ ಮತ್ತು ಮಣಿಪಾಲದ ಮಣಿಪಾಲ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಬಯೋಮೆಡಿಕಲ್ ವಿಭಾಗದ ಪ್ರೊಫೆಸರ್ ಡಾ. ನಿರಂಜನ ಎಸ್ ಅವರ ಮಾರ್ಗದರ್ಶನದಲ್ಲಿ  ಅವರು ಈ ಸಂಶೋಧನೆ ನಡೆಸಿದ್ದಾರೆ.


ತಮ್ಮ ಸಂಶೋಧನೆಯ ಮೂಲಕ ಎರಡು ಪೇಟೆಂಟ್ ಹೊಂದಿರುವ ಎಸ್.ವಿ. ಪ್ರಸಾದ್ ಅವರ ಸಂಶೋಧನಾ ಲೇಖನಗಳು ಉತ್ತಮ ಸೂಚ್ಯಂಕ ಹೊಂದಿರುವ ಹಲವಾರು ಅಂತರರಾಷ್ಟ್ರೀಯ ನಿಯತಕಾಲಿಕೆಗಳಲ್ಲಿ ಪ್ರಕಟಗೊಂಡಿದೆ.


ಎಸ್. ವಿ. ಪ್ರಸಾದ್ ಅವರು  ಸುಳ್ಯ ಕೇರ್ಪಳದ ನಿವೃತ್ತ ಶಿಕ್ಷಕ ಜಿ. ಶಂಕರನಾರಾಯಣ ಮತ್ತು ಜಿ.ಎಸ್ . ವಿಜಯಲಕ್ಷ್ಮಿ ದಂಪತಿಯ ಪುತ್ರ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top