ಕಾಟುಕುಕ್ಕೆ ಕ್ಷೇತ್ರದಲ್ಲಿ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈಗೆ ಅಭಿಮಾನಿಗಳಿಂದ ಪೌರ ಸನ್ಮಾನ

Upayuktha
0


ಪೆರ್ಲ: ಚೌಕ್ಕಾರು ಗ್ರಾಮದ ದೇವಸ್ಥಾನ ಎಂದೇ ಇತಿಹಾಸ ಪ್ರಸಿದ್ಧವಾದ ಕಾಟುಕುಕ್ಕೆ ಶ್ರೀಸುಬ್ರಾಯ ಕ್ಷೇತ್ರಕ್ಕೆ ಪುತ್ತೂರಿನ ಶಾಸಕರಾದ ಆಶೋಕ್ ಕುಮಾರ್ ರೈ ಭೇಟಿ ನೀಡಿದರು. ವಿಧಾನಸಭಾ ಚುನಾವಣಾ ಸಂದರ್ಭ ಇವರ ಗೆಲುವಿಗಾಗಿ ಅಭಿಮಾನಿಗಳು ಪ್ರಾರ್ಥಿಸಿದ್ದ ಹರಕೆ ತೀರಿಸಲು ಕಾಟುಕುಕ್ಕೆ ಕ್ಷೇತ್ರಕ್ಕೆ ಆಗಮಿಸಿದ್ದರು.


ಈ ಸಂದರ್ಭ ಕಾಟುಕುಕ್ಕೆಯ ಅಭಿಮಾನಿ ಬಳಗದ ಪರವಾಗಿ ಪೌರ ಸನ್ಮಾನ ನಡೆಸಲಾಯಿತು. ಕ್ಷೇತ್ರದ ಆಡಳಿತ ಮೊಕ್ತೇಸರ ತಾರನಾಥ ರೈ ಪಡ್ಡಂಬೈಲು, ಮಾಜಿ ಆಡಳಿತ ಮೊಕ್ತೇಸರ ನಾರಾಯಣ, ಉತ್ಸವ ಆಚರಣಾ ಸಮಿತಿ ಅಧ್ಯಕ್ಷ ಪುರುಷೋತ್ತಮ ಭಟ್ ಮಿತ್ತೂರು ಉಪಸ್ಥಿತರಿದ್ದರು. ಎಣ್ಮಕಜೆ ಗ್ರಾಮ ಪಂಚಾಯತು ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎಸ್.ಗಾಂಭೀರ್ ಸ್ವಾಗತಿಸಿ ದೀಪಕ್ ಭಂಡಾರದ ಮನೆ ವಂದಿಸಿದರು.


ಈ ಸಂದರ್ಭದಲ್ಲಿ ಕ್ಷೇತ್ರ ಅಭಿವೃದ್ಧಿ ಕಾರ್ಯಕ್ಕೆ ಕರ್ನಾಟಕ ಸರಕಾರದಿಂದ ಪೂರಕ ಯೋಜನೆಗಳನ್ನು ನೀಡಬೇಕೆಂದು ಆಗ್ರಹಿಸಿ ಕ್ಷೇತ್ರದ ಆಡಳಿತ ಮೊಕ್ತೇಸರ ತಾರನಾಥ ರೈ ಪಡ್ಡಂಬೈಲು ಹಾಗೂ ಅಡ್ಕಸ್ಥಳ -ಕಾಟುಕುಕ್ಕೆ ಮೂಲಕ ಆರ್ಲಪದವು ಪುತ್ತೂರಿಗೆ ಸರಕಾರಿ ಬಸ್ ಮಂಜೂರುಗೊಳಿಸಬೇಕೆಂದು ಆಗ್ರಹಿಸಿ ನಾಗರಿಕ ಪರವಾಗಿ ಬಿ.ಎಸ್. ಗಾಂಭೀರ್ ಶಾಸಕರಿಗೆ ಮನವಿ ಸಲ್ಲಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top