ಕಾರವಾರ: ಶಾಸಕ ಸತೀಶ್ ಸೈಲ್ ಅವರು ಸೋಮವಾರ ನಂದನಗದ್ದಾದ ನಾಗನಾಥ ದೇವಾಲಯಕ್ಕೆ ಕುಟಂಬ ಸಮೇತರಾಗಿ ಆಗಮಿಸಿ ವಿಶೇಷ ಹರಕೆ ಪೂಜೆ ಸಲ್ಲಿಸಿದರು.
ಸತೀಶ್ ಸೈಲ್ ಅವರು ವಿಧಾನಸಭಾ ಚುನಾವಣೆಗೆ ನಿಂತಾಗ ಗುತ್ತಿಗೆದಾರ ಹಾಗೂ ಜನಶಕ್ತಿ ವೇದಿಕೆಯ ಸದಸ್ಯರೂ ಆಗಿರುವ ದೀಪಕ್ ಕೆ.ನಾಯ್ಕ ಅವರು ನಾಗನಾಥ ದೇವರಲ್ಲಿ ಹರಕೆ ಹೊತ್ತಿದ್ದರು. ಸೈಲ್ ಅವರು ಈ ಚುನಾವಣೆಯಲ್ಲಿ ಗೆದ್ದುಬಂದರೆ ಅವರನ್ನು ಕರೆತಂದು ವಿಶೇಷ ಪೂಜೆ ಕೊಡಿಸುವುದಾಗಿ ಕೇಳಿಕೊಂಡಿದ್ದರು.
ಹೀಗಾಗಿ ಶ್ರಾವಣದ ಕೊನೆಯ ಸೋಮವಾರ ಸತೀಶ್ ಸೈಲ್ ಅವರು ಕುಟುಂಬ ಸಮೇತರಾಗಿ ನಾಗನಾಥ ದೇವಸ್ಥಾನಕ್ಕೆ ಆಗಮಿಸಿ ಹರಕೆ ಪೂಜೆ ಸಲ್ಲಿಸಿದರು. ಈ ವೇಳೆ ದೀಪಕ್ ನಾಯ್ಕ ಮತ್ತು ಅವರ ಪತ್ನಿ ಹೀರಾ ನಾಯ್ಕ ಕೂಡ ಪೂಜೆಯಲ್ಲಿ ಭಾಗಿಯಾದರು.
ಜನಶಕ್ತಿ ವೇದಿಕೆಯ ಅಧ್ಯಕ್ಷ ಮಾಧವ್ ನಾಯಕ, ಪ್ರಮುಖರಾದ ರಾಮಾ ನಾಯ್ಕ, ಕಾಶೀನಾಥ್ ನಾಯ್ಕ್, ರೂಪೇಶ್ ನಾಯ್ಕ್, ಸುರೇಶ್ ನಾಯ್ಕ, ಸೂರಜ್ ಕೂರುಮಕರ್, ಅತೀಶ್ ಎನ್.ನಾಯ್ಕ, ರಾಜೇಶ ಬಾಡ್ಕರ್, ನಗರಸಭಾ ಮಾಜಿ ಸದಸ್ಯರಾದ ಅನಿಲ್ ನಾಯ್ಕ್, ಯುವರಾಜ, ಗುತ್ತಿಗೆದಾರರಾದ ಅನೀಲ ಮಾಳ್ಸೇಕರ್, ರಾಜೇಶ ನಾಯಕ ಕದ್ರಾ, ಸತೀಶ ವಿ.ನಾಯ್ಕ್, ಕೆಡಿಎ ಮಾಜಿ ಅಧ್ಯಕ್ಷ ಅಶೋಕ ನಾಯ್ಕ ಮುಂತಾದವರು ಇದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ