ಶ್ರೀನಿವಾಸ ವಿಶ್ವವಿದ್ಯಾಲಯದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣಾ ಜಾಗೃತಿ ಕಾರ್ಯಕ್ರಮ

Upayuktha
0

ಮಂಗಳೂರು: ಪಾಂಡೇಶ್ವರದ ಶ್ರೀನಿವಾಸ ವಿಶ್ವವಿದ್ಯಾಲಯದ ರಾಷ್ಟ್ರೀಯ ಸ್ವಯಂ ಸೇವಾ ಯೋಜನೆ ಮತ್ತು ಯುನೈಟೆಡ್ ವೇ ಮುಂಬೈ ಸಹಭಾಗಿತ್ವದಲ್ಲಿ ಪ್ಲಾಸ್ಟಿಕ್ ವೇಸ್ಟ್ ಮ್ಯಾನೇಜ್ಮೆಂಟ್ ವಿಷಯಾಧಾರಿತ ಜಾಗೃತಿ ಕಾರ್ಯಕ್ರಮ 09 ಸೆಪ್ಟೆಂಬರ್ 2023 ರಂದು ನಡೆಯಿತು.


ಯುನೈಟೆಡ್ ವೇ ಮುಂಬೈ ಸಂಸ್ಥೆಯ ಪ್ರಾಜೆಕ್ಟ್ ಲೀಡ್ ಆಂಡ್ರ್ಯೂ ಡೈಸ್ ಮತ್ತು ಯುನೈಟೆಡ್ ವೇ ಮುಂಬೈ ಸಂಸ್ಥೆಯ ಫೀಲ್ಡ್ ಆಫೀಸರ್ ಸಂದೀಪ್ ಶೆಟ್ಟಿ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಕಾರ್ಯಕ್ರಮ ನಡೆಸಿಕೊಟ್ಟರು.


ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಆಂಡ್ ಕಾಮರ್ಸ್ ಡೀನ್ ಪ್ರೊ. ವೆಂಕಟೇಶ್ ಅಮೀನ್ ಪ್ಲಾಸ್ಟಿಕ್ ತ್ಯಾಜ್ಯ ವಿಲೇವಾರಿ ಮತ್ತು ನಿರ್ವಹಣೆ ಕುರಿತು ಮಾತುಗಳನ್ನಾಡಿದರು.


ಶ್ರೀನಿವಾಸ ವಿಶ್ವವಿದ್ಯಾಲಯದ ಎನ್ ಎಸ್ ಎಸ್ ಸಂಯೋಜಕಿ ಡಾ. ಲವೀನಾ ಡಿ'ಮೆಲ್ಲೋ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ. ಶರ್ಮಿಳಾ ಶೆಟ್ಟಿ, ಪ್ರೊ. ಶಿಲ್ಪಾ ಕೆ., ಪ್ರೊ. ಯಶಸ್ವಿನಿ, ಪ್ರೊ. ಸುಶ್ಮಿತಾ, ಪ್ರೊ. ಪ್ರಜ್ನಾ, ಪ್ರೊ. ಉಷಾ, ವಿದ್ಯಾರ್ಥಿನಿ ತ್ರಿಶಾ ರೈ ಕಾರ್ಯಕ್ರಮ ನಿರೂಪಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 


Post a Comment

0 Comments
Post a Comment (0)
To Top