ಪುಂಜಾಲಕಟ್ಟೆ: ಪ್ರಥಮ ದರ್ಜೆ ಕಾಲೇಜು ಪುಂಜಾಲಕಟ್ಟೆ ಮತ್ತು ಸೆಕ್ರೆಡ್ ಹಾರ್ಟ್ ಕಾಲೇಜು ಮಡಂತ್ಯಾರ್ ಇಲ್ಲಿನ ಎನ್ಎಸ್ಎಸ್, ರೋವರ್ಸ್ ರೆಂಜಾರ್ಸ್ ಮತ್ತು ಭಾರತೀಯ ಯುವ ರೆಡ್ ಕ್ರಾಸ್, ಗ್ರಾಮ ಪಂಚಾಯತ್ ಮಡಂತ್ಯಾರ್ ಮತ್ತು ಮಾಲಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಇದರ ಜಂಟಿ ಆಶ್ರಯದೊಂದಿಗೆ ಶನಿವಾರ (ಸೆ.9) ಜೆಸಿಐ ಮಡಂತ್ಯಾರ್ ಇವರು ಆಯೋಜಿಸಿದ ವರ್ಣರಂಜಿತ ಜೇಸಿ ಸಪ್ತಾಹ 'ಬಾಂಧವ್ಯ 2023'ರ ಅಂಗವಾಗಿ ಬೃಹತ್ ಸ್ವಚ್ಛತಾ ಜಾಥ ಬಾಂಧವ್ಯದಿಂದ ಐಕ್ಯತೆ- ಮಾನವ ಸರಪಳಿ, ಬೀದಿನಾಟಕವನ್ನು ಹಮ್ಮಿಕೊಳ್ಳಲಾಯಿತು.
ಈ ಕಾರ್ಯಕ್ರಮವನ್ನು ಕಾಲೇಜಿನ ವಾಣಿಜ್ಯ ವಿಭಾಗದ ಅಧ್ಯಾಪಕಿ ಪ್ರೊ. ಅವಿತ ಇವರು ಬಾವುಟವನ್ನು ಹಾರಿಸುವ ಮೂಲಕ ರಸ್ತೆ ಜಾಥಕೆ ಸಾಂಕೇತಿಕವಾಗಿ ಚಾಲನೆ ನೀಡಿದರು. ಮಡಂತ್ಯಾರ್ ಬಸ್ ನಿಲ್ದಾಣದ ಆವರಣದಲ್ಲಿ ಸ.ಪ್ರ.ದ.ಕಾ. ಪುಂಜಾಲಕಟ್ಟೆ ವಿದ್ಯಾರ್ಥಿಗಳಿಂದ ಸ್ವಚ್ಛತಾ ಜಾಗೃತಿಯ ಕುರಿತು ಬೀದಿನಾಟಕದ ಪ್ರದರ್ಶನ ನೀಡಲಾಯಿತು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಮಡಂತ್ಯಾರ್ ಪಿ.ಡಿ.ಓ ಪುರುಷೋತ್ತಮ್ ಜಿ, ಜೆಸಿಐ ಅಧ್ಯಕ್ಷ ಅಶೋಕ್, ಮಾಲಾಡಿ ಗ್ರಾ.ಪಂ. ಪಿ.ಡಿ.ಓ ರಾಜಶೇಖರ ರೈ, ಮಾಲಾಡಿ ಗ್ರಾ.ಪಂ. ಉಪಾಧ್ಯಕ್ಷೆ ಶ್ರೀಮತಿ ಸೆಲಿಸ್ತಿನ್ ಡಿ'ಸೋಜ, ಜೆಸಿಐನ ಸದಸ್ಯರು, ಸೆಕ್ರೆಡ್ ಹಾರ್ಟ್ ಕಾಲೇಜ್ ಮಡಂತ್ಯಾರ್ ಹಾಗೂ ಸರಕಾರಿ ಪ್ರಥಮ ದರ್ಜೆ ಕಾಲೇಜು ಪುಂಜಾಲಕಟ್ಟೆ ಇಲ್ಲಿನ ಬೋಧಕ-ಬೋಧಕೇತರ ವೃಂದದವರು, ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ