ಉಜಿರೆ: "ತಂತ್ರಜ್ಞಾನವು ಇಂದು ಮಾನವನ ಬದುಕಿನಲ್ಲಿ ಹಾಸುಹೊಕ್ಕಾಗಿದೆ ಮತ್ತು ಕಂಪ್ಯೂಟರ್ ಬಗ್ಗೆ ಜ್ಞಾನವಿರುವುದು ಈ ಕಾಲಘಟ್ಟದಲ್ಲಿ ಅತ್ಯಂತ ಮುಖ್ಯವಾಗಿದೆ. ಆದರೆ, ಅವುಗಳ ಬಗ್ಗೆ ಜಾಗ್ರತೆ ಇರಬೇಕು" ಎಂದು ಶ್ರೀ ಧ ಮ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಟಿ. ಎನ್ . ಕೇಶವ ನುಡಿದರು.
ಸೆಪ್ಟೆಂಬರ್ 11 ರಂದು ಶ್ರೀ ಧ ಮ ಕಾಲೇಜು, ಉಜಿರೆ ಇಲ್ಲಿಯ ಸಮ್ಯಗ್ದರ್ಶನ ಸಭಾಂಗಣದಲ್ಲಿ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಐಟಿ ಕ್ಲಬ್ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು " 40 ವರ್ಷಗಳ ಹಿಂದೆ ಕಾಲೇಜಿಗೆ ಮೊದಲ ಕಂಪ್ಯೂಟರ್ ಬಂದಾಗ ಅದು ಕೇವಲ 40 ಎಮ್ ಬಿ ಮೆಮೊರಿ ಮಾತ್ರ ಇತ್ತು. ಆದರೆ ಇಂದು ಡೇಟಾ ಸ್ಟೋರೇಜ್ ಅನ್ನುವಂಥದ್ದು ಬಹಳ ಮುಂದುವರೆದಿದೆ.ಇಂದು ನೀವು ತಂತ್ರಜ್ಞಾನ ವಿಷಯದಲ್ಲಿ ಎಷ್ಟು ಕಲಿತರು ಕಮ್ಮಿ. ಏಕೆಂದರೆ ದಿನ ಬೆಳಗಾಗುವುದರ ಒಳಗೆ ತಂತ್ರಜ್ಞಾನದಲ್ಲಿ ಹೊಸತನ ಬಂದಿರುತ್ತದೆ" ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿಭಾಗದ ಭಿತ್ತಿಪತ್ರಿಕೆಯನ್ನು ಅನಾವರಣಗೊಳಿಸಲಾಯಿತು. ಜೊತೆಗೆ ವಿದ್ಯಾರ್ಥಿ ಅನಂತ್ ರಚಿಸಿದ ವರ್ಣಚಿತ್ರವನ್ನು ವಿಭಾಗಕ್ಕೆ ಹಸ್ತಾಂತರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಬಿ. ಎ. ಕುಮಾರ್ ಹೆಗ್ಗಡೆ ಐಟಿ ಕ್ಲಬ್ ನ ವಿದ್ಯಾರ್ಥಿ ಸಂಯೋಜಕರಿಗೆ ಗುರುತಿನ ಚೀಟಿ ಮತ್ತು ಹೂವನ್ನು ನೀಡಿ ಅಭಿನಂದಿಸಿದರು. ಬಳಿಕ ಅವರು, ವಿದ್ಯಾರ್ಥಿಗಳಿಗೆ ಸಾಧಿಸಲು 3D (Discover, Determine, Dedicate) ಬಹಳ ಮುಖ್ಯ. ವಿದ್ಯಾರ್ಥಿಗಳು ಸಿಕ್ಕಿದ ಅವಕಾಶಗಳನ್ನು ಉಪಯೋಗಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಕಂಪ್ಯೂಟರ್ ಸೈನ್ಸ್ ಮುಖ್ಯಸ್ಥ ಶೈಲೇಶ್ ಕುಮಾರ್, ಐಟಿ ಕ್ಲಬ್ ನ ಉಪನ್ಯಾಸಕಿ ಸಂಯೋಜಕರಾದ ಅಕ್ಷತಾ.ಕೆ, ದಿವ್ಯಾ ಯಾದವ್, ವಿದ್ಯಾರ್ಥಿ ಪ್ರತಿನಿಧಿಗಳಾದ ಮನೀಷ್ ಕುಮಾರ್, ಬಿ. ಸತೀಶ್ ಮತ್ತು ಸಮಾರಂಭದಲ್ಲಿ ವಿಭಾಗದ ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಭವ್ಯ.ಎನ್. ಯು ಸ್ವಾಗತಿಸಿ, ವಿಭಾಗದ ಮುಖ್ಯಸ್ಥ ಶೈಲೇಶ್ ಕುಮಾರ್ ಅತಿಥಿಯನ್ನು ಪರಿಚಯಿಸಿದರು, ವಿದ್ಯಾರ್ಥಿನಿ ಚಿನ್ಮಯೀ ವಂದಿಸಿದರು. ಕುಮಾರಿ ನಾಗಶ್ರೀ ಶೆಟ್ಟಿ ನಿರೂಪಿಸಿದರು. ಕಾವ್ಯ ಮತ್ತು ಬಳಗ ಪ್ರಾರ್ಥಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ