ಭಾಷೆಯು ಸಂಸ್ಕೃತಿಯದ್ಯೋತ್ಯಕ : ಪ್ರೊ. ಶ್ರೀಪತಿ ಕಲ್ಲೂರಾಯ

Upayuktha
0


ಪುತ್ತೂರು: ಭಾವನೆಗಳನ್ನು ಅಭಿವ್ಯಕ್ತಗೊಳಿಸಲು ಭಾಷೆಯು ಮುಖ್ಯ. ಭಾಷೆ ಎಂಬುವುದುಒಂದು ವಿಜ್ಞಾನ. ಅದರಲ್ಲಿರುವ ಅನೇಕ ವಿಸ್ಮಯಗಳನ್ನು ನಾವು ಕಲಿಯಬೇಕು. ಭಾರತ ಅನೇಕ ಭಾಷೆಗಳಿಂದ ಕೂಡಿರುವುದು ಮಾತ್ರವಲ್ಲದೆ ಅದರ ಹಿನ್ನಲೆಯಿಂದ ಹೆಚ್ಚು ಪ್ರಖ್ಯಾತವಾಗಿದೆ. ವಿಜ್ಞಾನದಜೊತೆಗೆ ಭಾಷೆಯುಕೂಡ ಬೆಳೆಯಬೇಕು ಎಂದು ವಿವೇಕಾನಂದ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಪ್ರೊ. ಶ್ರೀಪತಿ ಕಲ್ಲೂರಾಯ ಹೇಳಿದರು.


ಇವರು ಪುತ್ತೂರಿನ ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ(ಸ್ವಾಯತ್ತ)ಹಿಂದಿ ಸಂಘ ಹಾಗೂ ಐಕ್ಯೂಏಸಿ ಜಂಟಿ ಸಹಯೋಗದಲ್ಲಿ  ಆಯೋಜಿಸಿದ  ಹಿಂದಿ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷರಾಗಿ ಮಾತನಾಡಿದರು.


ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಷ್ಣುಗಣಪತಿ ಭಟ್ ಮುಖ್ಯ ಅತಿಥಿಯಾಗಿ ಮಾತನಾಡಿ ಎಲ್ಲಾ ಭಾಷೆಗಳು ಅಗತ್ಯವಾದದ್ದು. ಹಿಂದಿ ನಮ್ಮರಾಷ್ಟ್ರ ಭಾಷೆ.ನಾವು ಎಷ್ಟು ಭಾಷೆಗಳನ್ನು ಕಲಿಯುತ್ತೇವೆಯೋ ಅಷ್ಟು ನಮ್ಮಜ್ಞಾನ ವಿಸ್ತಾರಗೊಳ್ಳುತ್ತದೆ.ನಾವು ನಮ್ಮರಾಷ್ಟ್ರ ಭಾಷೆಯನ್ನು ಪ್ರೀತಿಸೋಣ, ಬೆಳೆಸೋಣ ಎಂದು ಹೇಳಿದರು.


ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.


ವೇದಿಕೆಯಲ್ಲಿ ಹಿಂದಿ ವಿಭಾಗದ ಮುಖ್ಯಸ್ಥೆ ಹಾಗೂ ಕಲಾ ವಿಭಾಗದ ಡೀನ್‍ ಡಾ.ದುರ್ಗಾರತ್ನ, ಹಾಗೂ ಹಿಂದಿ ಭಾಷೆ ವಿಭಾಗದ ವಿದ್ಯಾರ್ಥಿಗಳಾದ  ಸ್ವಸ್ತಿಕಾ ಹಾಗೂ ಭವ್ಯ್ ಪಟೇಲ್ ಉಪಸ್ಥಿತರಿದ್ದರು.


ಕಾರ್ಯಕ್ರಮವನ್ನು ಪ್ರಥಮ ಬಿ.ಕಾಂ ವಿದ್ಯಾರ್ಥಿನಿ ಅಮೃತಾ ಸ್ವಾಗತಿಸಿ, ತೃತೀಯ ಬಿ.ಕಾಂ ವಿದ್ಯಾರ್ಥಿ ಭವ್ಯ ಪಟೀಲ್ ವಂದಿಸಿ, ದ್ವಿತೀಯ ಬಿ.ಕಾಂ ನ ವಿದ್ಯಾರ್ಥಿನಿ ವೈಷ್ಣವಿ ನಿರೂಪಿಸಿದರು. ಹಿಂದಿ ವಿಭಾಗದ ಉಪನ್ಯಾಸಕಿ ಪೂಜಾ ವೈ.ಡಿ ಹಾಗೂ ಪಾವನ ಸಹಕರಿಸಿದರು.


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top